ರಾಜ್ಯದಲ್ಲಿ ಶಾಂತಿಯುತ ಚುನಾವಣೆ ಯಶಸ್ವಿ: ರಾಜ್ಯದ ಜನತೆಗೆ, ಪೊಲೀಸ್ ಇಲಾಖೆಗೆ ಅಭಿನಂದನೆ ತಿಳಿಸಿದ ಎಡಿಜಿಪಿ ಅಲೋಕ್ ಕುಮಾರ್
ರಾಜ್ಯದಲ್ಲಿ ಶಾಂತಿಯುತ ವಿಧಾನಸಭಾ ಚುನಾವಣೆ ಯಶಸ್ವಿ ಹಿನ್ನೆಲೆ ಪೊಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಅಭಿನಂದನೆ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಶಾಂತಿಯುತ ವಿಧಾನಸಭಾ ಚುನಾವಣೆ ಯಶಸ್ವಿ ಹಿನ್ನೆಲೆ ಪೊಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ (Alok Kumar) ಅಭಿನಂದನೆ ತಿಳಿಸಿದ್ದಾರೆ. ರಾಜ್ಯದ ಜನತೆಗೆ ಧನ್ಯವಾದಗಳು. ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ Tv9 ಮೂಲಕ ಕೃತಜ್ಞೆತೆ ತಿಳಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಬಹಳ ಹೈ ವೊಲ್ಟೇಜ್ ಚುನಾವಣೆ ಇದಾಗಿತ್ತು. ಗೃಹ ಸಚಿವರು, ರಾಹುಲ್ ಗಾಂಧಿ ಸೇರಿದಂತೆ ಸಾಕಷ್ಟು ವಿಐಪಿಗಳು ಬಂದಿದ್ದರು. ಮೂರು ತಿಂಗಳಿಂದ ಪ್ರಧಾನಿಯವರ 18 ರ‍್ಯಾಲಿಗಳು ಮಾಡಿದ್ದಾರೆ. ಪ್ರಚಾರದ ಸಂದರ್ಭದಲ್ಲಿ ಹಲವು ಯಾತ್ರೆಗಳು ಸಹ ನಡೆದವು. ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಹಗಲು ರಾತ್ರಿ ಶ್ರಮಿಸಿದ್ದಾರೆ. ಪ್ರತಿ ಜಿಲ್ಲೆ ಮೇಲೂ ನಿಗಾ ವಹಿಸಲಾಗಿತ್ತು ಎಂದರು.
ರಾಜ್ಯದ ಗಡಿ ಭಾಗಗಳಲ್ಲಿ 51 ಬಾರ್ಡರ್ ಮೀಟಿಂಗ್ಗಳನ್ನು ಮಾಡಲಾಗಿತ್ತು. ಅಂತಿಮವಾಗಿ ಚುನಾವಣೆ ಯಾವುದೇ ಸಮಸ್ಯೆ ಆಗದಂತೆ ನಡೆಯಿತು. ಈ ಹಿನ್ನಲೆ ಚುನಾವಣಾ ಮುಖ್ಯಧಿಕಾರಿಗಳು ಡಿಜೆಗೆ ಕರೆ ಮಾಡಿ ಸಿಬ್ಬಂದಿಗಳ ಕಾರ್ಯ ಶ್ಲಾಘಿಸಿದ್ದಾರೆ. ಶಾಂತಿಯುವತ ಚುನಾವಣೆಯ ಬಗ್ಗೆ ನಂಬಿಕೆ ಇರಲಿಲ್ಲ. ನಾಡಿನ ಜನ ಮೃದು ಸ್ವಭಾವದವರು. ಪೊಲೀಸರಿಂದ ಉತ್ತಮವಾಗಿ ಚುನಾವಣೆ ಮುಕ್ತಾಯಗೊಂಡಿದೆ. ಕರ್ನಾಟಕದ ಜನತೆಗೆ ನನ್ನ ಧನ್ಯವಾದ ತಿಳಿಸಿದರು.
ಇದನ್ನೂ ಓದಿ: ಸಿಎಂ ಆಯ್ಕೆ ಕಗ್ಗಂಟಿಗೆ ಮುಕ್ತಿ, ಈಗ ಸಚಿವ ಸ್ಥಾನಕ್ಕಾಗಿ ಲಾಬಿ ಶುರು: ತಂಡೋಪತಂಡವಾಗಿ ದೆಹಲಿಗೆ ತೆರಳಿದ ಶಾಸಕರು
ಚುನಾವಣೆ ಸಾಕಷ್ಟು ಜಿದ್ದಾಜಿದ್ದಿ ಹಾಗೂ ಪೈಪೊಟಿ ಇದ್ದಕಾರಣ ವಾತಾವರಣ ಬದಲಾಗಿತ್ತು. ನಮ್ಮಲ್ಲಿ ಸಹ ಏನಾದರೂ ಆಗ ಬಹುದೆಂಬ ಭಯವಿತ್ತು. ಎಲ್ಲಾ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಹೀಗಾಗಿ ಯಾವುದೇ ಅಡತಡೆಗಳು ಆಗಲಿಲ್ಲ ಎಂದರು.
ನಾಲ್ಕು ಹಂತಗಳು ನಮಗೆ ಚಾಲೆಂಜಿಂಗ್
ನಾಲ್ಕು ಹಂತಗಳು ನಮಗೆ ಚಾಲೆಂಜಿಂಗ್ ಆಗಿತ್ತು. ರೌಡಿಗಳ ವಿರುದ್ಧ ನಿಗಾ ವಹಿಸಿ ತಡೆಗಟ್ಟುವ ಕ್ರಮ, ಸೀಜರ್, ರಾಜ್ಯದಲ್ಲಿ ಕಾನೂನು ಸಮಸ್ಯೆ ಆಗಬಾರದು ಮತ್ತು ವಿವಿಐಪಿ ಬಂದೊಬಸ್ತ್. ಒಂದೇ ಸಮಯದಲ್ಲಿ ನಾಲ್ಕರ ಮೇಲೂ ನಿಗಾ ವಹಿಸುವ ಸಂದರ್ಭ ಬಂದಿತ್ತು. ಬಹಳ ಸಕ್ಷಮ ರೀತಿಯಲ್ಲಿ ನಮ್ಮ ಅಧಿಕಾರಿ ಸಿಬ್ಬಂದಿಗಳು ನಿರ್ವಹಣೆ ಮಾಡಿದ್ದಾರೆ. ಒಂದು ಲಕ್ಷ ಸಿಬ್ಬಂದಿಗಳ ಶ್ರಮದಿಂದ ಯಾವುದೇ ಸಮಸ್ಯೆ ಆಗಿಲ್ಲ.
ಇದನ್ನೂ ಓದಿ: Kalaburagi: ಕಲಬುರಗಿ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಮತ್ತು ಟೇಕಾಪ್ ಸೇವೆಗೆ ಡಿಜಿಸಿಎ ಅನುಮೋದನೆ
ಈ ಬಾರಿ ದಾಖಲೆ ಮೊತ್ತದ ಹಣ ಜಪ್ತಿಯಾಗಿದೆ. ರಾಜ್ಯದಲ್ಲಿ 106 ಕೋಟಿ ರೂ. ಅಧಿಕ ನಗದು ಪತ್ತೆಯಾಗಿದೆ. ಚುನಾವಣೆ ದಿನವೂ ಕೆಲವೆಡೆ ಹಂಚಲು ತಂದಿದ್ದ ಹಣ ಪತ್ತೆಯಾಗಿತ್ತು. ಅವುಗಳನ್ನು ಸಹ ನಾವು ಸೀಜ್ ಮಾಡಿದ್ದೇವೆ. ಪ್ರೋ ಆ್ಯಕ್ಟೀವ್ ಕ್ರಮಗಳನ್ನು ಪೊಲೀಸರು ತೆಗೆದುಕೊಂಡಿದ್ದಾರೆ. ಹೆಮ್ ಗಾರ್ಡ್, ಫಾರೆಸ್ಟ್ ಗಾರ್ಡ್, ಡಿಆರ್ ಸಿಬ್ಬಂದಿಗಳು, ಸಿವಿಲ್ ಸಿಬ್ಬಂದಿಗಳು ಸೇರಿದಂತೆ 84 ಸಾವಿರ ಸಿಬ್ಬಂದಿಗಳು, ಕೆಎಸ್ಆರ್ಪಿ ಸಿಬ್ಬಂದಿಗಳು, ಸ್ಪೆಷಲ್ ಯೂನಿಟ್ಸ್ಗಳು ಯಶಸ್ಸಿನಲ್ಲಿ ಭಾಗಿದಾರರು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಸಿಬ್ಬಂದಿಗಳು ಹೆಚ್ಚು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಚುನಾವಣೆ ದಿನ ಕಾಡು, ಬೆಟ್ಟ ಅನ್ನದೇ ಹಲವು ಕಡೆ ಕೆಲಸ ಮಾಡಿದ್ದಾರೆ. ಅವರ ಶ್ರಮ ದೊಡ್ಡದು. ಇದು ಕಲೆಕ್ಟೀವ್ ಕರ್ತವ್ಯ. ಒಬ್ಬರಿಂದ ಆಗುವ ಕೆಲಸ ಆಗಿರಲಿಲ್ಲ. ರಾಜ್ಯದ ಇಡಿ ಪೊಲೀಸ್ ಇಲಾಖೆ ಉತ್ತಮವಾಗಿ ಚುನಾವಣೆ ನಡೆಯಲು ಶ್ರಮವಹಿಸಿದೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:47 am, Fri, 19 May 23