Gokak Election 2023 Winner: ಏಳನೇ ಬಾರಿ ಗೆದ್ದು ಬೀಗಿದ ರಮೇಶ್ ಜಾರಕಿಹೊಳಿ
Ramesh Jarkiholi: ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರ ಹಾಗೂ ಜನರು ಕಾತುರದಿಂದ ಫಲಿತಾಂಶದ ನಿರೀಕ್ಷೆಯನ್ನಿಟ್ಟುಕೊಂಡಿರುವ ಕ್ಷೇತ್ರಗಳಲ್ಲಿ ಬೆಳಗಾವಿಯ ಗೋಕಾಕ್ ಕ್ಷೇತ್ರ ಕೂಡ ಒಂದಾಗಿತ್ತು. ಈ ಕ್ಷೇತ್ರದಲ್ಲಿ ಜಾರಕಿಹೊಳಿ ಕುಟುಂಬದ ಪ್ರಭಾವವೇ ಹೆಚ್ಚಿದೆ

ಬೆಳಗಾವಿ ಜಿಲ್ಲೆಯ ಗೋಕಾಕ್ ಕ್ಷೇತ್ರದ (Gokak Assembly Election 2023 )ಹಾಲಿ ಶಾಸಕ ಬಿಜೆಪಿಯ ರಮೇಶ್ ಜಾರಕಿಹೊಳಿ (Ramesh Jarkiholi) 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಏಳನೇ ಬಾರಿ ಗೆದ್ದು ಬೀಗಿದ್ದಾರೆ. 2019 ರಲ್ಲಿ ಜೆಡಿ (ಎಸ್)-ಕಾಂಗ್ರೆಸ್ ಸರ್ಕಾರದ ಪತನದಲ್ಲಿ ಅವರು ಮಹತ್ವದ ಪಾತ್ರವನ್ನು ಹೊಂದಿದ್ದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಮಹಾಂತೇಶ್ ಕಡಾಡಿ ಮತ್ತು ಜೆಡಿಎಸ್ ಚಂದನ್ ಕುಮಾರ್ ಕಣದಲ್ಲಿದ್ದರು.
ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರ ಹಾಗೂ ಜನರು ಕಾತುರದಿಂದ ಫಲಿತಾಂಶದ ನಿರೀಕ್ಷೆಯನ್ನಿಟ್ಟುಕೊಂಡಿರುವ ಕ್ಷೇತ್ರಗಳಲ್ಲಿ ಬೆಳಗಾವಿಯ ಗೋಕಾಕ್ ಕ್ಷೇತ್ರ ಕೂಡ ಒಂದಾಗಿತ್ತು. ಈ ಕ್ಷೇತ್ರದಲ್ಲಿ ಜಾರಕಿಹೊಳಿ ಕುಟುಂಬದ ಪ್ರಭಾವವೇ ಹೆಚ್ಚಿದೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ರಮೇಶ್ ಜಾರಕಿಹೊಳಿ ಈ ಬಾರಿಯೂ ಗೆಲುವು ಸಾಧಿಸುವ ನಿಟ್ಟಿನಲ್ಲಿ ವ್ಯಾಪಕ ಪ್ರಯತ್ನ ನಡೆಸಿದ್ದರು.
ಜಾರಕಿಹೊಳಿ ಅವರು ಕರ್ನಾಟಕ ವಿಧಾನಸಭೆಯ ಆರು ಬಾರಿ ಸದಸ್ಯರಾಗಿದ್ದಾರೆ. ಜೂನ್ 2016 ರಲ್ಲಿ, ಅವರು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರಕ್ಕೆ ಕ್ಯಾಬಿನೆಟ್ ಸಚಿವರಾಗಿ ಸೇರ್ಪಡೆಗೊಂಡರು. ಅವರು ಸಣ್ಣ ಪ್ರಮಾಣದ ಕೈಗಾರಿಕೆಗಳ ಸಚಿವಾಲಯದ ಬಂಡವಾಳವನ್ನು ಹೊಂದಿದ್ದರು. 2019 ರಲ್ಲಿ ಪಕ್ಷಾಂತರ ವಿರೋಧಿ ಕಾನೂನಿನ ಪ್ರಕಾರ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸಲಾಯಿತು, ಆದರೆ ಡಿಸೆಂಬರ್ 2019 ರಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ವಿಧಾನಸಭೆಗೆ ಮರು ಆಯ್ಕೆಯಾದರು.
1985ರಿಂದಲೂ ರಾಜಕಾರಣದಲ್ಲಿರುವ ರಮೇಶ್ ಜಾರಕಿಹೊಳಿ ಇದುವರೆಗೂ 7 ಬಾರಿ ಚುನಾವಣೆ ಎದುರಿಸಿದ್ದು, ಈಗ ಎಂಟನೇ ಬಾರಿ ಚುನಾವಣೆ ಎದುರಿಸಲು ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ಮೊದಲ ಚುನಾವಣೆಯಲ್ಲಿ ಕೇವಲ 4000 ಮತಗಳ ಅಂತರದಿಂದ ಸೋತಿದ್ದ ರಮೇಶ್ ಜಾರಕಿಹೊಳಿ, 1989 ಹಾಗೂ 1994ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದಿಲ್ಲ.
ಆದರೆ, 1999ರಲ್ಲಿ ಗೋಕಾಕ್‌ನಿಂದ ಮತ್ತೆ ಸ್ಪರ್ಧಿಸಲು ಶುರು ಮಾಡಿದ ರಮೇಶ್ ಜಾರಕಿಹೊಳಿ ಇದುವರೆಗೂ ಗೋಕಾಕ್‌ನಲ್ಲಿ ಸೋಲು ಕಂಡಿಲ್ಲ. ಉಪಚುನಾವಣೆ ಸೇರಿ ಇದುವರೆಗೂ 6 ಚುನಾವಣೆಯಲ್ಲಿ ರಮೇಶ್ ಜಾರಿಹೊಳಿ ಗೆಲುವು ಕಂಡಿದ್ದಾರೆ. ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ 2,38,221 ಮತದಾರರಿದ್ದು, ಈ ಪೈಕಿ 1,16,816 ಪುರುಷ, 1,20,085 ಮಹಿಳಾ ಮತದಾರರಿದ್ದಾರೆ.
ಚುನಾವಣೆ ಫಲಿತಾಂಶ ಲೈವ್ ಅಪ್ಡೇಟ್ ಇಲ್ಲಿ ಕ್ಲಿಕ್ ಮಾಡಿ
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



