Arkalgud Election 2023 Winner: ಅರಕಲಗೂಡು ಕ್ಷೇತ್ರದಲ್ಲಿ ಎ ಮಂಜು ಗೆಲುವು; ಮೂರು ಪಕ್ಷಗಳಿಂದ ಗೆದ್ದ ಸಾಧನೆ
A Manju: ಅರಕಲಗೂಡು ಕ್ಷೇತ್ರದಲ್ಲಿ ಎದುರಾದ ಚತುಷ್ಕೋನ ಸ್ಪರ್ಧೆಯಲ್ಲಿ ಜೆಡಿಎಸ್ನ ಎ ಮಂಜು ಸುಲಭವಾಗಿ ಗೆದ್ದಿದ್ದಾರೆ. ಕಾಂಗ್ರೆಸ್ನಿಂದ ಬಂಡಾಯ ಎದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಕೃಷ್ಣೇಗೌಡರು ಎರಡನೇ ಸ್ಥಾನ ಪಡೆದಿದ್ದಾರೆ.
Arkalgud Assembly Election Results 2023: ಬಿಜೆಪಿಯಿಂದ ಜೆಡಿಎಸ್ಗೆ ಪಕ್ಷಾಂತರವಾಗಿದ್ದ ಎ ಮಂಜು ಅರಕಲಗೂಡು ಕ್ಷೇತ್ರವನ್ನು ಮರಳಿ ಪಡೆಯುವಲ್ಲಿ ಸಫಲರಾಗಿದ್ದಾರೆ. ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಅರಕಲಗೂಡು ಕ್ಷೇತ್ರ ಜೆಡಿಎಸ್ ಪಾಲಾಗಿದೆ. ಚತುಷ್ಕೋನ ಸ್ಪರ್ಧೆ ಕಂಡ ಈ ಕ್ಷೇತ್ರದಲ್ಲಿ ವಾಲೆ ಮಂಜು ನಿರೀಕ್ಷೆಗಿಂತ ತುಸು ಸುಲಭವಾಗಿ ಗೆಲುವು ಕಂಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಇಲ್ಲಿ 3 ಮತ್ತು 4ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಕಾಂಗ್ರೆಸ್ನಲ್ಲಿ ಟಿಕೆಟ್ ಸಿಗದೇ ಬಂಡಾಯ ಎದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಎಂ.ಟಿ. ಕೃಷ್ಣೇಗೌಡ ಎರಡನೇ ಸ್ಥಾನ ಪಡೆದಿದ್ದಾರೆ.
ಅರಕಲಗೂಡು ವಿಧಾನಸಭಾ ಕ್ಷೇತ್ರ ಚುನಾವಣೆ 2023 ಫಲಿತಾಂಶ ವಿವರ
- ಜೆಡಿಎಸ್: ಎ ಮಂಜು (74,643 ಮತಗಳು)
- ಪಕ್ಷೇತರ: ಎಂ.ಟಿ. ಕೃಷ್ಣೇಗೌಡ (55,038 ಮತಗಳು)
- ಎಚ್.ಪಿ. ಶ್ರೀಧರಗೌಡ (35,947 ಮತಗಳು)
- ಎಚ್. ಯೋಗಾರಮೇಶ (19,575 ಮತಗಳು)
ಇದನ್ನೂ ಓದಿ: Belur Election 2023 Winner: ಬೇಲೂರಿನಲ್ಲಿ ತ್ರಿಕೋನ ಯುದ್ಧದಲ್ಲಿ ಗೆದ್ದುಬೀಗಿದ ಬಿಜೆಪಿಯ ಹುಲ್ಲಳ್ಳಿ ಸುರೇಶ್
ಜೆಡಿಎಸ್ನಿಂದ ವಲಸೆ ಬಂದಿದ್ದ ಶ್ರೀಧರ್ ಗೌಡಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಎಂಟಿ ಕೃಷ್ಣೇಗೌಡರು ಬಂಡಾಯ ಎದ್ದಿದ್ದು ಕಾಂಗ್ರೆಸ್ ಸೋಲಿಗೆ ಕಾರಣವಾಗಿರಬಹುದು. ಎ ಮಂಜು ಬಿಜೆಪಿ ಸೇರಿದಾಗ ಜೆಡಿಎಸ್ ಪಾಳಯ ಸೇರಿದ್ದ ಯೋಗಾರಮೇಶ್ ಈ ಬಾರಿ ಬಿಜೆಪಿಗೆ ಮರಳಿದ್ದರು. ಆದರೆ, ಅವರಿಂದ ಪೈಪೋಟಿ ನಿರೀಕ್ಷೆ ಇರಲಿಲ್ಲ.
ದೇವೇಗೌಡರ ಕುಟುಂಬದ ವಿರುದ್ಧ ರಾಜಕಾರಣ ಮಾಡಿಕೊಂಡೇ ಬಂದಿದ್ದ ವಾಲೆ ಮಂಜು ಎಂತಲೇ ಹೆಸರುವಾಸಿಯಾಗಿರುವ ಎ ಮಂಜು ಇದೀಗ ಜೆಡಿಎಸ್ನಿಂದ ಸ್ಪರ್ಧಿಸಿರುವುದೇ ಕೌತುಕ ಎನಿಸಿತ್ತು. ಈ ಕ್ಷೇತ್ರದಲ್ಲಿ ಅವರು 1994ರಿಂದಲೂ ಸತತವಾಗಿ ಸ್ಪರ್ಧಿಸುತ್ತಾ ಬಂದಿದ್ದಾರೆ. 1999ರಲ್ಲಿ ಬಿಜೆಪಿ ಟಿಕೆಟ್ನಲ್ಲಿ ಗೆಲುವು ಕೂಡ ಪಡೆದಿದ್ದರು. 2008 ಮತ್ತು 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ನಲ್ಲಿ ಸ್ಪರ್ಧಿಸಿ ಗೆದ್ದಿದ್ದರು. 2018ರ ಚುನಾವಣೆಯಲ್ಲಿ ಜೆಡಿಎಸ್ನ ಎಟಿ ರಾಮಸ್ವಾಮಿ ಎದುರು ಎ ಮಂಜು ಸೋಲನುಭವಿಸಿದ್ದರು. ಈಗ ಜೆಡಿಎಸ್ ಟಿಕೆಟ್ನಲ್ಲಿ ಗೆಲುವು ಪಡೆಯುವುದರೊಂದಿಗೆ ಎ ಮಂಜು ಒಂದು ಕ್ಷೇತ್ರದಲ್ಲಿ 3 ಪಕ್ಷಗಳಿಂದ ಜಯ ಪಡೆದ ಸಾಧನೆ ಮಾಡಿದ್ದಾರೆ.