ನವದೆಹಲಿ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ (Himachal Pradesh Assembly Election) ಮತದಾನ ಮುಕ್ತಾಯಗೊಂಡಿದ್ದು, ವಿವಿಧ ವಾಹಿನಿಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳು (Himachal Pradesh Assembly Election Exit Poll Results 202) ಹೊರಬಿದ್ದಿವೆ. ಬಿಜೆಪಿಯೇ ಬಹುದೊಡ್ಡ ಪಕ್ಷವಾಗಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 12ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಶೇ 75.6ರಷ್ಟು ಮತದಾನವಾಗಿತ್ತು, ರಾಜ್ಯದಲ್ಲಿ ಅಧಿಕಾರ ಹಿಡಿಯಲು ಬೇಕಾದ ಮ್ಯಾಜಿಕ್ ನಂಬರ್ 35 ಆಗಿದೆ. ಸಮೀಕ್ಷೆಯ ಪ್ರಕಾರ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ. ಹಾಗಾದ್ರೆ ಎಕ್ಸಿಟ್ ಪೋಲ್ಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ.
ಟಿವಿ9 ಭಾರತ್ ವರ್ಷ್ ಸಮೀಕ್ಷೆ
ಹಿಮಾಚಲ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಟಿವಿ9 ಭಾರತ್ ವರ್ಷ್ ನಡೆಸಿದ ಸಮೀಕ್ಷೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ದೊರೆತಿಲ್ಲ. ಇದು ಭಾರೀ ಕುತೂಹಲಕ್ಕೆ ಮೂಡಿಸಿದೆ. ಬಿಜೆಪಿ 32ರಿಂದ 34, ಕಾಂಗ್ರೆಸ್ 30ರಿಂದ 32, ಆಮ್ ಆದ್ಮಿ ಶೂನ್ಯ ಸಾಧನೆ ಮಾಡುತ್ತೆ ಎಂದು ಅಂದಾಜಿಸಿದ್ರೆ, ಪಕ್ಷೇತರರರು ಮೂರರಿಂದ 5 ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆ ಇದೆ.
ರಿಪಬ್ಲಿಕ್ ಮತ್ತು ಪಿ ಮಾರ್ಕ್ ನಡೆಸಿದ ಸರ್ವೆ
ಹಾಗೆಯೇ ರಿಪಬ್ಲಿಕ್ ಮತ್ತು ಪಿ ಮಾರ್ಕ್ ನಡೆಸಿದ ಸರ್ವೆ ಪ್ರಕಾರ ಬಿಜೆಪಿ 34ರಿಂದ 39 ಸ್ಥಾನ, ಕಾಂಗ್ರೆಸ್ 28ರಿಂದ 33 ಕ್ಷೇತ್ರದಲ್ಲಿ ಆಪ್ ಒಂದರಲ್ಲಿ, ಪಕ್ಷೇತರರಿಗೆ 1ರಿಂದ 4 ಸ್ಥಾನ ಲಭಿಸೋ ಸಾಧ್ಯತೆ ಇದೆ. ಇನ್ನೂ ಟೈಮ್ಸ್ ನೌ-ಇಟಿಜಿ ಸರ್ವೆ ಪ್ರಕಾರ ಬಿಜೆಪಿಗೆ 38, ಕಾಂಗ್ರೆಸ್‌ಗೆ 28 ಸ್ಥಾನದಲ್ಲಿ ಗೆಲ್ಲುವ ಸಾಧ್ಯತೆ ಇದೆ.
ನ್ಯೂಸ್ ಎಕ್ಸ್ ಮತ್ತು ಜನ್ ಕಿ ಬಾತ್ ಸರ್ವೆ
ಇನ್ನೂ ನ್ಯೂಸ್ ಎಕ್ಸ್ ಮತ್ತು ಜನ್ ಕಿ ಬಾತ್ ಸರ್ವೆಯಲ್ಲಿ ಬಿಜೆಪಿಗೆ 32ರಿಂದ 40 ಸ್ಥಾನ, ಕಾಂಗ್ರೆಸ್ 27ರಿಂದ 34 ಸ್ಥಾನದಲ್ಲಿ ಗೆಲ್ಲುವ ಸಾಧ್ಯತೆ ಇದೆ. ಹಾಗೆಯೇ ಝೀ ನ್ಯೂಸ್ ಪೋಲ್‌ನಲ್ಲಿ ಬಿಜೆಪಿಗೆ 35ರಿಂದ 40, ಕಾಂಗ್ರೆಸ್‌ಗೆ 20ರಿಂದ 25, ಆಪ್ ಮೂರು ಸ್ಥಾನದಲ್ಲಿ ವಿಜಯಪತಾಕೆ ಹಾರಿಸುವ ಸಾಧ್ಯತೆ ಇದೆ.
ಆಜ್ ತಕ್, ಇಂಡಿಯಾಟುಡೆ ಆಕ್ಸಿಸ್ ಮೈ ಇಂಡಿಯಾ ಸರ್ವೆ ತದ್ವಿರದ್ಧವಾಗಿದ್ದು ಕಾಂಗ್ರೆಸ್‌ಗೆ ಬಹುಮತ ಸಿಗುವ ಸಾಧ್ಯತೆ ಇದೆ ಅಂತಾ ಲೆಕ್ಕಾ ಹಾಕಿದೆ. ಬಿಜೆಪಿಗೆ 24ರಿಂದ 34, ಕಾಂಗ್ರೆಸ್ 30ರಿಂದ 40 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದೆ.
ಇಂಡಿಯಾ ಟಿವಿ ಸಮೀಕ್ಷೆ
ಇಂಡಿಯಾ ಟಿವಿ ಸಮೀಕ್ಷೆಯಲ್ಲಿ ಬಿಜೆಪಿಗೆ ಅಧಿಕಾರ ಸಾಧ್ಯತೆ ಇದ್ದು, ಬಿಜೆಪಿ 35 ರಿಂದ 40 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್‌ಗೆ 26-31 ಸ್ಥಾನಗಳು ಸಿಗುವ ಸಾಧ್ಯತೆಗಳಿವೆ. ಇನ್ನು ಆಮ್ ಆದ್ಮಿ ಪಕ್ಷ 0, ಇತರರು 3 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದೆ.
ಒಟ್ಟಿನಲ್ಲಿ ಬಹುತೇಕ ಸರ್ವೆಯಲ್ಲಿ ಬಿಜೆಪಿಯೇ ಈ ಬಾರಿ ಅಧಿಕಾರದ ಗದ್ದುಗೆ ಏರಲಿದೆ ಅನ್ನೋ ಲೆಕ್ಕ ಹೊರಬಿದ್ದಿದೆ. ಡಿಸೆಂಬರ್ 8ರಂದು ಚುನಾವಣೆ ಫಲಿತಾಂಶ ಹೊರಬೀಳಲಿದ್ದು, ಯಾರಿಗೆ ಗೆಲುವು ಅನ್ನೋದು ಬಯಲಾಗಲಿದೆ.