UGC NET 2021: ಯುಜಿಸಿ ನೆಟ್ ಪರೀಕ್ಷೆಯ 2ನೇ ಹಂತದ ವೇಳಾಪಟ್ಟಿ ಬಿಡುಗಡೆ; ಪರೀಕ್ಷೆ, ದಿನಾಂಕದ ಮಾಹಿತಿ ಇಲ್ಲಿದೆ

| Updated By: shivaprasad.hs

Updated on: Dec 18, 2021 | 2:14 PM

UGC NET 2021 Phase II: ಯುಜಿಸಿ ನೆಟ್ ಪರೀಕ್ಷೆಯ ಎರಡನೇ ಹಂತದ ಕೆಲವು ಪರೀಕ್ಷೆಗಳ ದಿನಾಂಕಗಳನ್ನು ಘೋಷಿಸಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

UGC NET 2021: ಯುಜಿಸಿ ನೆಟ್ ಪರೀಕ್ಷೆಯ 2ನೇ ಹಂತದ ವೇಳಾಪಟ್ಟಿ ಬಿಡುಗಡೆ; ಪರೀಕ್ಷೆ, ದಿನಾಂಕದ ಮಾಹಿತಿ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us on

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ- ಎನ್​ಟಿಎ (NTA) ಯುಜಿಸಿ ನೆಟ್ 2021 ಪರೀಕ್ಷೆಯ ಎರಡನೇ ಹಂತದ ಕೆಲವು ವಿಷಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಡಿಸೆಂಬರ್ 2020 ಮತ್ತು ಜೂನ್ 2021 ರ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ (ನೆಟ್) ಹಂತ ಎರಡರ ಪರೀಕ್ಷೆಗಳು 2021ರ  ಡಿಸೆಂಬರ್ 24 ರಿಂದ ಡಿಸೆಂಬರ್ 27 ರವರೆಗೆ ನಡೆಯಲಿವೆ ಎಂದು ಅದು ಘೋಷಿಸಿದೆ. ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್ ಆದ ugcnet.nta.nic.in ನಲ್ಲಿ ಯುಜಿಸಿ ನೆಟ್​ನ (UGC NET 2021) ಸಂಪೂರ್ಣ ವೇಳಾಪಟ್ಟಿಯನ್ನು ಪರಿಶೀಲಿಸಬಹುದು.

ಅಧಿಕೃತ ಸೂಚನೆಯ ಪ್ರಕಾರ, ಹಂತ ಎರಡರ ಐದು ವಿಷಯಗಳಾದ ಕನ್ನಡ, ಬಂಗಾಳಿ, ಗೃಹ ವಿಜ್ಞಾನ, ಹಿಂದಿ ಮತ್ತು ಸಂಸ್ಕೃತಗಳಿಗೆ ದಿನಾಂಕವಾರು ಮತ್ತು ಶಿಫ್ಟ್​ವಾರು ಡಿಸೆಂಬರ್ 24, 26 ಮತ್ತು 27, 2021 ರಂದು ಪರೀಕ್ಷೆ ನಡೆಸಲಾಗುವುದು. ಪರೀಕ್ಷೆಯನ್ನು ಎರಡು ಪಾಳಿಗಳಲ್ಲಿ ನಡೆಸಲಾಗುತ್ತಿದ್ದು, ಮೊದಲನೆಯ ಶಿಫ್ಟ್​ನಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಎರಡನೆಯ ಶಿಫ್ಟ್​ನಲ್ಲಿ ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಯ ಅವಧಿಯು 180 ನಿಮಿಷಗಳವರೆಗೆ ಇರಲಿದ್ದು, ಪೇಪರ್ 1 ಮತ್ತು ಪೇಪರ್ 2ರ ನಡುವೆ ಯಾವುದೇ ವಿರಾಮಗಳಿರುವುದಿಲ್ಲ.

ಇದಲ್ಲದೆ, ಯುಜಿಸಿ ನೆಟ್​ನ ಇನ್ನೂ ಹಲವು ವಿಷಯಗಳಿಗೆ ಪರೀಕ್ಷೆಗಳು ನಡೆಯಬೇಕಿದೆ. ಅವುಗಳ ದಿನಾಂಕವನ್ನು ಸದ್ಯದಲ್ಲೇ ತಿಳಿಸುವುದಾಗಿ ಎನ್​ಟಿಎ ತಿಳಿಸಿದೆ. ಹಂತ ಎರಡರ ಉಳಿದ 2 ವಿಷಯಗಳಾದ ಭೂಗೋಳಶಾಸ್ತ್ರ ಮತ್ತು ಸಮಾಜಶಾಸ್ತ್ರ ಮತ್ತು ಹಂತ 1 ರ ನಾಲ್ಕು ವಿಷಯಗಳಾದ ಸಾಮಾಜಿಕ ಕೆಲಸ, ಒಡಿಯಾ, ತೆಲುಗು ಮತ್ತು ಕಾರ್ಮಿಕ ಕಲ್ಯಾಣ ಹಾಗೂ ಜವಾದ್ ಚಂಡಮಾರುತದಿಂದ ಮುಂದೂಡಲ್ಪಟ್ಟ ವಿಷಯಗಳ ಪರೀಕ್ಷಾ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಘೋಷಿಸಲಾಗಿದೆ.

ಯುಜಿಸಿ ನೆಟ್ ಪರೀಕ್ಷೆಯ ಅಡ್ಮಿಟ್ ಕಾರ್ಡ್​​ ಅನ್ನು ಪರೀಕ್ಷಾ ಮಂಡಳಿಯು ಸಮಯಕ್ಕೆ ತಕ್ಕಂತೆ ಬಹಿರಂಗಪಡಿಸಲಿದೆ. ಯುಜಿಸಿ ನೆಟ್​ನ ಅಧಿಕೃತ ವೆಬ್​ಸೈಟ್ ಮೂಲಕ ಅಭ್ಯರ್ಥಿಗಳು ಹಾಲ್​ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಇದನ್ನೂ ಓದಿ:

ಐಎಎಸ್ ಅಧಿಕಾರಿಗಳನ್ನು ಹುಟ್ಟುಹಾಕುವಲ್ಲಿ ಯಾವ ರಾಜ್ಯಗಳಿಗೆ ಎಷ್ಟನೇ ಸ್ಥಾನ? ಕುತೂಹಲಕಾರಿ ಅಂಕಿಅಂಶ ಇಲ್ಲಿದೆ

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮತ್ತೊಂದು ಎಡವಟ್ಟು – ಪರಿಶಿಷ್ಟ ಜಾತಿಗೆ ಮೀಸಲಿದ್ದ ಸೀಟು ಬೇರೆಯವರ ಪಾಲು