ನವದೆಹಲಿ: ಒನ್ ಮ್ಯಾನ್ ಆರ್ಮಿಯಂತೆ ಗುಜರಾತ್ ವಿಧಾನಸಭೆ ಚುನಾವಣಾ((Gujarat Assembly Poll)) ಅಖಾಡದಲ್ಲಿ ಎದೆ ಕೊಟ್ಟು ನಿಂತ ಮಾಸ್ ಲೀಡರ್, ತವರೂರಲ್ಲಿ ಮತ್ತೆ ಗರ್ಜಿಸಿದ್ದಾರೆ. ಮೋದಿ ಗರ್ಜನೆಯಿಂದ ಸತತ ಗೆಲುವು ಸಾಧಿಸಿರೋ, ಸಾಧಿಸುತ್ತಿರೋ ಬಿಜೆಪಿ ಈ ಬಾರಿಯೂ ಗೆಲುವಿನ ಕೇಕೆ ಹಾಕಲು ರೆಡಿಯಾಗಿದೆ. ಗುಜರಾತ್‌ನಲ್ಲಿ ಕಮಲ ಅರಳಿ, ಕೇಸರಿ ಬಾವುಟ ರಾರಾಜಿಸಲಿದೆ. ಇದನ್ನ ನಾವು ಹೇಳ್ತಿಲ್ಲ. ಸದ್ಯ ಹೊರಬಿದ್ದಿರೋ ಮತದಾನೋತ್ತರ ಸಮೀಕ್ಷೆಯ ಅಂಕಿ ಅಂಶದ (Gujarat Assembly Election Exit Poll Results 2022 ) ಪ್ರಕಾರ ಗುಜರಾತ್ ಗದ್ದುಗೆ ಉಳಿಸಿಕೊಳ್ಳವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ. ಹಾಗಾದ್ರೆ, ಯಾವೆಲ್ಲ ಎಕ್ಸಿಟ್ ಪೋಲ್ಗಳಲ್ಲಿ ಯಾವ ಪಕ್ಷಕ್ಕೆ ಎಷ್ಟೆಷ್ಟು ಸ್ಥಾನಗಳಲ್ಲಿ ಗೆಲ್ಲಬಹುದು ಎನ್ನುವುದು ಈ ಕೆಳಗಿನಂತಿದೆ ನೋಡಿ.
ರಿಪಬ್ಲಿಕ್ ಟಿವಿ ಚುನಾವಣೆ ಸಮೀಕ್ಷೆ
ರಿಪಬ್ಲಿಕ್ ಗುಜರಾತ್ ಚುನವಣೆ ಸಮೀಕ್ಷೆಯ ಪ್ರಕಾರ ಮತ್ತೆ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಲಿದೆ. ಬಿಜೆಪಿಗೆ 128 ರಿಂದ 148 ಸ್ಥಾನಗಳು ದೊರೆಯಲಿವೆ ಎಂದು ರಿಪಬ್ಲಿಕ್ ಟಿವಿ ಭವಿಷ್ಯ ನುಡಿದೆ. ಇನ್ನು ಕಾಂಗ್ರೆಸ್ 30 ರಿಂದ 42 ಸ್ಥಾನಗಳಲ್ಲಿ ಮಾತ್ರ ಗೆಲ್ಲಲಿದೆ. ಇನ್ನು ಈ ಬಾರಿ ಗುಜರಾತ್ ಚುನಾವಣೆಯಲ್ಲಿ ಭಾರೀ ಸದ್ದು ಮಾಡಿದ್ದ ಕೇಜ್ರಿವಾಲ್ ನೇತೃತ್ವದ ಎಎಪಿ ಕೇವಲ 2 ರಿಂದ 10 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ರಿಪಬ್ಲಿಕ್ ಚುನಾವಣೆ ಸಮೀಕ್ಷೆಯಲ್ಲಿ ಹೇಳಿದೆ.
ಜನ್ ಕೀ ಬಾತ್ ಚುನಾವಣೋತ್ತರ ಸಮೀಕ್ಷೆ
ಜನ್ ಕೀ ಬಾತ್ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ 117 – 140 ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದು ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ. ಈ ಮೂಲಕ ಬಿಜೆಪಿಗೆ 2022ರ ವಿಧಾನಸಭೆ ಚುನಾವಣೆಯಲ್ಲಿ ದಾಖಲೆಯ ಬಹುಮತ ಲಭಿಸಲಿದೆ ಎಂದು ಹೇಳಿದೆ. ಅಲ್ಲದೆ, ಕಾಂಗ್ರೆಸ್ ಪಕ್ಷಕ್ಕೆ 34 – 51 ಹಾಗೂ ಎಎಪಿಗೆ ಕೇವಲ 6 ರಿಂದ 13 ಸ್ಥಾನಗಳು ಸಿಗಲಿದೆ. ಹಾಗೂ, ಇತರರಿಗೆ ಶೂನ್ಯ ಸ್ಥಾನ ಎಂದು ಜನ್ ಕೀ ಬಾತ್ ಚುನಾವಣೋತ್ತರ ಸಮೀಕ್ಷೆ ಹೇಳುತ್ತದೆ.
ಟಿವಿ9 ಭಾರತ್‌ವರ್ಷ್ ಮತಗಟ್ಟೆ ಸಮೀಕ್ಷೆ
ಗುಜರಾತ್‌ನಲ್ಲಿ ಟಿವಿ9 ಭಾರತ್‌ವರ್ಷ್ ಹಿಂದಿ ಚಾನೆಲ್ ಮತಗಟ್ಟೆ ಸಮೀಕ್ಷೆ ಪ್ರಕಾರ ತ್ತೆ BJPಗೇ ಅಧಿಕಾರವೆಂದು ಭವಿಷ್ಯ ನುಡಿದಿದೆ. ಗುಜರಾತ್ ಎಲೆಕ್ಷನಲ್ಲಿ ಶೇಕಡಾ 47ರಷ್ಟು ಮತದಾರರು ಬಿಜೆಪಿಗೆ ಜೈ ಎಂದಿದ್ದಾರೆ ಎಂದು ಟಿವಿ9 ಭಾರತ್‌ವರ್ಷ್ ಹಿಂದಿ ಚಾನೆಲ್ ಮತಗಟ್ಟೆ ಸಮೀಕ್ಷೆ ಹೇಳಿದೆ.
ನ್ಯೂಸ್ ಎಕ್ಸ್‌ನಿಂದ ಚುನಾವಣೋತ್ತರ ಸಮೀಕ್ಷೆ
ನ್ಯೂಸ್ ಎಕ್ಸ್‌ನಿಂದ ಚುನಾವಣೋತ್ತರ ಸಮೀಕ್ಷೆ ಬಿಡುಗಡೆಯಾಗಿದ್ದು, ಇದರಲ್ಲಿ ಬಿಜೆಪಿಗೆ ಒಟ್ಟಾರೆ 182 ವಿಧಾನಸಭಾ ಸ್ಥಾನಗಳಲ್ಲಿ 117ರಿಂದ 140 ಸ್ಥಾನಗಳಲ್ಲಿ ಗೆಲುವು ಸಿಗಲಿದೆ ಎಂದು ತಿಳಿಸಿದೆ. ಇದೇ ಕಾಂಗ್ರೆಸ್‌ಗೆ 34ರಿಂದ 51 ಸ್ಥಾನಗಳಲ್ಲಿ ಗೆಲ್ಲಲಿದೆ. ಇನ್ನು ಆಮ್ ಆದ್ಮಿ ಪಕ್ಷಕ್ಕೆ 6ರಿಂದ 13 ಸ್ಥಾನಗಳಲ್ಲಿ ಗೆಲುವು ಸಿಗಲಿದೆ ಎಂದು ನ್ಯೂಸ್ ಎಕ್ಸ್ ತನ್ನ ಚುನಾವಣೆ ಸಮೀಕ್ಷೆಯಲ್ಲಿ ಭವಿಷ್ಯ ನುಡಿದಿದೆ.
ಎನ್ಡಿ ಟಿವಿ ಎಕ್ಸಿಟ್ ಪೋಲ್
ಎನ್ಡಿ ಟಿವಿ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಜೆಪಿಪಿ 128 ರಿಂದ 148 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಬಹುದು ಎಂದು ಅಂದಾಜಿಸಿದೆ. ಕಾಂಗ್ರೆಸ್ 30 ರಿಂದ 42 ಸ್ಥಾನಗಳಲ್ಲಿ ಗೆಲ್ಲಬಹುದು. ಇನ್ನು ಆಮ್ ಆದ್ಮಿ 2 ರಿಂದ 4 ಸ್ಥಾನಗಳಲ್ಲಿ ಮಾತ್ರ ಗೆಲ್ಲಬಹುದು ಎಂದು ಎನ್ಡಿ ಡಿವಿ ತನ್ನ ಚುನಾವಣೆ ಸಮೀಕ್ಷೆಯಲ್ಲಿ ತಿಳಿಸಿದೆ.
Published On - 7:26 pm, Mon, 5 December 22