ಭೂಪೇಂದ್ರ ಪಟೇಲ್ ನೇತೃತ್ವದ ಗುಜರಾತ್ ಸಚಿವ ಸಂಪುಟದಲ್ಲಿ ಒಬ್ಬರೇ ಸಚಿವೆ; ಯಾರು ಈ ಭಾನುಬೆನ್ ಬಾಬರಿಯಾ?

| Updated By: ರಶ್ಮಿ ಕಲ್ಲಕಟ್ಟ

Updated on: Dec 12, 2022 | 5:25 PM

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ರಾಜ್‌ಕೋಟ್ ಗ್ರಾಮಾಂತರದಿಂದ ಶಾಸಕಿಯಾಗಿ ಆಯ್ಕೆಯಾದ ಬಾಬರಿಯಾ ತಮ್ಮ ನಿಕಟ ಸ್ಪರ್ಧಿಗಳಾದ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳನ್ನು ಪರಾಭವಗೊಳಿಸಿದ್ದಾರೆ. ಈ ಚುನಾವಣೆಯಲ್ಲಿ ಬಾಬರಿಯಾ ಅವರು 119,695 (ಶೇ 52.54) ಮತಗಳಿಸಿದ್ದರು

ಭೂಪೇಂದ್ರ ಪಟೇಲ್ ನೇತೃತ್ವದ ಗುಜರಾತ್ ಸಚಿವ ಸಂಪುಟದಲ್ಲಿ ಒಬ್ಬರೇ ಸಚಿವೆ; ಯಾರು ಈ ಭಾನುಬೆನ್ ಬಾಬರಿಯಾ?
ಭಾನುಬೆನ್ ಮನೋಹರ್ ಭಾಯಿ ಬಾಬರಿಯಾ
Follow us on

ಭೂಪೇಂದ್ರ ಪಟೇಲ್ (Bhupendra Patel) ನೇತೃತ್ವದಲ್ಲಿ ಗುಜರಾತ್ (Gujarat) ಸಚಿವ ಸಂಪುಟದಲ್ಲಿ ಇಂದು 16 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪಟೇಲ್ ಅವರು ಎರಡನೇ ಬಾರಿ ಸಿಎಂ ಸ್ಥಾನ ಅಲಂಕರಿಸುತ್ತಿದ್ದು, ಈ ಸಚಿವ  ಸಂಪುಟದಲ್ಲಿ ಭಾನುಬೆನ್ ಮನೋಹರ್ ಭಾಯಿ ಬಾಬರಿಯಾ (Bhanuben Manoharbhai Babariya)ಎಂಬ ಮಹಿಳೆಗೆ ಸಚಿವ ಸ್ಥಾನ ನೀಡಲಾಗಿದೆ. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ರಾಜ್‌ಕೋಟ್ ಗ್ರಾಮಾಂತರದಿಂದ ಶಾಸಕಿಯಾಗಿ ಆಯ್ಕೆಯಾದ ಬಾಬರಿಯಾ ತಮ್ಮ ನಿಕಟ ಸ್ಪರ್ಧಿಗಳಾದ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳನ್ನು ಪರಾಭವಗೊಳಿಸಿದ್ದಾರೆ. ಈ ಚುನಾವಣೆಯಲ್ಲಿ ಬಾಬರಿಯಾ ಅವರು 119,695 (ಶೇ 52.54) ಮತಗಳಿಸಿದ್ದರು. ಅದೇ ವೇಳೆ ಎಎಪಿಯ ವಶ್ರಂಭಾಯಿ ಸಗಾಥಿಯಾ ಅವರು 71,201 (ಶೇ. 31.25) ಗಳಿಸಿ ಎರಡನೇ ಸ್ಥಾನ ಪಡೆದರು. ಕಾಂಗ್ರೆಸ್ ಪಕ್ಷದ ಬತ್ವಾರ್ ಸುರೇಶ್‌ಕುಮಾರ್ ಕರ್ಶನ್‌ಭಾಯ್ 29,175 ಮತಗಳನ್ನು (ಶೇ 12.81) ಗಳಿಸಿ ಮೂರನೇ ಸ್ಥಾನದಲ್ಲಿದ್ದರು.

ಭಾನುಬೆನ್ ಬಾಬರಿಯಾ ಯಾರು?

ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶ 2022 ರ ಘೋಷಣೆಯ ನಂತರ, ಬಾಬರಿಯಾ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಅವರು ಪ್ರಸ್ತುತ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಶನ್‌ನ ಕೌನ್ಸಿಲರ್ ಆಗಿದ್ದಾರೆ. ಅವರು ಈ ಹಿಂದೆ 2007 ಮತ್ತು 2012 ರಲ್ಲಿ ರಾಜ್‌ಕೋಟ್ ಗ್ರಾಮಾಂತರದಿಂದ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರು. 2012 ರಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ಸಗಾಥಿಯಾ ಲಖಾಭಾಯಿ ಜೇತಾಭಾಯಿ ಅವರನ್ನು ಸೋಲಿಸಿದರು.

ಇದನ್ನೂ ಓದಿ
Gujarat CM Oath Taking: ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭೂಪೇಂದ್ರ ಪಟೇಲ್
ಬಿಜೆಪಿಯಿಂದ ನನಗೆ ಅನ್ಯಾಯ, ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತೇನೆ: ಮಾಜಿ ಎಂಎಲ್​​ಸಿ ಸಂದೇಶ್​ ನಾಗರಾಜ್
Gujarat CM Oath Taking: ಗುಜರಾತ್ ಮುಖ್ಯಮಂತ್ರಿಯಾಗಿ ಇಂದು ಭೂಪೇಂದ್ರ ಪಟೇಲ್ ಪ್ರಮಾಣವಚನ; ಪ್ರಧಾನಿ ಮೋದಿ, ಬಿಜೆಪಿ ನಾಯಕರು ಭಾಗಿ

ಇತರ ಸಚಿವರು ಯಾರ್ಯಾರು?

ಭೂಪೇಂದ್ರ ಪಟೇಲ್ ಅವರು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಅವರ ಮಹಾರಾಷ್ಟ್ರ ಮತ್ತು ಗೋವಾ ಸಹವರ್ತಿಗಳಾದ ಏಕನಾಥ್ ಶಿಂಧೆ, ಪ್ರಮೋದ್ ಸಾವಂತ್ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಮೊದಲಾದವರು ಭಾಗವಹಿಸಿದ್ದಾರೆ. ಪಟೇಲ್ ಸೇರಿದಂತೆ ಸಚಿವರುಗಳಿಗೆ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಗಾಂಧಿನಗರದ ಹೊಸ ಸೆಕ್ರೆಟರಿಯೇಟ್ ಕಾಂಪ್ಲೆಕ್ಸ್‌ನಲ್ಲಿರುವ ಹೆಲಿಪ್ಯಾಡ್ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಕಳೆದ ವರ್ಷ ವಿಜಯ್ ರೂಪಾನಿ ಅವರನ್ನು ಬದಲಿಸಿದ ಪಟೇಲ್, ಗುಜರಾತಿನ 18 ನೇ ಮುಖ್ಯಮಂತ್ರಿಯಾದರು. ಬಿಜೆಪಿ ಗುಜರಾತ್‌ನಲ್ಲಿ ಸತತ ಏಳನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲು ದಾಖಲೆಯ ವಿಜಯವನ್ನು ದಾಖಲಿಸುವ ಮೂಲಕ ಆಡಳಿತ ವಿರೋಧಿಗಳನ್ನು ಸೋಲಿಸಿತು.

ಪಟೇಲ್ ಮತ್ತು ಬಾಬಾರಿಯಾ ಅವರಲ್ಲದೆ, ಕನುಭಾಯಿ ದೇಸಾಯಿ, ರಾಘವ್‌ಜಿ ಪಟೇಲ್, ರುಶಿಕೇಶ್ ಪಟೇಲ್, ಕುಬೇರ್ ದಿಂಡೋರ್, ಮುಲುಭಾಯಿ ಬೇರಾ, ಕುವರ್ಜಿ ಬವಾಲಿಯಾ ಮತ್ತು ಬಲ್ವಂತಸಿಂಹ ರಜಪೂತ್ ಅವರು ಗುಜರಾತ್ ಕ್ಯಾಬಿನೆಟ್ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಬಿಜೆಪಿಯ ಯುವ ಐಕಾನ್ ಹರ್ಷ ಸಂಘವಿ ಮತ್ತು ಜಗದೀಶ್ ವಿಶ್ವಕರ್ಮ ಅವರು ರಾಜ್ಯ ಸಚಿವರಾಗಿ (ಸ್ವತಂತ್ರ ಉಸ್ತುವಾರಿ) ಪ್ರಮಾಣ ವಚನ ಸ್ವೀಕರಿಸಿದರು. ಪ್ರಫುಲ್ ಪನ್ಶೇರಿಯಾ, ಕುಂವರ್ಜಿ ಹಲ್ಪಾಟಿ ಮತ್ತು ಪರಶೋತ್ತಮ್ ಸೋಲಂಕಿ ಅವರು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕರ್ನಾಟಕದಲ್ಲೂ ಗುಜರಾತ್ ಮಾದರಿ ಎಲೆಕ್ಷನ್: ಏನಿದು ಗುಜರಾತ್ ಮಾಡೆಲ್? ಹೇಗಿರುತ್ತೆ ಕಾರ್ಯ ತಂತ್ರ? ಇಲ್ಲಿದೆ ಮಾಹಿತಿ

 

Published On - 5:05 pm, Mon, 12 December 22