Gujarat Election Results 2022: ಗುಜರಾತ್‌ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ ಇಸುದನ್ ಗಧ್ವಿಗೆ ಸೋಲುಣಿಸಿದ ಮತದಾರ

| Updated By: ರಮೇಶ್ ಬಿ. ಜವಳಗೇರಾ

Updated on: Dec 08, 2022 | 3:44 PM

ಗುಜರಾತ್‌ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಪರಾಭವಗೊಂಡಿದ್ದಾರೆ. ನಾನಾ ತಂತ್ರಗಳ ಮೂಲಕ ಅಖಾಡಕ್ಕಿಳಿದಿದ್ದ ಇಸುದಾನ್ ಗಧ್ವಿ ಬಿಜೆಪಿ ಅಭ್ಯರ್ಥಿ ಎದುರು ಮಂಡಿಯೂರಿದ್ದಾರೆ.

Gujarat Election Results 2022: ಗುಜರಾತ್‌ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ ಇಸುದನ್ ಗಧ್ವಿಗೆ ಸೋಲುಣಿಸಿದ ಮತದಾರ
Isudan Gadhvi
Follow us on

ತೀವ್ರ ಕುತೂಹಲ ಮೂಡಿಸಿರುವ ಗುಜರಾತ್ ವಿಧಾನಸಭೆ ಚುನಾವಣೆ ಮತ ಎಣಿಕೆ(Gujarat Election Results 2022) ಕಾರ್ಯ ಮುಂದುವರಿದಿದ್ದು, ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರುವುದು ನಿಚ್ಚಳವಾಗಿದೆ. ಈ ಬಾರಿ ಗುಜರಾತ್ ಚುನಾವಣೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ (AAP) , ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲಿದೆ ಎನ್ನಲಾಗಿತ್ತು. ಆದ್ರೆ, ಅದು ಸಾಧ್ಯವಾಗಿಲ್ಲ. ಇನ್ನು ಮುಖ್ಯವಾಗಿ ಗುಜರಾತ್ ಎಎಪಿ ಸಿಎಂ ಅಭ್ಯರ್ಥಿ ಇಸುದಾನ್ ಗಧ್ವಿಯೇ (Isudan Gadhvi)ಸೋಲುಕಂಡಿದ್ದಾರೆ.

ಇದನ್ನೂ ಓದಿ: Gujarat Election Results 2022: ಗುಜರಾತ್ ಸಿಎಂ ಭೂಪೇಂದ್ರ ಪಟೇಲ್​ಗೆ 50,000 ಮತಗಳ ಅಂತರದ ಭರ್ಜರಿ ಗೆಲುವು

ಗುಜರಾತ್‌ನ ಸೌರಾಷ್ಟ್ರ ಪ್ರದೇಶದಲ್ಲಿ ಬರುವ ಖಂಭಾಲಿಯ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಗುಜರಾತ್‌ ಆಮ್ ಆದ್ಮಿ ಪಕ್ಷದ(AAP) ಸಿಎಂ ಅಭ್ಯರ್ಥಿ ಇಸುದನ್ ಗಧ್ವಿ 19,000 ಮತಗಳಿಂದ ಬಿಜೆಪಿ ಅಭ್ಯರ್ಥಿ ಮುಲುಭಾಯ್ ಬೇರಾ ವಿರುದ್ಧ ಪರಾಭವಗೊಂಡಿದ್ದಾರೆ. ಆರಂಭದಲ್ಲಿ ಹಾಲಿ ಶಾಸಕ, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ವಿಕ್ರಮ್‌ ಮದಮ್‌ಗಿಂತ ಮುನ್ನಡೆ ಸಾಧಿಸಿದ್ದರು. ಇನ್ನು ಬಿಜೆಪಿಯ ಮುಲುಭಾಯ್ ಬೇರಾ ಮೂರನೇ ಸ್ಥಾನದಲ್ಲಿದ್ದರು. ಆದ್ರೆ, ಕೊನೆ ಗಳಿಗೆಯಲ್ಲಿ ಮುಲುಭಾಯ್ ಬೇರಾ ಫಿನಿಕ್ಸ್​ನಂತೆ ಗೆಲುವು ಸಾಧಿಸಿ ಎದುರಾಳಿಗಳಿಗೆ ಶಾಕ್ ಕೊಟ್ಟಿದ್ದಾರೆ.

ಇಸುದನ್‌ ಗಧ್ವಿ ಅವರನ್ನು ಎಎಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ನಂತರ, ಖಂಭಾಲಿಯ ಪ್ರತಿಷ್ಠಿತ ಕಣವಾಗಿ ಮಾರ್ಪಟ್ಟಿತ್ತು. ಜನಪ್ರಿಯ ದೂರದರ್ಶನ ಸುದ್ದಿ ನಿರೂಪಕರಾಗಿದ್ದ ಗಧ್ವಿ ತಾವು ಹುಟ್ಟಿ ಬೆಳೆದ ಖಂಭಾಲಿಯಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಕ್ಷೇತ್ರದಲ್ಲಿ ಅಹಿರ್‌ ಜಾತಿಯ ಪ್ರಾಬಲ್ಯವಿದೆ. ಈ ಕ್ಷೇತ್ರ ಒಬಿಸಿ ಸಮುದಾಯದ ಗಧ್ವಿ ಅವರಿಗೆ ಅಷ್ಟು ಪೂರಕವಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಇನ್ನು ಕಾಂಗ್ರೆಸ್ ಹಾಗೂ ಬಿಜೆಪಿಯ ಅಭ್ಯರ್ಥಿಗಳಿಬ್ಬರೂ ಅಹಿರ್ ಸಮುದಾಯದವರಾಗಿದ್ದರಿಂದ ವೋಟ್ ಡಿವೈಡ್ ಆಗಿ ಗೆಲ್ಲುವ ವಿಶ್ವಾಸದಲ್ಲಿದ್ದರು. ಆದ್ರೆ, ಗಧ್ವಿ ಅವರ ಆ ಪ್ಲಾನ್ ಸಕ್ಸಸ್ ಆಗಲಿಲ್ಲ.

ಜೂನ್ 2021ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದ ಇಸುದಾನ್ ಗಾದ್ವಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಮತ್ತು ಅದರ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರೂ ಆಗಿದ್ದಾರೆ. ಇಸುಡಾನ್ ಅವರು, ಪತ್ರಕರ್ತರಾಗಿ ಮತ್ತು ವಿಟಿವಿ ನ್ಯೂಸ್ ನ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದರು. ಸಕ್ರಿಯ ರಾಜಕೀಯಕ್ಕೆ ಸೇರಿದ ನಂತರ ಇಸುಡಾನ್ ಗುಜರಾತ್‌ನಲ್ಲಿ ಆಪ್ ಪಕ್ಷದಲ್ಲಿ ಸಕ್ರಿಯರಾಗಿ ಜನಪ್ರಿಯತೆ ಗಳಿಸಿದರು. 2022 ರ ಗುಜರಾತ್ ವಿಧಾನಸಭೆ ಚುನಾವಣೆಗೆ ಎಎಪಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕೇಜ್ರಿವಾಲ್ ಘೋಷಿಸಿದ್ದರು.

ಗುಜರಾತ್ ಚುನಾವಣೆ ಫಲಿತಾಂಶದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ