ಎನ್ಇಪಿ-2020 ಪಠ್ಯಕ್ರಮ ಪುಸ್ತಕ ಬಿಡುಗಡೆ; ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆದು ಅಭಿವೃದ್ಧಿ ಸಾಧಿಸಬೇಕು -ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

| Updated By: ಆಯೇಷಾ ಬಾನು

Updated on: Apr 29, 2022 | 12:45 PM

ಕೆಲ‌ ತಿಂಗಳಲ್ಲಿ NEP ವಿದ್ಯಾರ್ಥಿಗಳಿಗೆ ಸಿಗಲಿದೆ. ಜಪಾನ್, ಜರ್ಮನಿ ಸೂಪರ್ ಪವರ್ ಆಗಿದೆ. ಆದ್ರೆ ಅವ್ರು ಇಂಗ್ಲೀಷ್ ಮೇಲೆ ಅವಲಂಬಿಸಿರಲಿಲ್ಲ. ಅವರು‌ ಮಾತೃ ಭಾಷೆಯನ್ನ ಬಳಸಿ‌ ಮುಂದೆ ಬಂದರು ನಮ್ಮಲ್ಲೂ ಹೀಗೆ ಆಗಬೇಕಿದೆ.

ಎನ್ಇಪಿ-2020 ಪಠ್ಯಕ್ರಮ ಪುಸ್ತಕ ಬಿಡುಗಡೆ; ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆದು ಅಭಿವೃದ್ಧಿ ಸಾಧಿಸಬೇಕು -ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್
ಧರ್ಮೇಂದ್ರ ಪ್ರಧಾನ್
Follow us on

ಬೆಂಗಳೂರು: ಧರ್ಮೇಂದ್ರ ಪ್ರಧಾನ್ರಿಂದ ಎನ್ಇಪಿ-2020 ಪಠ್ಯಕ್ರಮ ಚೌಕಟ್ ದಾಖಲೆ ಪುಸ್ತಕ ಬಿಡುಗಡೆ ಮಾಡಲಾಗಿದೆ. ಕೇಂದ್ರ ಶಿಕ್ಷಣ & ಕೌಶಲ್ಯಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್, NEP-2020 ಪಠ್ಯಕ್ರಮ ಒಳಗೊಂಡಿರುವ ದಾಖಲೆಯ ಪುಸ್ತಕ ಬಿಡುಗಡೆ ಮಾಡಿದ್ದು ಪಠ್ಯಕ್ರಮ ಅಭಿವೃದ್ಧಿಗೆ ಅನುಸರಿಸಬೇಕಾದ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಮಲ್ಲೇಶ್ವರಂನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಿಕ್ಷಣ ತಜ್ಞರು ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರು ಭಾಗಿಯಾಗಿದ್ರು. ಇವರ ಸಮ್ಮುಖದಲ್ಲಿ NEP-2020 ಪಠ್ಯಕ್ರಮ ಚೌಕಟ್ ದಾಖಲೆ ಪುಸ್ತಕ ಬಿಡುಗಡೆ ಮಾಡಲಾಯಿತು.

ದೇಶಕ್ಕೆ ಕ್ರಿಯಾತ್ಮಕ, ಅಭಿವೃದ್ಧಿ ಪರವಾದ ಶಿಕ್ಷಣ ನೀತಿ ಬೇಕಿತ್ತು. ಸಮಾಜಕ್ಕೆ ನೂತನ ಶಿಕ್ಷಣ ನೀತಿ ಬೇಕಿತ್ತು. ಇದಕ್ಕೆ ಪ್ರಧಾನಿ‌ ನರೇಂದ್ರ ಮೋದಿ ಸಹಕರಿಸಿದ್ದಾರೆ. ಈ ನೀತಿ ಜಗತ್ತನ್ನು ಬದಲಿಸಲಿದೆ. NEP ಒಂದು ಫಿಲಾಸಫಿ, ಇದು ಉತ್ತಮ ಸಮಾಜಕ್ಕೆ‌ ಮುನ್ನುಡಿ. NEP ವಿದ್ಯಾರ್ಥಿಗಳಲ್ಲಿ‌ ಸಮಾನತೆ ಬೆಳೆಸುತ್ತದೆ. ಇನ್ನು ಕೆಲ‌ ತಿಂಗಳಲ್ಲಿ NEP ವಿದ್ಯಾರ್ಥಿಗಳಿಗೆ ಸಿಗಲಿದೆ. ಜಪಾನ್, ಜರ್ಮನಿ ಸೂಪರ್ ಪವರ್ ಆಗಿದೆ. ಆದ್ರೆ ಅವ್ರು ಇಂಗ್ಲೀಷ್ ಮೇಲೆ ಅವಲಂಬಿಸಿರಲಿಲ್ಲ. ಅವರು‌ ಮಾತೃ ಭಾಷೆಯನ್ನ ಬಳಸಿ‌ ಮುಂದೆ ಬಂದರು ನಮ್ಮಲ್ಲೂ ಹೀಗೆ ಆಗಬೇಕಿದೆ. ಹಿಂದಿ, ಕನ್ನಡ ಓಡಿಸಾ ಹೀಗೆ ಮಾತೃ ಭಾಷೆಯಲ್ಲಿ ನಾವೆಲ್ಲ ಶಿಕ್ಷಣ ಪಡೆದು ಅಭಿವೃದ್ಧಿ ಸಾಧಿಸಬೇಕು ಎಂದು ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ಇದನ್ನೂ ಓದಿ: OnePlus Nord CE 2 Lite 5G: ಭಾರತದಲ್ಲಿ ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G ಫೋನ್ ಬಿಡುಗಡೆ: ಖರೀದಿಸಲು ಕ್ಯೂ ಗ್ಯಾರಂಟಿ

Literature: ನೆರೆನಾಡ ನುಡಿಯೊಳಗಾಡಿ; ಹೊಟ್ಟೆ ತುಂಬಿದಾಗ ಅಂದಿನ ಬೇಟೆಯಲ್ಲಿ ತಾಯಿ ತೋರಿಸಿದ ಜಾಣ್ಮೆ ಹೊಗಳಿದರು