ಗುಜರಾತಿನಲ್ಲಿ ಶಾಶ್ವತ ಶಾಂತಿ ಸ್ಥಾಪಿಸಿದ್ದು ಬಿಜೆಪಿ : ಕೇಂದ್ರ ಗೃಹ ಸಚಿವ ಅಮಿತ್ ಶಾ

ಕಾಂಗ್ರೆಸ್ ವಿವಿಧ ಸಮುದಾಯಗಳು ಮತ್ತು ಜಾತಿಗಳ ಜನರನ್ನು ಪರಸ್ಪರ ವಿರುದ್ಧ ಹೋರಾಡಲು ಪ್ರಚೋದಿಸುತ್ತದೆ. ಇಂತಹ ಗಲಭೆಗಳ ಮೂಲಕ ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್ ಅನ್ನು ಬಲಪಡಿಸಿತು.

ಗುಜರಾತಿನಲ್ಲಿ ಶಾಶ್ವತ ಶಾಂತಿ ಸ್ಥಾಪಿಸಿದ್ದು ಬಿಜೆಪಿ : ಕೇಂದ್ರ ಗೃಹ ಸಚಿವ ಅಮಿತ್ ಶಾ
ಅಮಿತ್ ಶಾ
TV9kannada Web Team

| Edited By: Rashmi Kallakatta

Nov 25, 2022 | 5:47 PM

ಅಹಮದಾಬಾದ್: ಕಾಂಗ್ರೆಸ್ (Congress) ಬೆಂಬಲಿಸಿದ್ದರಿಂದ ಸಮಾಜ ವಿರೋಧಿ ಶಕ್ತಿಗಳು ಗುಜರಾತ್‌ನಲ್ಲಿ (Gujarat) ಹಿಂಸಾಚಾರದಲ್ಲಿ ತೊಡಗಿದ್ದರು, ಆದರೆ 2002 ರಲ್ಲಿ ದುಷ್ಕರ್ಮಿಗಳಿಗೆ ಪಾಠ ಕಲಿಸಿದ ನಂತರ ಅವರು ಅಂತಹ ಚಟುವಟಿಕೆಗಳನ್ನು ನಿಲ್ಲಿಸಿದರು. ಬಿಜೆಪಿ ರಾಜ್ಯದಲ್ಲಿ “ಶಾಶ್ವತ ಶಾಂತಿ” ಸ್ಥಾಪಿಸಿತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಶುಕ್ರವಾರ ಹೇಳಿದ್ದಾರೆ. 2002 ರಲ್ಲಿ ಆ ವರ್ಷದ ಫೆಬ್ರವರಿಯಲ್ಲಿ ಗೋಧ್ರಾ ರೈಲು ನಿಲ್ದಾಣದಲ್ಲಿ ರೈಲು ಸುಟ್ಟ ಘಟನೆಯ ನಂತರ ಗುಜರಾತ್‌ನ ಕೆಲವು ಭಾಗಗಳು ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದವು. ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ಖೇಡಾ ಜಿಲ್ಲೆಯ ಮಹುಧಾ ಪಟ್ಟಣದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ, ಗುಜರಾತ್‌ನಲ್ಲಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ (1995 ಕ್ಕಿಂತ ಮೊದಲು) ಕೋಮುಗಲಭೆಗಳು ವ್ಯಾಪಕವಾಗಿದ್ದವು. ಕಾಂಗ್ರೆಸ್ ವಿವಿಧ ಸಮುದಾಯಗಳು ಮತ್ತು ಜಾತಿಗಳ ಜನರನ್ನು ಪರಸ್ಪರ ವಿರುದ್ಧ ಹೋರಾಡಲು ಪ್ರಚೋದಿಸುತ್ತದೆ. ಇಂತಹ ಗಲಭೆಗಳ ಮೂಲಕ ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್ ಅನ್ನು ಬಲಪಡಿಸಿತು. ಅದು ಸಮಾಜದ ದೊಡ್ಡ ವರ್ಗಕ್ಕೆ ಅನ್ಯಾಯ ಮಾಡಿದೆ. ಕಾಂಗ್ರೆಸ್​​ನಿಂದ ಪಡೆದ ದೀರ್ಘಕಾಲದ ಬೆಂಬಲದಿಂದಾಗಿ ದುಷ್ಕರ್ಮಿಗಳು ಹಿಂಸಾಚಾರದಲ್ಲಿ ಪಾಲ್ಗೊಳ್ಳುವ ಅಭ್ಯಾಸವನ್ನು ಹೊಂದಿದ್ದರಿಂದ 2002 ರಲ್ಲಿ ಗುಜರಾತ್ ಗಲಭೆಗಳಿಗೆ ಸಾಕ್ಷಿಯಾಯಿತು ಎಂದು ಶಾ ಹೇಳಿದ್ದಾರೆ.

ಆದರೆ 2002 ರಲ್ಲಿ ಅವರಿಗೆ ಪಾಠ ಕಲಿಸಿದ ನಂತರ, ಸಮಾಜ ವಿರೋಧಿ ಶಕ್ತಿಗಳು ಹಿಂಸಾಚಾರದ ಹಾದಿ ತೊರೆದವು. ಅವರು 2002 ರಿಂದ 2022 ರವರೆಗೆ ಹಿಂಸಾಚಾರದಲ್ಲಿ ತೊಡಗುವುದನ್ನು ಬಿಟ್ಟುಬಿಟ್ಟರು. ಬಿಜೆಪಿಯು ಗುಜರಾತ್‌ನಲ್ಲಿ ಕೋಮುಗಲಭೆಯಲ್ಲಿ ತೊಡಗಿಸಿಕೊಂಡವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಮೂಲಕ ಶಾಶ್ವತ ಶಾಂತಿ ಸ್ಥಾಪಿಸಿದೆ ಎಂದು ಕೇಂದ್ರ ಸಚಿವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ರದ್ದುಗೊಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಿದ ಅಮಿತ್ ಶಾ, ಕಾಂಗ್ರೆಸ್ ತನ್ನ “ವೋಟ್ ಬ್ಯಾಂಕ್” ಕಾರಣದಿಂದಾಗಿ ಈ ನಿರ್ಧಾರದ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada