ಗುಜರಾತಿನಲ್ಲಿ ಓವೈಸಿ ಪ್ರಚಾರ ವೇಳೆ ಮೋದಿ ಮೋದಿ ಎಂದು ಕೂಗಿ ಕಪ್ಪು ಬಾವುಟ ಪ್ರದರ್ಶಿಸಿದ ಬಿಜೆಪಿ ಬೆಂಬಲಿಗರು
ಓವೈಸಿ ಅವರು ತಮ್ಮ ಪಕ್ಷದ ಅಭ್ಯರ್ಥಿಯ ಪ್ರಚಾರದಲ್ಲಿ ನಿರತರಾಗಿದ್ದಾಗ, ಕೈಯಲ್ಲಿ ಕಪ್ಪು ಬಾವುಟಗಳನ್ನು ಹಿಡಿದಿದ್ದ ಬಿಜೆಪಿ ಬೆಂಬಲಿಗರ ಗುಂಪು ಅಲ್ಲಿಗೆ ತಲುಪಿ "ಮೋದಿ-ಮೋದಿ" ಎಂದು ಕೂಗಲು ಪ್ರಾರಂಭಿಸಿತು
ಸೂರತ್ (ಗುಜರಾತ್): ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ(Asaduddin Owaisi) ಅವರು ಗುಜರಾತ್ ಚುನಾವಣೆಗಾಗಿ (Gujarat assembly elections) ಪೂರ್ವ ಸೂರತ್ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ತಮ್ಮ ಪಕ್ಷದ ಅಭ್ಯರ್ಥಿ ಪರ ಭಾನುವಾರ ರಾತ್ರಿ ಪ್ರಚಾರ ನಡೆಸುತ್ತಿದ್ದಾಗ ಅಲ್ಲಿ ನೆರೆದಿದ್ದ ಬಿಜೆಪಿ ಬೆಂಬಲಿಗರು ‘ಮೋದಿ-ಮೋದಿ’ ಘೋಷಣೆ ಕೂಗಿ ಕಪ್ಪು ಬಾವುಟ ತೋರಿಸಿದ್ದಾರೆ. ಓವೈಸಿ ಅವರು ತಮ್ಮ ಪಕ್ಷದ ಅಭ್ಯರ್ಥಿಯ ಪ್ರಚಾರದಲ್ಲಿ ನಿರತರಾಗಿದ್ದಾಗ, ಕೈಯಲ್ಲಿ ಕಪ್ಪು ಬಾವುಟಗಳನ್ನು ಹಿಡಿದಿದ್ದ ಬಿಜೆಪಿ ಬೆಂಬಲಿಗರ ಗುಂಪು ಅಲ್ಲಿಗೆ ತಲುಪಿ “ಮೋದಿ-ಮೋದಿ” ಎಂದು ಕೂಗಲು ಪ್ರಾರಂಭಿಸಿತು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊಗಳಲ್ಲಿ, ಎಐಎಂಐಎಂ ಮುಖ್ಯಸ್ಥರ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಯುವಕರು ಕಪ್ಪು ಬಾವುಟವನ್ನು ಬೀಸುತ್ತಿರುವುದನ್ನು ಕಾಣಬಹುದು. ಪ್ರತಿಭಟನೆಯನ್ನು ನಿರ್ಲಕ್ಷಿಸಿದ ಓವೈಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನರು ತಮ್ಮ ಪಕ್ಷವನ್ನು ಬೆಂಬಲಿಸುವಂತೆ ರ್ಯಾಲಿಯಲ್ಲಿ ಮನವಿ ಮಾಡಿದರು.
“ಅವರು ( ಬಿಜೆಪಿ) ಏಕರೂಪ ನಾಗರಿಕ ಸಂಹಿತೆಯನ್ನು ತರುವುದಾಗಿ ಹೇಳಿದರು. ಏಕೆ? ಏಕೆಂದರೆ ಅವರು ಅಲ್ಪಸಂಖ್ಯಾತರ ಸಂಸ್ಕೃತಿ ತಹಜೀಬ್ ಅನ್ನು ಕೊನೆಗೊಳಿಸಲು ಬಯಸುತ್ತಾರೆ ಎಂದು ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಎಐಎಂಐಎಂ ಮುಖ್ಯಸ್ಥರು ಹೇಳಿದರು. ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ನಾನು ಬಿಜೆಪಿಯನ್ನು ಕೇಳಲು ಬಯಸುತ್ತೇನೆ, ಅವರು (ಬಿಜೆಪಿ) ಏಕರೂಪ ನಾಗರಿಕ ಸಂಹಿತೆ ತರಲು ಯೋಜಿಸಿದರೆ, ಅವರು ಅಶಾಂತಿ ಇರುವ ಪ್ರದೇಶಗಳನ್ನು ಸರಿಮಾಡಬಾರದು? ಎಂದು ಓವೈಸಿ ಕೇಳಿದ್ದಾರೆ.
ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಟೀಕಿಸಿದ ಓವೈಸಿ ಇದು ಅಲ್ಪಸಂಖ್ಯಾತರ ವಿರೋಧಿ ಎಂದು ಆರೋಪಿಸಿದರು. ಅಲ್ಪಸಂಖ್ಯಾತರ ಜನಸಂಖ್ಯೆ ಇರುವ ಪ್ರದೇಶಗಳ ಅಭಿವೃದ್ಧಿಯನ್ನು ಅವರು ಎಂದಿಗೂ ಖಚಿತಪಡಿಸುವುದಿಲ್ಲ ಎಂದು ಓವೈಸಿ ಆರೋಪಿಸಿದ್ದಾರೆ.
#WATCH | Black flags shown and ‘Modi, Modi’ slogans raised by some youth at a public meeting addressed by AIMIM MP Asaduddin Owaisi in Gujarat’s Surat yesterday pic.twitter.com/qXWzxvUc5V
— ANI (@ANI) November 14, 2022
ಎಐಎಂಐಎಂ ಮುಖ್ಯಸ್ಥರು ಇಂದು ಸಂಜೆ ಗುಜರಾತ್‌ನಲ್ಲಿ ಮತ್ತೊಂದು ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಗುಜರಾತ್‌ನ 182 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.