ಬಿಜೆಪಿ ಭದ್ರಕೋಟೆಯಲ್ಲಿ ಹೊಸ ಪಕ್ಷವೊಂದು ಶೇಕಡಾ 15-20ರಷ್ಟು ಮತಗಳನ್ನು ಪಡೆಯುವುದೇ ದೊಡ್ಡ ಸಂಗತಿ: ಕೇಜ್ರಿವಾಲ್
ನಾನು ದೆಹಲಿಯ ಜನರನ್ನು ಅಭಿನಂದಿಸುತ್ತೇನೆ. ದೆಹಲಿಯ ಜನರು ಮತ್ತೊಮ್ಮೆ ಎಎಪಿ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದು ಸಮೀಕ್ಷೆಗಳು ತೋರಿಸಿವೆ. ಇದು ಫಲಿತಾಂಶವಾಗಲಿದೆ ಎಂದು ನಾನು ಭಾವಿಸುತ್ತೇನೆ. ನಾವು ನಾಳೆಯವರೆಗೆ ಕಾಯುತ್ತೇವೆ ಎಂದಿದ್ದಾರೆ ಕೇಜ್ರಿವಾಲ್.
ದೆಹಲಿ: ಆಡಳಿತಾರೂಢ ಬಿಜೆಪಿಗೆ (BJP) ಸವಾಲೆಸೆಯಲು ಗುಜರಾತ್‌ನಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದ ಆಮ್ ಆದ್ಮಿ ಪಕ್ಷ (AAP)ಗೆ ಜಯವಿಲ್ಲ ಭವಿಷ್ಯ ನುಡಿದಿರುವ ಎಕ್ಸಿಟ್ ಪೋಲ್‌ಗಳಿಗೆ (Exit Polls) ಅರವಿಂದ್ ಕೇಜ್ರಿವಾಲ್ (Arvind Kejriwal)ಅವರು ಇಂದು ಪ್ರತಿಕ್ರಿಯಿಸಿದ್ದಾರೆ. ಅದೇ ಹೊತ್ತಲ್ಲಿ ಎಎಪಿ ದೆಹಲಿ ನಾಗರಿಕ ಚುನಾವಣೆಯಲ್ಲಿ ಅಬ್ಬರದ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.ನಿನ್ನೆ ನಡೆದ ಎಕ್ಸಿಟ್ ಪೋಲ್‌ಗಳ ಪ್ರಕಾರ ದೆಹಲಿಯ ಪೌರಾಡಳಿತ ಸಂಸ್ಥೆ ಚುನಾವಣೆಯಲ್ಲಿ ಎಎಪಿ ಮುನ್ನಡೆ ಸಾಧಿಸಲಿದೆ. ಆದರೆ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಫ್ಲಾಪ್ ಶೋ ಎಂದು ಭವಿಷ್ಯ ನುಡಿದಿದೆ. ಗುಜರಾತ್‌ನಲ್ಲಿ ಎಎಪಿ 182 ಸ್ಥಾನಗಳಲ್ಲಿ ಎಂಟು ಸ್ಥಾನಗಳನ್ನು ಗೆಲ್ಲುತ್ತದೆ, ಕಾಂಗ್ರೆಸ್‌ಗಿಂತ (ಮಿತ್ರಪಕ್ಷಗಳೊಂದಿಗೆ 38) ಕೆಳಗೆ ಉಳಿಯುತ್ತದೆ ಎಂದು ಚುನಾವಣೋತ್ತರ ಸಮೀಕ್ಷೆ ಹೇಳಿದೆ. ಅಬ್ಬರದ ಮತ್ತು ಹುರುಪಿನ ಪ್ರಚಾರದೊಂದಿಗೆ, ಪಕ್ಷವು ರಾಜ್ಯದಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ತನ್ನನ್ನು ತಾನು ಪ್ರಮುಖ ಪ್ರತಿಪಕ್ಷವಾಗಿ ಬಿಂಬಿಸಿತ್ತು.ಸಮೀಕ್ಷೆಗಳು ತಪ್ಪು ಎಂದು ಸಾಬೀತಾಗುತ್ತವೆ ಮತ್ತು ಪಕ್ಷವು ವಾಸ್ತವವಾಗಿ 100 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಎಎಪಿ ನಾಯಕರು ಹೇಳಿದ್ದಾರೆ.
ಫಲಿತಾಂಶಗಳು ಸಕಾರಾತ್ಮಕವಾಗಿವೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ ಅದು ಕೂಡ ಬಿಜೆಪಿ ಭದ್ರಕೋಟೆಯಲ್ಲಿ ಹೊಸ ಪಕ್ಷ ಶೇಕಡಾ 15 ರಿಂದ 20 ರಷ್ಟು ಮತಗಳನ್ನು ಪಡೆಯುವುದು ದೊಡ್ಡ ಸಂಗತಿ ಎಂದು ಎಂದು ದೆಹಲಿ ಮುಖ್ಯಮಂತ್ರಿ ಹೇಳಿದ್ದು, “ನಾಳೆ ದಿನ (ಎಣಿಕೆಯ ದಿನ) ತನಕ ಕಾಯಿರಿ ಎಂದಿದ್ದಾರೆ.
ಮುನ್ಸಿಪಲ್ ಕಾರ್ಪೊರೇಷನ್‌ಗಳ ಮರು ಏಕೀಕರಣದ ನಂತರದ ಮೊದಲ ಚುನಾವಣೆಯಲ್ಲಿ ಬಿಜೆಪಿಯ 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಎಎಪಿ ದೊಡ್ಡ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಯ ಸಮೀಕ್ಷೆ ಹೇಳಿದೆ. ನಾನು ದೆಹಲಿಯ ಜನರನ್ನು ಅಭಿನಂದಿಸುತ್ತೇನೆ. ದೆಹಲಿಯ ಜನರು ಮತ್ತೊಮ್ಮೆ ಎಎಪಿ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದು ಸಮೀಕ್ಷೆಗಳು ತೋರಿಸಿವೆ. ಇದು ಫಲಿತಾಂಶವಾಗಲಿದೆ ಎಂದು ನಾನು ಭಾವಿಸುತ್ತೇನೆ. ನಾವು ನಾಳೆಯವರೆಗೆ ಕಾಯುತ್ತೇವೆ ಎಂದಿದ್ದಾರೆ ಕೇಜ್ರಿವಾಲ್.
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ