ರಾಗಿ ಕಣ ಆನೇಕಲ್​ನಲ್ಲಿ ಬಿಸಿಯೇರಿದ ಅಸೆಂಬ್ಲಿ ಚುನಾವಣಾ ಕಣ: ಕಾಂಗ್ರೆಸ್-ದಳ ಟಿಕೆಟ್ ಫೈನಲ್, ಬಿಜೆಪಿ ಟಿಕೆಟ್​ಗಾಗಿ ಮುಂದುವರಿದಿದೆ ಸರ್ಕಸ್!

Anekal Assembly constituency: ಬಿಜೆಪಿಯಿಂದ‌ 3 ಅಭ್ಯರ್ಥಿಗಳ ಹೆಸರು‌ ಚಾಲ್ತಿಯಲ್ಲಿದೆ. ಆರ್ ಎಸ್ ಎಸ್ ಹಿನ್ನೆಲೆಯ ಹುಲ್ಲಳ್ಳಿ ‌ಶ್ರೀನಿವಾಸ್ ಟಿಕೆಟ್ ಸಿಗುವ ಭರವಸೆಯಿಂದ ‌ಗ್ರೌಂಡ್ ವರ್ಕ್ ಶುರುಮಾಡಿಕೊಂಡಿದ್ರೆ, ಮಾಜಿ ‌ಕೆ‌ಎ‌ಎಸ್ ಅಧಿಕಾರಿ ಕೆ ಶಿವರಾಮ್ ಟಿಕೆಟ್ ಗಾಗಿ ಯಡಿಯೂರಪ್ಪ ಅಂಡ್ ಟೀಂ ಸುತ್ತಾ ಗಿರಿಕಿ ಹೊಡೆಯುತ್ತಿದೆ. ‌

ರಾಗಿ ಕಣ ಆನೇಕಲ್​ನಲ್ಲಿ ಬಿಸಿಯೇರಿದ ಅಸೆಂಬ್ಲಿ ಚುನಾವಣಾ ಕಣ: ಕಾಂಗ್ರೆಸ್-ದಳ ಟಿಕೆಟ್ ಫೈನಲ್, ಬಿಜೆಪಿ ಟಿಕೆಟ್​ಗಾಗಿ ಮುಂದುವರಿದಿದೆ ಸರ್ಕಸ್!
ರಾಗಿ ಕಣ ಆನೇಕಲ್​ನಲ್ಲಿ ಬಿಸಿಯೇರಿದ ಅಸೆಂಬ್ಲಿ ಚುನಾವಣಾ ಕಣ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Apr 04, 2023 | 12:39 PM

ಮುಂಬರುವ ಅಸೆಂಬ್ಲಿ ಚುನಾವಣೆಗಾಗಿ (Karnataka Assembly Elections 2023) ರಾಗಿನಾಡು ಆನೇಕಲ್ (Anekal)ನಲ್ಲಿ ರಾಜಕೀಯ ಚಟುವಟಿಕೆ ತೀವ್ರಗೊಂಡಿದೆ. ಎರಡು ಬಾರಿ ಗೆದ್ದು ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿ ಕಾಂಗ್ರೆಸ್ (Congress) ಇದ್ದರೆ, ಕಳೆದ ಬಾರಿ ಸ್ಪರ್ಧೆ ಮಾಡದ ಜೆಡಿಎಸ್ (JDS) ತನ್ನ ತಾಕತ್ತು ತೋರಿಸಲು ಫೀಲ್ಡಿಗಿಳಿದಿದೆ. ಬಿಜೆಪಿ ಪಕ್ಷದಲ್ಲಿ ಟಿಕೆಟ್ ಯಾರಿಗೆ ಕೊಡಬೇಕು ಅನ್ನೋ ಸರ್ಕಸ್ ಈಗಲೂ ನಡೆಯುತ್ತಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ವಿಧಾನಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಾ ಇದೆ. ಹತ್ತಾರು ವರ್ಷಗಳಿಂದ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರಾನೇರ ಫೈಟ್ ಇರುತ್ತಿತ್ತು. ಆದರೆ ಈ ಬಾರಿ ಜೆಡಿಎಸ್ ಪಕ್ಷದ ಕೆಪಿ ರಾಜು ಎಂಟ್ರಿ ಕೊಟ್ಟು ಎರಡೂ ಪಕ್ಷಗಳಿಗೆ ಶಾಕ್ ನೀಡಿದ್ದಾರೆ. 2013 ಮತ್ತು 2019 ರ ಚುನಾವಣೆಯಲ್ಲಿ ಎರಡು ಬಾರಿ ಗೆಲುವಿನ‌ ನಗಾರಿ ಬಾರಿಸಿದ್ದ ಆನೇಕಲ್ ಶಾಸಕ‌ ಬಿ ಶಿವಣ್ಣ, ಮೂರನೇ ಬಾರಿಯೂ ಗೆದ್ದು ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದ್ದರೆ, ಬಿಜೆಪಿ (BJP) ಪಾಳಯ ಇನ್ನೂ ಅಭ್ಯರ್ಥಿ ಆಯ್ಕೆಯನ್ನು ಫೈನಲ್ ಮಾಡಿಕೊಂಡಿಲ್ಲ.

ಸಧ್ಯ ಬಿಜೆಪಿಯಿಂದ‌ ಮೂವರು ಅಭ್ಯರ್ಥಿಗಳ ಹೆಸರು‌ ಪ್ರಬಲವಾಗಿ ಚಾಲ್ತಿಯಲ್ಲಿದೆ. ಆರ್ ಎಸ್ ಎಸ್ ಹಿನ್ನೆಲೆಯಿಂದ‌ ಬಂದ ಹುಲ್ಲಳ್ಳಿ ‌ಶ್ರೀನಿವಾಸ್ ಟಿಕೆಟ್ ಸಿಗುವ ಭರವಸೆಯಿಂದ ‌ಗ್ರೌಂಡ್ ವರ್ಕ್ ಶುರುಮಾಡಿಕೊಂಡಿದ್ರೆ, ಮಾಜಿ ‌ಕೆ‌ಎ‌ಎಸ್ ಅಧಿಕಾರಿ ಕೆ ಶಿವರಾಮ್ ಟಿಕೆಟ್ ಗಾಗಿ ಯಡಿಯೂರಪ್ಪ ಅಂಡ್ ಟೀಂ ಸುತ್ತಾ ಗಿರಿಕಿ ಹೊಡೆಯುತ್ತಿದೆ. ‌ಇನ್ನು ಯುವ ಘಟಕ ಅಧ್ಯಕ್ಷ ಸಂದೀಪ್ ಕೂಡ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳುವ ರೇಸ್ ನಲ್ಲಿದ್ದಾರೆ.

Also Read:

ಸಿದ್ದರಾಮಯ್ಯ ಸ್ಪಷ್ಟನೆ : ಡಿಕೆ ಶಿವಕುಮಾರ್​ನನ್ನು ಹೈಕಮಾಂಡ್​ ಸಿಎಂ ಮಾಡಲ್ಲ ಎಂದು ನಾನು ಹೇಳಿಲ್ಲ

ಆದರೆ ಯಾರಿಗೆ ಟಿಕೆಟ್ ಅನ್ನೋದು ಸಧ್ಯ ಈಗಲೂ ಗೊತ್ತಿರದ ವಿಚಾರ. ಕೆಲ ದಿನಗಳ ಹಿಂದೆ ವಿದೇಶಾಂಗ ಸಚಿವ ಆರ್ ಜಯಶಂಕರ್ ಹುಲ್ಲಳ್ಳಿ ಶ್ರೀನಿವಾಸ್ ಮನೆಗೆ ಭೇಟಿ ಕೊಟ್ಟಿದ್ದು, ಹಾಗೂ ಬಿಜೆಪಿ ಕೋರ್ ಕಮಿಟಿ ಮೀಟಿಂಗ್ ಗಳಲ್ಲಿ ಹುಲ್ಲಳ್ಳಿ ಶ್ರೀನಿವಾಸ್ ಅವರಿಗೆ ಪ್ರಾಮುಖ್ಯತೆ ಕೊಟ್ಟಿರುವುದನ್ನು ಗಮನಿಸಿದರೆ ಬಹುತೇಕ ಹುಲ್ಲಳ್ಳಿ ಶ್ರೀನಿವಾಸ್ ಗೆ ಟಿಕೆಟ್ ಅನೌನ್ಸ್ ಆಗುಬಹುದು ಅಂತ ಬಿಜೆಪಿ ಮೂಲಗಳು ತಿಳಿಸಿವೆ. ಆದರೆ ಕಡೇ ಕ್ಷಣದಲ್ಲೂ ಬದಲಾವಣೆ ಆದ್ರೂ ಆಗಬಹುದು.

ಇನ್ನು ಚುನಾವಣಾ ಸ್ಪರ್ಧೆ ವಿಚಾರಕ್ಕೆ ಬಂದ್ರೆ, ಕಳೆದ ಬಾರಿ ಜೆಡಿಎಸ್ ಅನುಪಸ್ಥತಿಯಲ್ಲಿ ಬಿಜೆಪಿ ಪಕ್ಷದ ಎ‌ ನಾರಾಯಣ ಸ್ವಾಮಿ ವಿರುದ್ಧ 8,627 ಮತಗಳ ಅಂತರದಲ್ಲಿ ಗೆದ್ದಿದ್ದ ಕಾಂಗ್ರೆಸ್ ಪಕ್ಷದ ಬಿ‌ ಶಿವಣ್ಣ, ಈ ಬಾರಿ ಜೆಡಿಎಸ್ ಎಂಟ್ರಿಯಿಂದ ಶಾಕ್ ಆಗಿದ್ದಾರೆ. ಜೆಡಿಎಸ್ ಸ್ಪರ್ಧೆಯಿಂದಾಗಿ ಕಾಂಗ್ರೆಸ್ ಈ ಬಾರಿ ಆನೇಕಲ್ ಕೈ ತಪ್ಪಬಹದು ಅನ್ನೋ ಭೀತಿ ಶುರುವಾಗಿದೆ. ತಮ್ಮ ಕಾರ್ಯಕರ್ತರು ಜೆಡಿಎಸ್ ಕಡೆಗೆ ಚದುರಿ ಹೋಗದಂತೆ ಪ್ರಯತ್ನ ಮಾಡುತ್ತಿದ್ದಾರೆ. ಇದರ ಮಧ್ಯೆ ಬಿಜೆಪಿ ಅಭ್ಯರ್ಥಿ ಯಾರೂ ಅಂತ ಗೊತ್ತಾಗದ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳು ಗೇಮ್ ಪ್ಲ್ಯಾನ್ ಮಾಡದೇ ಅಬ್ಸರ್​​ವೇಶನ್ ಮೋಡ್​ನಲ್ಲಿವೆ.

ವರದಿ: ಸಯ್ಯದ್ ನಿಜಾಮುದ್ದೀನ್, ಟಿವಿ 9, ಆನೇಕಲ್

ಕರ್ನಾಟಕ ಅಸೆಂಬ್ಲಿ ಚುನಾವಣೆ ಕುರಿತಾದ ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ