ರಾಹುಲ್ ಗಾಂಧಿ ಮೋದಿ ಫೋಬಿಯಾದಿಂದ ಬಳಲುತ್ತಿದ್ದಾರೆ: ಅಮಿತ್ ಶಾ

| Updated By: ರಶ್ಮಿ ಕಲ್ಲಕಟ್ಟ

Updated on: Jan 30, 2022 | 7:56 PM

ಗೋವಾದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇತರ ರಾಜ್ಯಗಳ ರಾಜಕೀಯ ಪಕ್ಷಗಳು ಇಲ್ಲಿ ಸರ್ಕಾರ ರಚಿಸಲು ಸಾಧ್ಯವಿಲ್ಲ, ಬಿಜೆಪಿ ಮಾತ್ರ ಅದನ್ನು ಮಾಡಬಹುದು ಎಂದು ಅಮಿತ್ ಶಾ ಹೇಳಿದರು.

ರಾಹುಲ್ ಗಾಂಧಿ ಮೋದಿ ಫೋಬಿಯಾದಿಂದ ಬಳಲುತ್ತಿದ್ದಾರೆ: ಅಮಿತ್ ಶಾ
ಗೋವಾದಲ್ಲಿ ಅಮಿತ್ ಶಾ
Follow us on

ಪಣಜಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೋವಾದ (Goa) ಜನರಿಗೆ ಬಿಜೆಪಿ ‘ಗೋಲ್ಡನ್ ಗೋವಾ’ ಮತ್ತು ಕಾಂಗ್ರೆಸ್‌ನ ‘ಗಾಂಧಿ ಪರಿವಾರ್ ಕಾ ಗೋವಾ’ ನಡುವೆ ಆಯ್ಕೆ ಇದೆ ಎಂದು ಅಮಿತ್ ಶಾ ಹೇಳಿದ್ದಾರೆ. ಭಾನುವಾರ ಗೋವಾದಲ್ಲಿ ಮನೆ ಮನೆಗೆ ತೆರಳಿ ಅಮಿತ್ ಶಾ (Amit Shah) ಪ್ರಚಾರ ನಡೆಸಿದ್ದಾರೆ. ಈ ವೇಳೆ ಪೊಂಡಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಶಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) “ಮೋದಿ-ಫೋಬಿಯಾದಿಂದ ಬಳಲುತ್ತಿದ್ದಾರೆ” ಎಂದು ಹೇಳಿದರು. ಬಿಜೆಪಿಯು ಗೋವಾದಲ್ಲಿ ಅಭಿವೃದ್ಧಿಯನ್ನು ತಂದಿತು ಮತ್ತು ರಾಜ್ಯದ ಬಜೆಟ್ ಅನ್ನು 432 ಕೋಟಿಗಳಿಂದ (2013-14) 2,567 ಕೋಟಿಗೆ (ವರ್ಷ 2021) ಹೆಚ್ಚಿಸಿದೆ ಎಂದು ಅವರು ಹೇಳಿದರು. ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್-ಸರ್ಕಾರ ಮೂಲಸೌಕರ್ಯ ಅಭಿವೃದ್ಧಿಗೆ ಏನೂ ಮಾಡಲಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. ಗೋವಾದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇತರ ರಾಜ್ಯಗಳ ರಾಜಕೀಯ ಪಕ್ಷಗಳು ಇಲ್ಲಿ ಸರ್ಕಾರ ರಚಿಸಲು ಸಾಧ್ಯವಿಲ್ಲ, ಬಿಜೆಪಿ ಮಾತ್ರ ಅದನ್ನು ಮಾಡಬಹುದು ಎಂದು ಹೇಳಿದರು. ಶಾ ಅವರು ಗೋವಾಕ್ಕೆ ಒಂದು ದಿನದ ಭೇಟಿ ನೀಡಿ ಮನೆ ಮನೆಗೆ ಪ್ರಚಾರ ಆರಂಭಿಸಿದ್ದಾರೆ. ರ್ಯಾಲಿಗೂ ಮುನ್ನ ಶಾ ಬೋರಿಮ್ ಪಟ್ಟಣದ ಸಾಯಿಬಾಬಾ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅವರ ಜೊತೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೂಡ ಇದ್ದರು. ಸನ್ ಗ್ರೇಸ್ ಗಾರ್ಡನ್, ಪೊಂಡಾ ಮತ್ತು ಶಾರದಾ ಮಂದಿರ ಮಲ್ಟಿಪರ್ಪಸ್ ಹಾಲ್, ಸ್ಯಾನ್ವೋರ್ಡೆಮ್‌ನಲ್ಲಿ ಸಾರ್ವಜನಿಕ ಸಭೆಗಳ ನಂತರ, ಶಾ ವಾಸ್ಕೋದಲ್ಲಿ ಅಂಬ್ರೆಲಾ ಅಭಿಯಾನವನ್ನು ಪ್ರಾರಂಭಿಸುತ್ತಾರೆ.

ರಾಜ್ಯ ವಿಧಾನಸಭೆಯ ಎಲ್ಲಾ 40 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಗೋವಾ ವಿಧಾನಸಭೆಗೆ ಫೆಬ್ರವರಿ 14 ರಂದು ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
ಪ್ರಸ್ತುತ, ಗೋವಾ ಬಿಜೆಪಿಯಿಂದ 17 ಶಾಸಕರನ್ನು ಹೊಂದಿದೆ ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ (ಎಂಜಿಪಿ), ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‌ಪಿ) ಯ ವಿಜಯ್ ಸರ್ದೇಸಾಯಿ ಮತ್ತು ಮೂವರು ಸ್ವತಂತ್ರ ಶಾಸಕರ ಬೆಂಬಲವನ್ನು ಹೊಂದಿದೆ. ಜಿಎಫ್‌ಪಿ ಮತ್ತು ಎಂಜಿಪಿ ತಲಾ ಮೂವರು ಶಾಸಕರನ್ನು ಹೊಂದಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ 15 ಶಾಸಕರನ್ನು ಸದನದಲ್ಲಿ ಹೊಂದಿದೆ.

ಇದನ್ನೂ ಓದಿ: ಪಂಜಾಬ್‌ನಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ ಸಿಎಂ ಚರಣ್​​ಜಿತ್ ಚನ್ನಿ; ನಾನು ಮೊದಲೇ ಹೇಳಿದ್ದೆ ಎಂದು ಕೇಜ್ರಿವಾಲ್ ಟ್ವೀಟ್