TN Assembly polls: ಪಳನಿಸ್ವಾಮಿ ತಾಯಿ ಬಗ್ಗೆ ಅಶ್ಲೀಲ ಪದ ಬಳಸಿದ ಡಿ ರಾಜಾ ವಿರುದ್ಧ ಕ್ರಮ ತೆಗೆದುಕೊಂಡ ಚುನಾವಣಾ ಅಯೋಗ
ಶನಿವಾರದಂದು ನಡೆದ ಒಂದು ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಪಳನಿಸ್ವಾಮಿ ಅವರ ತಾಯಿ ಕುರಿತು ರಾಜಾ ವಿವಾದಾತ್ಮಕ ಮಾತುಗಳನ್ನಾಡಿದ ನಂತರ ಮಂಗಳವಾರದಂದು ಆಯೋಗವು ಶೋಕಾಸ್ ನೋಟಿಸ್ ಜಾರಿಮಾಡಿತ್ತು.
ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಅವಾಚ್ಯ ಪಂದಗಳಿಂದ ನಿಂದಿಸಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ದ್ರಾವಿಡ ಮುನ್ನೇತ್ರ ಕಜಗಂ (ಡಿಎಮ್ಕೆ) ಪಕ್ಷದ ನಾಯಕ ಎ ರಾಜಾ ಅವರನ್ನು ಗುರುವಾರದಂದು ಭಾರತೀಯ ಚುನಾವಣಾ ಅಯೋಗವು ಎರಡು ದಿನಗಳವರಗೆ ಪ್ರಚಾರ ಕಾರ್ಯದಲ್ಲಿ ತೊಡಗದಂತೆ ನಿಷೇಧಿಸಿದೆ. ಹಾಗೆಯೇ ಡಿಎಮ್ಕೆ ಪಕ್ಷದ ಸ್ಟಾರ್ ಕ್ಯಾಂಪೇನರ್ಸ್ ಪಟ್ಟಿಯಿಂದ ಅವರ ಹೆಸರನ್ನು ತೆಗೆದುಹಾಕಿದೆ.
ಶನಿವಾರದಂದು ನಡೆದ ಒಂದು ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಪಳನಿಸ್ವಾಮಿ ಅವರ ತಾಯಿ ಕುರಿತು ರಾಜಾ ವಿವಾದಾತ್ಮಕ ಮಾತುಗಳನ್ನಾಡಿದ ನಂತರ ಮಂಗಳವಾರದಂದು ಆಯೋಗವು ಶೋಕಾಸ್ ನೋಟಿಸ್ ಜಾರಿಮಾಡಿತ್ತು. ನೋಟಿಸಿನಲ್ಲಿ ಆಯೋಗವು, ‘ಭಾಷಣದಲ್ಲಿ ನೀವು ಉಪಯೋಗಿಸಿರುವ ಪದಗಳು ಅವಾಚ್ಯ ಮತ್ತು ಆಶ್ಲೀಲ ಮಾತ್ರವಾಗಿರದೆ ಮಹಿಳೆಯರ ಮಾತೃತ್ವವನ್ನು ಅವಮಾನಿಸುವ ಪದಗಳಾಗಿವೆ. ಇದು ಚುನಾವಣೆ ನೀತಿ ಸಂಹಿತೆಯ ಗಂಭೀರ ಉಲ್ಲಂಘನೆಯಾಗಿದೆ,’ ಎಂದು ಹೇಳಿದೆ.
‘ವಿಷಯಕ್ಕೆ ಸಂಬಂಧಿಸಿದಂತೆ ಮಾರ್ಚ್ 31ರ ಸಾಯಂಕಾಲ 6 ಗಂಟೆಯೊಳಗೆ ನಿಮ್ಮ ನಿಲುವನ್ನು ಹೇಳುವ ಅವಕಾಶವನ್ನು ಆಯೋಗ ನಿಮಗೆ ಕಲ್ಪಿಸುತ್ತಿದೆ. ಅಷ್ಟರಲ್ಲಿ ನಿಮ್ಮ ಪ್ರತಿಕ್ರಿಯೆ ಸಿಗದೆ ಹೋದರೆ ಸದರಿ ವಿಷಯವನ್ನು ಇನ್ನೊಮ್ಮೆ ಉಲ್ಲೇಖಿಸದೆ ಆಯೋಗವು ಒಂದು ನಿರ್ಧಾರವನ್ನು ತೆಹೆದುಕೊಳ್ಳಲಿದೆ,’ ಎಂದು ಆಯೋಗ ತನ್ನ ನೋಟಿಸಿನಲ್ಲಿ ಹೇಳಿದೆ.
ಆಯೋಗದ ನೋಟಿಸಿಗೆ ಉತ್ತರಿಸಿರುವ ರಾಜಾ ಅವರು, ‘ಅವಾಚ್ಯ ಶಬ್ದಗಳನ್ನು ಬಳಸಿರುರುವ ಸುಳ್ಳು ಆರೋಪ ನನ್ನ ವಿರುದ್ಧ ಮಾಡಲಾಗಿದೆ,’ ಎಂದು ಹೇಳಿದ್ದಾರೆ. ತಾನು ಮಹಿಳೆಯರ ವಿಷಯದಲ್ಲಿ ಅಶ್ಲೀಲ ಪದಗಳನ್ನು ಬಳಸಿಲ್ಲ ಮತ್ತು ಅವರ ಮಾತೃತ್ವಕ್ಕೆ ಅವಮಾನವಾಗುವ ರೀತಿಯಲ್ಲಿ ಮಾತಾಡಿಲ್ಲ ಎಂದು ಕೇಂದ್ರದ ಮಾಜಿ ಟೆಲಿಕಾಂ ಸಚಿವ ಹೇಳಿದ್ದಾರೆ, ತಮ್ಮ ಭಾಷಣ ನೀತೆ ಸಂಹಿತೆಯನ್ನು ಉಲ್ಲಂಘಿಸಿಲ್ಲ ಮತ್ತು ಯಾವುದೇ ಕಾನೂನನ್ನು ಮೀರಿಲ್ಲ ಎಂದು ರಾಜಾ ಆಯೋಗಕ್ಕೆ ನೀಡಿದ ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.
ಆದರೆ ರಾಜಾ ಅವರ ‘ಮಧ್ಯಂತರ ವಿವರಣೆ’ ಚುನಾವಣಾ ಆಯೋಗಕ್ಕೆ ತೃಪ್ತಿಕರವಾಗಿ ಕಂಡಿಲ್ಲವಾದ್ದರಿಂದ ಅವರ ವಿರುದ್ಧ ಕ್ರಮ ಕೈಗೊಂಡಿದೆ. ಬಾಷಣಗಳನ್ನು ಮಾಡುವಾಗ ಬಹಳ ಎಚ್ಚರಿಕೆಯಿಂದ ಪದಗಳನ್ನು ಬಳಸುವಂತೆ ಮತ್ತು ಅವಾಚ್ಯ ಪದಗಳನ್ನು ಉಪಯೋಗಿದಂತೆ ಆಯೋಗವು ರಾಜಕೀಯ ಧುರೀಣರಿಗೆ ಎಚ್ಚರಿಕೆ ನೀಡಿದೆ.
ರಾಜಾ ಅವರ ಪದಬಳಕೆಯನ್ನು ಪಳನಿಸ್ವಾಮಿಯವರ ಎಐಎಡಿಎಮ್ಕೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಭಾರತೀಯ ಜನತಾ ಪಕ್ಷ ಖಂಡಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ‘ಡಿಎಮ್ಕೆ ನಾಯಕ ಎ ರಾಜಾ ಅವರು ನೀಡಿದ ಹೇಳಿಕೆಯನ್ನು ನಾನು ನೋಡಿದೆ. ಈಗಾಗಲೇ ಮರಣಿಸಿರುವ ಮಹಿಳೆಯ ಬಗ್ಗೆ ಅವರು ಮಾತಾಡಿರುವ ರೀತಿ ಹೇವರಿಕೆ ಹುಟ್ಟಿಸುವಂಥದ್ದು. ಮಹಿಳೆಯರ ಬಗ್ಗೆ ಡಿಎಮ್ಕೆ ನಾಯಕರು ಯಾವುದೇ ಗೌರವ ಇಟ್ಟುಕೊಂಡಿಲ್ಲದಿರುವುದು ಅವರ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ,’ ಎಂದಿದ್ದಾರೆ.
ಇದನ್ನೂ ಓದಿ: Tamil Nadu Assembly Elections 2021: ಬಿಜೆಪಿ ಚುನಾವಣಾ ಪ್ರೊಮೊದಲ್ಲಿ ಕಾರ್ತಿ ಚಿದಂಬರಂ ಪತ್ನಿಯ ಭರತನಾಟ್ಯದ ವಿಡಿಯೊ
Published On - 11:59 pm, Thu, 1 April 21