Assam Assembly polls: ಅಸ್ಸಾಮ್ ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮಾರನ್ನು ಪ್ರಚಾರದಲ್ಲಿ ತೊಡಗದಂತೆ ನಿಷೇಧಿಸಿದ ಚುನಾವಣಾ ಆಯೋಗ

ಹಗ್ರಾಮ ಮೊಹಿಲರಿ ಅವರಿರು ಹಿಂದೊಮ್ಮೆ ಬಿಜೆಪಿಯೊಂದಿಗೆ ಮೈತ್ರಿ ಹೊಂದಿದ್ದರು. ಆದರೆ ಪಕ್ಷವು ಕಳೆದ ಡಿಸೆಂಬರ್​ನಲ್ಲಿ ಬೊಡೊಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ ಸ್ಥಾಪಿಸಲು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಜೊತೆ ಕೈ ಜೋಡಿಸಿದ ನಂತರ ಅವರು ಕಾಂಗ್ರೆಸ್ ಪಕ್ಷದೆಡೆ ವಾಲಿದರು.

Assam Assembly polls: ಅಸ್ಸಾಮ್ ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮಾರನ್ನು ಪ್ರಚಾರದಲ್ಲಿ ತೊಡಗದಂತೆ ನಿಷೇಧಿಸಿದ ಚುನಾವಣಾ ಆಯೋಗ
ಹಿಮಂತ ಬಿಸ್ವ ಶರ್ಮಾ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Apr 02, 2021 | 11:47 PM

ನವದೆಹಲಿ/ಗುವಹಾಟಿ: ಅಸ್ಸಾಮ್​ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಪಕ್ಷ ಕೂಟದ ಭಾಗವಾಗಿರುವ ಬೊಡೊಲ್ಯಾಂಡ್ ಪೀಪಲ್ಸ್ ಪಕ್ಷದ ಧುರೀಣ ಹಗ್ರಾಮ ಮೊಹಿಲರಿ ಅವರಿಗೆ ರಾಷ್ಟ್ರೀಯ ತನಿಖಾ ದಳವನ್ನು (ಎನ್​ಐಎ) ದುರ್ಬಳಕೆ ಮಾಡಿಕೊಂಡು ಜೈಲಿಗೆ ಕಳಿಸುವುದಾಗಿ ಬಹಿರಂಗ ಬೆದರಿಕೆ ಹಾಕಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಅಸ್ಸಾಮ್​ನ ಸಚಿವ ಮತ್ತು ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮಾ ಅವರನ್ನು 48 ಗಂಟೆಗಳ ಕಾಲ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸದಂತೆ ಚುನಾವಣಾ ಆಯೋಗವು ನಿರ್ಬಂಧ ಹೇರಿದೆ.

ಅಸ್ಸಾಮ್ 2021ವಿಧಾನಸಭೆ ಚುನಾವಣೆಗೆ ಮೂರನೇ ಹಾಗೂ ಅಂತಿಮ ಸುತ್ತಿನ ಮತದಾನ ಏಪ್ರಿಲ್ 6 ರಂದು ನಡೆಯಲಿದೆ. ಅದರರ್ಥ ರಾಜ್ಯದಲ್ಲಿ ಬಿಜೆಪಿಯ ಪ್ರಮುಖ ನಾಯಕ ಮತ್ತು ಟ್ರಬಲ್​ಶೂಟರ್ ಎಂದು ಗುರುತಿಸಿಕೊಂಡಿರುವ ಜೊತೆಗೆ ತಮ್ಮ ಚಾಣಾಕ್ಷ ರಣನೀತಿಯ ಮೂಲಕ ಅಸ್ಸಾಮ್​ನಲ್ಲಿ ಪಕ್ಷ ಆಧಿಕಾರ ಉಳಿಸಿಕೊಳ್ಳಲು ಬಹು ದೊಡ್ಡ ಪಾತ್ರ ನಿರ್ವಹಿಸಲಿದ್ದಾರೆಂದು ಪರಿಗಣಿಸಲಾಗಿರುವ ಶರ್ಮಾ ಮೂರನೇ ಹಂತದ ಮತದಾನಕ್ಕೆ ಮೊದಲು ಪ್ರಚಾರದಲ್ಲಿ ಪಾಲ್ಗೊಳ್ಳುವುದು ಸಾಧ್ಯವಾಗುವುದಿಲ್ಲ.

ಮಾರ್ಚ್​ 28ರಂದು ಶರ್ಮಾ ಅವರಿಗೆ ಶೋಕಾಸ ನೋಟಿಸೊಂದನ್ನು ಜಾರಿ ಮಾಡಿದ ಚುನಾವಣಾ ಅಯೋಗವು ಅದರಲ್ಲಿ ಅವರು ಮಾಡಿದ ಭಾಷಣನ್ನು ಉಲ್ಲೇಖಿಸಿತ್ತು. ಭಾಷಣದಲ್ಲಿ ಅವರು ಅವರು ಹೀಗೆ ಹೇಳಿದ್ದರು: ….. ನಾನು ನೇರವಾಗಿ ಹೇಳುತ್ತಿದ್ದೇನೆ. ಹಗ್ರಾಮ ಮೊಹಿಲರಿ ಭಯೋತ್ಪಾದನೆ ಮಾಡಿದರೆ, ಜೈಲಿಗೆ ಹೋಗಬೇಕಾಗುತ್ತದೆ. ಅವರ ವಿರುದ್ಧ ಈಗಾಗಲೇ ಸಾಕಷ್ಟು ಪುರಾವೆ ಲಭ್ಯವಾಗಿದೆ. ಈ ಪ್ರಕರಣವನ್ನು ಎನ್​ಐಎಗೆ ವಹಿಸಲಾಗುತ್ತಿದೆ. ಕೊಕ್ರಾಜಾರ್​ನಲ್ಲಿ ಕಾರೊಂದರಲ್ಲಿ ವಶಪಡಿಸಿಕೊಳ್ಳಲಾದ ಆಯುಧಗಳ ಪ್ರಕರಣವನ್ನು ಎನ್​ಐಎಗೆ ವಹಿಸಲಾಗುತ್ತಿದೆ. ಬೊಡೊಲ್ಯಾಂಡ್ ಪ್ರಾಂತ್ಯದ ಭಾಗದಲ್ಲಿ ಉದ್ರಿಕ್ತ ವಾತಾವರಣವನ್ನು ಸೃಷ್ಟಿಸಲು ಹಗ್ರಾಮ ಸೇರಿದಂತೆ ಯಾರಿಗೂ ಬಿಡುವುದಿಲ್ಲ….

ಹಗ್ರಾಮ ಮೊಹಿಲರಿ ಅವರಿರು ಹಿಂದೊಮ್ಮೆ ಬಿಜೆಪಿಯೊಂದಿಗೆ ಮೈತ್ರಿ ಹೊಂದಿದ್ದರು. ಆದರೆ ಪಕ್ಷವು ಕಳೆದ ಡಿಸೆಂಬರ್​ನಲ್ಲಿ ಬೊಡೊಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ ಸ್ಥಾಪಿಸಲು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಜೊತೆ ಕೈ ಜೋಡಿಸಿದ ನಂತರ ಅವರು ಕಾಂಗ್ರೆಸ್ ಪಕ್ಷದೆಡೆ ವಾಲಿದರು.

126 ಸ್ಥಾನಗಳ ಅಸ್ಸಾಮ್ ವಿಧಾನಸಭೆಗೆ ಮೂರು ಹಂತಗಳಲ್ಲಿ ಮತದಾನ ನಡೆಯುತ್ತಿದ್ದು ಏಪ್ರಿಲ್ 1ರಂದು 39 ಮತಕ್ಷೇತ್ರಗಳಲ್ಲಿ ನಡೆದ 2 ನೇ ಹಂತದ ಮತದಾನದಲ್ಲಿ ಶೇಕಡಾ 77ರಷ್ಟು ಜನ ತಮ್ಮ ಹಕ್ಕನ್ನು ಚಲಾಯಿಸಿದರು. ಮಾರ್ಚ್ 27 ರಂದು 30 ಕ್ಷೇತ್ರಗಳಿಗೆ ನಡೆದ ಮೊದಲ ಹಂತ ಮತದಾನದಲ್ಲಿ ಶೇಕಡಾ 76 ರಷ್ಟು ಮತದಾರರು ವೋಟು ನೀಡಿದರು.

ಚುನಾವಣಾ ಅಯೋಗದಿಂದ ಪ್ರಚಾರ ಕಾರ್ಯದಲ್ಲಿ ತೊಡಗದಂತೆ ನಿರ್ಬಂಧಕ್ಕೊಳಗಾಗಿರುವ ಎರಡನೇ ನಾಯಕ ಶರ್ಮಾ ಆಗಿದ್ದಾರೆ. ತಮಿಳುನಾಡಿನಲ್ಲಿ ಡಿಎಮ್​ಕೆ ಪಕ್ಷದ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಎ ರಾಜಾ ಅವರನ್ನು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರ ದಿವಂಗತ ತಾಯಿ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಚುನಾವಣಾ ಪ್ರಚಾರ ಖಾರ್ಯದಲ್ಲಿ ಪಾಲ್ಗೊಳ್ಳದಂತೆ ಚುನಾವಣಾ ಆಯೋಗವು ಗುರುವಾರದಂದು ನಿರ್ಬಂಧ ಹೇರಿತ್ತು.

ಇದನ್ನೂ ಓದಿತಮಿಳುನಾಡು ಮುಖ್ಯಮಂತ್ರಿ ಇಪಿಎಸ್ ಬಗ್ಗೆ ಅವಹೇಳನಕಾರಿ ಹೇಳಿಕೆ: ಡಿಎಂಕೆ ನಾಯಕ ಎ.ರಾಜಾಗೆ 2 ದಿನ ಚುನಾವಣಾ ಪ್ರಚಾರದಿಂದ ನಿರ್ಬಂಧ

Published On - 11:45 pm, Fri, 2 April 21

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್