Maharashtra Assembly By Election 2023 Results: ಮಹಾರಾಷ್ಟ್ರದ ಕಸ್ಬಾ ಪೇಠ್‌ನಲ್ಲಿ ಕಾಂಗ್ರೆಸ್​​ಗೆ ಗೆಲುವು, ಚಿಂಚ್‌ವಾಡ್​​ನಲ್ಲಿ ಬಿಜೆಪಿ ಮುನ್ನಡೆ

Kasba Peth ಕಸ್ಬಾ ಪೇಠ್‌ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ (Assembly By Election) ಕಾಂಗ್ರೆಸ್‌ನ ರವೀಂದ್ರ ಧಂಗೇಕರ್ ಅವರು ಬಿಜೆಪಿ ಅಭ್ಯರ್ಥಿ ಹೇಮಂತ್ ರಸಾನೆ ಅವರನ್ನು 11,040 ಮತಗಳಿಂದ ಸೋಲಿಸಿದ್ದಾರೆ.

Maharashtra Assembly By Election 2023 Results: ಮಹಾರಾಷ್ಟ್ರದ ಕಸ್ಬಾ ಪೇಠ್‌ನಲ್ಲಿ ಕಾಂಗ್ರೆಸ್​​ಗೆ ಗೆಲುವು, ಚಿಂಚ್‌ವಾಡ್​​ನಲ್ಲಿ ಬಿಜೆಪಿ ಮುನ್ನಡೆ
ರವೀಂದ್ರ ಧಂಗೇಕರ್
Follow us
ರಶ್ಮಿ ಕಲ್ಲಕಟ್ಟ
|

Updated on:Mar 02, 2023 | 2:22 PM

ದೆಹಲಿ: ಮಹಾರಾಷ್ಟ್ರದ(Maharashtra) ಕಸ್ಬಾ ಪೇಠ್‌ನಲ್ಲಿ (Kasba Peth)ಇಂದು (ಗುರುವಾರ) ನಡೆದ ಉಪಚುನಾವಣೆಯಲ್ಲಿ (Assembly By Election) ಕಾಂಗ್ರೆಸ್‌ನ ರವೀಂದ್ರ ಧಂಗೇಕರ್ ಅವರು ಬಿಜೆಪಿ ಅಭ್ಯರ್ಥಿ ಹೇಮಂತ್ ರಸಾನೆ ಅವರನ್ನು 11,040 ಮತಗಳಿಂದ ಸೋಲಿಸಿದ್ದಾರೆ. 33 ವರ್ಷಗಳ ನಂತರ ಕಾಂಗ್ರೆಸ್ ಇಲ್ಲಿ ಗೆಲುವು ಸಾಧಿಸಿದೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಮತ್ತೊಂದು ಸ್ಥಾನಕ್ಕೆ ಮತ ಎಣಿಕೆ ನಡೆಯುತ್ತಿದೆ. ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಮತ್ತು ಮಾಜಿ ಎಂಎಲ್‌ಸಿ ಮೋಹನ್ ಜೋಶಿ ಅವರು ಧಂಗೇಕರ್‌ಗೆ ಗೆಲುವು ಸಾಧಿಸಿದ್ದು ತಿಳಿದ ಕೂಡಲೇ ಕಾಂಗ್ರೆಸ್ ಮತ್ತು ಮಹಾ ವಿಕಾಸ್ ಅಘಾಡಿ (ಎಂವಿಎ) ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಹೊರಗೆ ಸಂಭ್ರಮಾಚರಣೆ ನಡೆಸಿದ್ದಾರೆ.

ಹಾಲಿ ಬಿಜೆಪಿ ಶಾಸಕರಾದ ಮುಕ್ತಾ ತಿಲಕ್ (ಕಸ್ಬಾ) ಮತ್ತು ಲಕ್ಷ್ಮಣ್ ಜಗತಾಪ್ (ಚಿಂಚ್‌ವಾಡ್) ಅವರ ಮರಣದ ನಂತರ ಫೆಬ್ರವರಿ 26 ರಂದು ಮತದಾನ ನಡೆದಿದ್ದು, ಸರಾಸರಿ ಶೇಕಡಾ 50 ರಷ್ಟು ಮತದಾನವಾಗಿದೆ.ಈ ಚುನಾವಣೆಯು ಬಿಜೆಪಿ- ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಮತ್ತು ಕಾಂಗ್ರೆಸ್, ಎನ್‌ಸಿಪಿ ಮತ್ತು ಶಿವಸೇನೆಯ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಎಂವಿಎ ಮೈತ್ರಿಕೂಟದ ನಡುವಿನ ಹಣಾಹಣಿಯಾಗಿದೆ.

ಚಿಂಚ್‌ವಾಡ್‌ಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಅಶ್ವಿನಿ ಜಗತಾಪ್ 12,000 ಮತಗಳಿಂದ ಮುನ್ನಡೆಯಲ್ಲಿದ್ದರೆ, ಎನ್‌ಸಿಪಿಯ ನಾನಾ ಕೇಟ್ ಮತ್ತು ಸ್ವತಂತ್ರ ಅಭ್ಯರ್ಥಿ ರಾಹುಲ್ ಕಲಟೆ ಹಿಂದುಳಿದಿದ್ದಾರೆ.

ಇದನ್ನೂ ಓದಿ:Hekani Jakhalu: ನಾಗಾಲ್ಯಾಂಡ್​ನ ಮೊದಲ ಮಹಿಳಾ ಶಾಸಕಿಯಾಗಿ ಹೆಕಾನಿ ಜಖಾಲು ಆಯ್ಕೆ

ಚಿಂಚ್‌ವಾಡ್ ಫಲಿತಾಂಶಗಳು ಬಿಜೆಪಿಯ ನೀತಿಗಳು ಮತದಾರರಲ್ಲಿ ಉತ್ತಮವಾಗಿ ಪ್ರತಿಧ್ವನಿಸುವುದನ್ನು ಮುಂದುವರೆಸಿದೆ ಎಂದು ಸೂಚಿಸುತ್ತದೆ. ಬಿಜೆಪಿ ಮತ್ತು ಇತರ ಅಭ್ಯರ್ಥಿಗಳ ನಡುವಿನ ಮತಗಳಲ್ಲಿನ ಗಮನಾರ್ಹ ವ್ಯತ್ಯಾಸವು ಅವರ ಪ್ರಚಾರ ಮತ್ತು ನೀತಿಗಳ ಯಶಸ್ಸನ್ನು ಎತ್ತಿ ತೋರಿಸುತ್ತದೆ, ಇದು ಪ್ರದೇಶದ ಮತದಾರರ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಿದೆ. ಏತನ್ಮಧ್ಯೆ, ಬಂಡಾಯಗಾರರು ಚುನಾವಣೆಯಲ್ಲಿ ಪ್ರಭಾವ ಬೀರಬಹುದಾದರೂ, ಸ್ಥಾಪಿತ ಪಕ್ಷಗಳ ವಿರುದ್ಧ ಗಮನಾರ್ಹ ಬೆಂಬಲವನ್ನು ಗಳಿಸುವುದು ಅವರಿಗೆ ಸವಾಲಾಗಿ ಪರಿಣಮಿಸಬಹುದು ಎಂದು ಪಕ್ಷೇಚರಕ ಅಭ್ಯರ್ಥಿ ರಾಹುಲ್ ಕಲಾಟೆ ಅವರ ಕಾರ್ಯಕ್ಷಮತೆ ತೋರಿಸುತ್ತದೆ.

ಚಿಂಚ್‌ವಾಡ್ ಉಪಚುನಾವಣೆಯ 20ನೇ ಸುತ್ತು ಪೂರ್ಣಗೊಂಡಿದ್ದು, ಮತ ಗಳಿಕೆ ಹೀಗಿದೆ:

ಅಶ್ವಿನಿ ಜಗತಾಪ್ (ಬಿಜೆಪಿ)- 71,179

ನಾನಾ ಕೇಟ್ (NCP)- 61,549

ರಾಹುಲ್ ಕಲಾಟೆ (ಪಕ್ಷೇತರ) -23,255

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:19 pm, Thu, 2 March 23

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ