AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಜುಕೇಷನ್ ಯುಎಸ್ಎ ಬೆಂಗಳೂರಿನ ಅಂಡರ್-ಗ್ರ್ಯಾಜುಯೇಟ್ ವರ್ಚುಯಲ್ ಶೋಕೇಸ್ ಜುಲೈ 23 ರಂದು, ಹೆಚ್ಚಿನ ವಿವರಗಳು ಇಲ್ಲಿವೆ

ಅಮೆರಿಕದಲ್ಲಿ ಪದವಿ ಕಾರ್ಯಕ್ರಮಗಳಲ್ಲಿ ಕಲಿಯಲು ಬಯಸುವ ಪ್ರೌಢಶಾಲಾ ವಿದ್ಯಾರ್ಥಿಗಳು ಇಲ್ಲಿ ನೋಂದಾಯಿಸಿಕೊಳ್ಳಬಹುದು: bit.ly/UG21Oth. ಈ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಲಾಗುವುದಿಲ್ಲ ಹಾಗಾಗಿ ಕಾರ್ಯಕ್ರಮ ಮುಗಿದ ಬಳಿಕ ವೀಕ್ಷಿಸಲು ಲಭ್ಯವಿರುವುದಿಲ್ಲ.

ಎಜುಕೇಷನ್ ಯುಎಸ್ಎ ಬೆಂಗಳೂರಿನ ಅಂಡರ್-ಗ್ರ್ಯಾಜುಯೇಟ್ ವರ್ಚುಯಲ್ ಶೋಕೇಸ್ ಜುಲೈ 23 ರಂದು, ಹೆಚ್ಚಿನ ವಿವರಗಳು ಇಲ್ಲಿವೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jul 16, 2021 | 6:38 PM

Share

ಬೆಂಗಳೂರು: ಯಷ್ನಾ ಟ್ರಸ್ಟ್-ಎಜುಕೇಷನ್ ಯುಎಸ್ಎ ಬೆಂಗಳೂರು ಸಂಸ್ಥೆಯು ಅಂಡರ್‌ ಗ್ರಾಜುಯೇಟ್ ವರ್ಚುಯಲ್ ಶೋಕೇಸ್ ಅನ್ನು ಶುಕ್ರವಾರ ಜುಲೈ 23 ರಂದು ಆಯೋಜಿಸಲಿದ್ದು, ಅಮೆರಿಕದ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳೊಂದಿಗೆ ನೇರವಾಗಿ ಸಂವಹನ ನಡೆಸುವ ಮತ್ತು ಎಜುಕೇಷನ್ ಯುಎಸ್ಎ ಸಲಹೆಗಾರರೊಂದಿಗೆ ಅಮೆರಿಕದಲ್ಲಿ ಲಭ್ಯವಿರುವ ಶೈಕ್ಷಣಿಕ ಅವಕಾಶಗಳ ಬಗ್ಗೆ ತಮ್ಮ ಮನೆಯ ಸುರಕ್ಷತೆ ಮತ್ತು ಸೌಖ್ಯದಲ್ಲಿಯೇ ಅರ್ಥಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಅಮೆರಿಕಾದ ಹೆಸರಾಂತ ಶಿಕ್ಷಣ ಸಂಸ್ಥೆಗಳಾದ ಯೂನಿವರ್ಸಿಟಿ ಆಫ್ ರೊಚೆಸ್ಟರ್, ಇಂಡಿಯಾನಾ ಯೂನಿವರ್ಸಿಟಿ-ಪರ್ಡ್ಯೂ ಯೂನಿವರ್ಸಿಟಿ ಇಂಡಿಯಾನಾಪೊಲಿಸ್, ಗ್ರಿನ್ನೆಲ್ ಕಾಲೇಜ್, ಮಿಷಿಗನ್ ಸ್ಟೇಟ್ ಯೂನಿವರ್ಸಿಟಿ, ಯೂನಿವರ್ಸಿಟಿ ಆಫ್ ವಿಸ್ಕೋನ್ಸಿನ್-ಮ್ಯಾಡಿಸನ್, ಸ್ವಾಥ್ಮೋರ್ ಕಾಲೇಜ್, ಯೂನಿವರ್ಸಿಟಿ ಆಫ್ ವಾಷಿಂಗ್ಟನ್, ಸಿಯಾಟಲ್ ಅಂಡ್ ಫ್ಲೋರಿಡಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಮತ್ತು ಪೋಷಕರು ಶೈಕ್ಷಣಿಕ ಕಾರ್ಯಕ್ರಮಗಳು, ಕ್ಯಾಂಪಸ್ ಜೀವನ, ಹಣಕಾಸು ನೆರವಿನ ಆಯ್ಕೆಗಳು, ಅರ್ಜಿ ಪ್ರಕ್ರಿಯೆಗಳು ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರತಿಕ್ರಿಯೆಯಾಗಿ ಅಮೆರಿಕಾದ ವಿಶ್ವವಿದ್ಯಾಲಯಗಳಲ್ಲಿನ ಸುರಕ್ಷತೆಯ ಮುನ್ನೆಚ್ಚರಿಕೆಗಳ ಕುರಿತು ಮೌಲ್ಯಯುತ ಮಾಹಿತಿ ಪಡೆಯಬಹುದು.

ಚೆನ್ನೆನ ಅಮೆರಿಕದ ದೂತಾವಾಸ ಕಚೇರಿಯ ಪಬ್ಲಿಕ್ ಅಫೇರ್ಸ್ ಆಫೀಸರ್ ಆನ್‌ ಲೀ ಶೇಷಾದ್ರಿ, ‘ಅಮೆರಿಕದಲ್ಲಿನ ಪದವಿಪೂರ್ವ ಅವಕಾಶಗಳು ವಿಶ್ವದಲ್ಲಿಯೇ ಸರಿಸಾಟಿ ಇಲ್ಲದಿರುವಂಥವು. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಅನುಕೂಲಕರ ಪಠ್ಯಕ್ರಮ, ಚಿಕ್ಕ ಗಾತ್ರದ ತರಗತಿಗಳು, ವಿಶಿಷ್ಟ ಸಂಶೋಧನೆಗೆ ಅವಕಾಶಗಳು, ಸುಂದರ ಅತ್ಯಾಧುನಿಕ ಸೌಲಭ್ಯಗಳು ಮತ್ತು ವೈವಿಧ್ಯಮಯ ವಿದ್ಯಾರ್ಥಿ ಸಂಘಟನೆಗಳನ್ನು ಹೊಂದಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುಲು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ,’ ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ಪದವಿ ಕಾರ್ಯಕ್ರಮಗಳಲ್ಲಿ ಕಲಿಯಲು ಬಯಸುವ ಪ್ರೌಢಶಾಲಾ ವಿದ್ಯಾರ್ಥಿಗಳು ಇಲ್ಲಿ ನೋಂದಾಯಿಸಿಕೊಳ್ಳಬಹುದು: bit.ly/UG21Oth. ಈ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಲಾಗುವುದಿಲ್ಲ ಹಾಗಾಗಿ ಕಾರ್ಯಕ್ರಮ ಮುಗಿದ ಬಳಿಕ ವೀಕ್ಷಿಸಲು ಲಭ್ಯವಿರುವುದಿಲ್ಲ.

ಈ ಕಾರ್ಯಕ್ರಮದ ಬಗ್ಗೆ ಅಥವಾ ಅಮೆರಿಕದಲ್ಲಿ ಉನ್ನತ ಶಿಕ್ಷಣದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 98800-41115(ವಾಟ್ಸಾಪ್ನಲ್ಲಿ) ಸಂಪರ್ಕಿಸಬಹುದು ಅಥವಾ edusa@yashnatrust.org ಇಮೇಲ್ ಮಾಡಬಹುದು.

ಎಜುಕೇಷನ್ ಯುಎಸ್ಎ ಮತ್ತು ಯಷ್ನ ಟ್ರಸ್ಟ್ ಕುರಿತು

ಎಜುಕೇಷನ್ ಯುಎಸ್ಎ(https://educationusa.state.gov) ಅಮೆರಿಕದ ವಿದೇಶಾಂಗ ಇಲಾಖೆಯ ಭಾಗವಾಗಿದ್ದು 425 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿದ್ಯಾರ್ಥಿ ಸಲಹಾ ಕೇಂದ್ರಗಳನ್ನು 170ಕ್ಕೂ ಹೆಚ್ಚು ದೇಶಗಳಲ್ಲಿ ಹೊಂದಿದೆ. ಈ ಜಾಲವು ವಿಶ್ವದಾದ್ಯಂತ ವಿದ್ಯಾರ್ಥಿಗಳಿಗೆ ನಿಖರ, ಸಮಗ್ರ ಮತ್ತು ಪ್ರಸ್ತುತ ಮಾಹಿತಿಯನ್ನು ಅಮೆರಿಕದ ಉನ್ನತ ಶಿಕ್ಷಣದ ಕುರಿತು ನೀಡುವ ಮೂಲಕ ಅಮೆರಿಕದಲ್ಲಿ ಮಾನ್ಯತೆ ಪಡೆದ ಪೋಸ್ಟ್ ಸೆಕೆಂಡರಿ ಶಿಕ್ಷಣ ಸಂಸ್ಥೆಗಳಲ್ಲಿ ಅವಕಾಶಗಳನ್ನು ಉತ್ತೇಜಿಸುತ್ತದೆ.

ಯಷ್ನ ಟ್ರಸ್ಟ್-ಎಜುಕೇಷನ್ ಯುಎಸ್ಎ ಬೆಂಗಳೂರು(https://www.yashnatrust.org/) ಭಾರತದ ಕರ್ನಾಟಕದಲ್ಲಿ ಶಿಕ್ಷಣ-ಸಲಹೆಯನ್ನು ನೀಡುವ ಏಕೈಕ ಅಧಿಕೃತ ಯು.ಎಸ್.ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ಆಗಿದೆ.

ಇದನ್ನೂ ಓದಿ: ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ನಾಳೆಯಿಂದಲೇ ಆನ್​ಲೈನ್ ತರಗತಿಗಳು ಆರಂಭ, ವೇಳಾಪಟ್ಟಿ ಪ್ರಕಟಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು