ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಭಾನುವಾರ ಸಂಜೆ ಗುಜರಾತ್‌ನ ಸೂರತ್‌ನಲ್ಲಿ ಬೃಹತ್ ರೋಡ್‌ಶೋ (Surat Road Show) ನಡೆಸಿದರು. ಈ ವೇಳೆ ಮಾತನಾಡಿದ ಅವರು, ಗುಜರಾತ್ ಚುನಾವಣೆಯಲ್ಲಿ (Gujarat Assembly Elections 2022) ಈ ಬಾರಿ ಇಲ್ಲಿನ ಮತದಾರರು ಎಲ್ಲ ದಾಖಲೆಗಳನ್ನೂ ಮುರಿಯುತ್ತಾರೆ. ಅವರು ಬಿಜೆಪಿಗೆ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ನೀಡುತ್ತಾರೆ ಎಂಬ ವಿಶ್ವಾಸ, ನಂಬಿಕೆ ನನಗಿದೆ ಎಂದಿದ್ದಾರೆ. ಸೂರತ್ ವಿಮಾನ ನಿಲ್ದಾಣದಿಂದ ನಗರದ ಪ್ರಮುಖ ಕೇಂದ್ರವಾದ ವರಚ್ಚಾವರೆಗಿನ 27 ಕಿ.ಮೀ ಮಾರ್ಗದ ರೋಡ್‌ಶೋದಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಲಕ್ಷಾಂತರ ಜನರು ನಿಂತು, ನರೇಂದ್ರ ಮೋದಿಯವರನ್ನು ಸ್ವಾಗತಿಸಿದರು.
ಈ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಸೂರತ್‌ನಲ್ಲಿ ಮರೆಯಲಾಗದ ಸಂಜೆಯನ್ನು ಕಳೆದಿದ್ದೇನೆ. ಬಿಜೆಪಿಯೇ ಜನರ ಆದ್ಯತೆಯ ಆಯ್ಕೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಇಲ್ಲಿದೆ. ನಮ್ಮ ಅಭಿವೃದ್ಧಿ ಕಾರ್ಯಗಳಿಂದಾಗಿ ಜನರನ್ನು ತಲುಪಲು ಯಶಸ್ವಿಯಾಗಿದ್ದೇವೆ ಎಂದು ಹೇಳಿದ್ದಾರೆ.
An unforgettable evening in Surat! Here are highlights from yesterday. BJP is the people’s preferred choice due to our development agenda. pic.twitter.com/CPYTby5j6F
— Narendra Modi (@narendramodi) November 28, 2022
ಸೂರತ್‌ನ 12 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 1ರಂದು ಮೊದಲ ಹಂತದ ಚುನಾವಣೆಯಲ್ಲಿ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸೂರತ್‌ನಲ್ಲಿ ಮೋದಿ ಬೃಹತ್ ರೋಡ್ ಶೋ ನಡೆಸಿದ್ದಾರೆ. ರಾತ್ರಿಯಾದರೂ ರಸ್ತೆಗಳ ಪಕ್ಕದಲ್ಲಿ, ಕಟ್ಟಡಗಳ ಮೇಲೆ ನಿಂತುಕೊಂಡು ಲಕ್ಷಾಂತರ ಜನರು ಮೋದಿಯನ್ನು ಸ್ವಾಗತಿಸುತ್ತಿರುವ ವಿಡಿಯೋ, ಫೋಟೋಗಳು ವೈರಲ್ ಆಗಿವೆ. ಅಲ್ಲದೆ, ಜನರು ಮೋದಿ ಮೋದಿ ಎಂದು ಜೋರಾಗಿ ಘೋಷಣೆ ಕೂಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕಾರಿನ ಡೋರ್ನಲ್ಲಿ ನಿಂತುಕೊಂಡು ರಸ್ತೆಯುದ್ದಕ್ಕೂ ಜನರತ್ತ ಕೈಬೀಸಿದ್ದಾರೆ.
Thank you Surat! pic.twitter.com/Y3dxPR8Fin
— Narendra Modi (@narendramodi) November 27, 2022
ಇದನ್ನೂ ಓದಿ: ಉಗ್ರರನ್ನು ಟಾರ್ಗೆಟ್ ಮಾಡುವಂತೆ ನಾವು ಹೇಳಿದೆವು, ಅವರು ಮೋದಿಯನ್ನು ಟಾರ್ಗೆಟ್ ಮಾಡಿದರು: ಪ್ರಧಾನಿ ಮೋದಿ
ಇದಕ್ಕೂ ಮುನ್ನ 2 ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಈ ವೇಳೆ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ಗುಜರಾತ್ ಭಯೋತ್ಪಾದನೆಯ ಬೇಗೆಯಲ್ಲಿ ಹಲವು ವರ್ಷಗಳ ಕಾಲ ನರಳಿತ್ತು. ಗುಜರಾತ್ ನಲ್ಲಿದ್ದ ಬಿಜೆಪಿ ಸರ್ಕಾರ ಭಯೋತ್ಪಾದಕರ ಸ್ಲೀಪರ್ ಸೆಲ್ ಗಳನ್ನು ನಿಗ್ರಹಿಸುವ ಮೂಲಕ ಉಗ್ರವಾದವನ್ನು ಕೊನೆಗಾಣಿಸಲು ಯತ್ನಿಸುತ್ತಿದ್ದರೆ, ಈ ಹಿಂದೆ ಕೇಂದ್ರ ಸರ್ಕಾರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರ ಭಯೋತ್ಪಾದಕರನ್ನು ಬಿಡುಗಡೆ ಮಾಡುವ ಕೆಲಸ ಮಾಡುತ್ತಿತ್ತು ಎಂದು ಆರೋಪಿಸಿದ್ದಾರೆ.
I bow to the people of Surat. This affection is unparalleled and it strengthens my resolve to serve the people even more. pic.twitter.com/P6ryKtsHMD
— Narendra Modi (@narendramodi) November 27, 2022
ಇದನ್ನೂ ಓದಿ: ಗುಜರಾತಿನಲ್ಲಿ ಅಂತಿಮ ಸುತ್ತಿನ ಪ್ರಚಾರ: ಸೂರತ್‌ನಲ್ಲಿ ನಡೆಯಲಿದೆ ಅರವಿಂದ ಕೇಜ್ರಿವಾಲ್, ಮೋದಿ ರ್ಯಾಲಿ
ನಾವು ಕಾಂಗ್ರೆಸ್ ಸರ್ಕಾರಕ್ಕೆ ಭಯೋತ್ಪಾದನೆಯನ್ನು ಟಾರ್ಗೆಟ್ ಮಾಡಿ ಎಂದು ಮನವಿ ಮಾಡಿದರೆ ಅವರು ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದರು. ಅದರಿಂದಾಗಿ ಭಯೋತ್ಪಾದಕರಿಗೆ ಭಯವೇ ಇಲ್ಲದಂತಾಯಿತು. ಭಯೋತ್ಪಾದನೆ ಹೆಚ್ಚಾಗಿ ಈಗ ದೊಡ್ಡ ನಗರಗಳಿಗೂ ವ್ಯಾಪಿಸಿದೆ ಎಂದು ಮೋದಿ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ವ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.