Karnataka 2nd PU Exam: ಈ ವರ್ಷದ 2 ಪಿಯುಸಿ ಪರೀಕ್ಷೆಯಲ್ಲೂ ವೆಬ್ ಕಾಸ್ಟಿಂಗ್

| Updated By: ಗಂಗಾಧರ​ ಬ. ಸಾಬೋಜಿ

Updated on: Oct 30, 2024 | 9:12 AM

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್‌ಇಎಬಿ) 2025ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ತಡೆಗಟ್ಟಲು ವೆಬ್‌ಕಾಸ್ಟಿಂಗ್​ಗೆ ಮುಂದಾಗುತ್ತಿದೆ. ಕಳೆದ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡ ಈ ವ್ಯವಸ್ಥೆಯನ್ನು ಇದೀಗ ದ್ವಿತೀಯ ಪಿಯುಸಿ ಪರೀಕ್ಷೆಗೂ ಅನುಸರಿಸಲಾಗುತ್ತಿದೆ.

Karnataka 2nd PU Exam: ಈ ವರ್ಷದ 2 ಪಿಯುಸಿ ಪರೀಕ್ಷೆಯಲ್ಲೂ ವೆಬ್ ಕಾಸ್ಟಿಂಗ್
ಈ ವರ್ಷದ 2 ಪಿಯುಸಿ ಪರೀಕ್ಷೆಯಲ್ಲೂ ವೆಬ್ ಕಾಸ್ಟಿಂಗ್
Follow us on

ಬೆಂಗಳೂರು, ಅಕ್ಟೋಬರ್​ 30: ಸಾಮೂಹಿಕ ನಕಲು ತಡೆಯುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ವೆಬ್ ಕಾಸ್ಟಿಂಗ್ (webcasting) ಮೊರೆ ಹೋಗಿತ್ತು. ಇದೀಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ (ಕೆಎಸ್‌ಇಎಬಿ) ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕೂಡ ವೆಬ್‌ಕಾಸ್ಟಿಂಗ್​ಗೆ ಮುಂದಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲೂ ವೆಬ್ ಕಾಸ್ಟಿಂಗ್​​

ಸಾಮೂಹಿಕ ನಕಲು ತಡೆಯಲು ಮತ್ತು ಪಾರದರ್ಶಕತೆ ಮೂಲಕ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟನಲ್ಲಿ ಶಿಕ್ಷಣ ಇಲಾಖೆ ಕಳೆದ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವೆಬ್ ಕಾಸ್ಟಿಂಗ್​​ ಪರಿಚಯಿಸಲಾಗಿತ್ತು. ಹಾಗಾಗಿ ಮಾರ್ಚ್-ಏಪ್ರಿಲ್ 2025 ರಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕೂಡ ಅದೇ ವ್ಯವಸ್ಥೆಯನ್ನು ಅನುಸರಿಸಲಾಗುತ್ತಿದೆ.

ಇದನ್ನೂ ಓದಿ: ಘಟಕ ಪರೀಕ್ಷೆಗಳಿಗೂ ವೆಬ್ ಕಾಸ್ಟಿಂಗ್ ಅಸ್ತ್ರ ಪ್ರಯೋಗ; ಸರ್ಕಾರಿ ಶಾಲಾ ಶಿಕ್ಷಕರ ಪರದಾಟಕ್ಕೆ ಕಾರಣಾಯ್ತು ಇಲಾಖೆ ನಡೆ

2024ರ ಸಾಲಿನ 2 ಮತ್ತು 3 ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ನಾವು ಸಿಸಿಟಿವಿ ಕ್ಯಾಮೆರಾಗಳನ್ನು ಹೊಂದಿರುವ ಕಾಲೇಜುಗಳನ್ನು ಗುರುತಿಸಿದ್ದೇವೆ ಮತ್ತು ಈಗಾಗಲೇ ವೆಬ್ ಕಾಸ್ಟಿಂಗ್​ ಪರೀಕ್ಷೆ ಯಶಸ್ವಿಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ಆಗಿದೆ.

ಇನ್ನು 2025ರ ಸಾಲಿನ ಬೋರ್ಡ್ ಪರೀಕ್ಷೆಗಾಗಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾದ ಕಾಲೇಜುಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಪತ್ರ ಬರೆದಿದ್ದು, ಸಿಸಿಟಿವಿ ಕ್ಯಾಮೆರಾಗಳ ಐಪಿ ಸಂಖ್ಯೆಯನ್ನು ಆಯಾ ಜಿಲ್ಲೆಗಳ ಇಲಾಖೆಯ ಉಪ ನಿರ್ದೇಶಕರಿಗೆ ನೀಡುವಂತೆ ತಿಳಿಸಲಾಗಿದೆ. ಆ ಮೂಲಕ ಉಪ ನಿರ್ದೇಶಕರು ಮತ್ತು ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಪರೀಕ್ಷೆಯ ನೇರ ದೃಶ್ಯಾವಳಿಗಳನ್ನು ನೋಡಬಹುದಾಗಿದ್ದು, ಮತ್ತು ನಕಲು ತಡೆಯಲು ಸಹಾಯವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಕ್ರಮ ತಡೆಗೆ KEA ಎಕ್ಸಾಂನಲ್ಲಿ‌ ವೆಬ್ ಕಾಸ್ಟಿಂಗ್ ಅಳವಡಿಕೆಗೆ ಪ್ಲಾನ್

ವೆಬ್ ಕಾಸ್ಟಿಂಗ್ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಮತ್ತು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಆಯಾ ಕಾಲೇಜುಗಳ ಪ್ರಾಂಶುಪಾಲರಿಗೆ ಮಂಡಳಿ ಸೂಚನೆ ನೀಡಲಾಗಿದೆ. ಆ ಮೂಲಕ ವಿದ್ಯಾರ್ಥಿಗಳಲ್ಲಿನ  ಭಯವನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಲಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.