ಚುನಾವಣೆಯಲ್ಲಿ ಪಕ್ಷ ಹೇಳಿದಂತೆ ಕೇಳುತ್ತೇನೆ, ಪಕ್ಷದ ತೀರ್ಮಾನಕ್ಕೆ ನಾನು ಬದ್ಧ: ಎಟಿ ರಾಮಸ್ವಾಮಿ
ಚುನಾವಣೆಯಲ್ಲಿ ಪಕ್ಷ ಹೇಳಿದಂತೆ ಕೇಳುತ್ತೇನೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ದ ಎಂದು ಮಾಜಿ ಶಾಸಕ ಎ.ಟಿ ರಾಮಸ್ವಾಮಿ ಹೇಳಿದರು.
ಹಾಸನ: ಚುನಾವಣೆಯಲ್ಲಿ ಪಕ್ಷ ಹೇಳಿದಂತೆ ಕೇಳುತ್ತೇನೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ದ ಎಂದು ಮಾಜಿ ಶಾಸಕ ಎ.ಟಿ ರಾಮಸ್ವಾಮಿ (AT Ramaswamy) ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದುಪರ ಸಂಘಟನೆಗಳ ಸದಾಶಿವ ಆಯೋಗದ ವರದಿ ಜಾರಿ ಮಾಡುವಂತೆ ಎಲ್ಲರೂ ಒತ್ತಾಯ ಮಾಡಿದರು. ಜಾರಿ ಆದ ಮೇಲೆ ಜನರನ್ನು ಎತ್ತಿಕಟ್ಟುವ ಕೆಲಸವನ್ನು ವಿರೋಧ ಪಕ್ಷಗಳು ಮಾಡುತ್ತಿದ್ದಾರೆ. ನಾನು ವಿರೋಧ ಪಕ್ಷದವರೆಗೆ ಕೇಳುತ್ತೇನೆ ನಿಮ್ಮ ನಿಲುವೇನು ಸ್ಪಷ್ಟಪಡಿಸಿ. ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿ ರಾಜಕೀಯ ಪಿತೂರಿಯನ್ನು ಮಾಡುತ್ತಿರುವುದು ಸರಿಯಾದ ನಡೆಯಲ್ಲ ಎಂದು ಕಿಡಿಕಾರಿದರು. ಜಯಪ್ರಕಾಶ್ ನಾರಾಯಣ್, ದೇವೇಗೌಡರು, ರಾಮಕೃಷ್ಣ ಹೆಗ್ಡೆ ಜೈಲಿಗೆ ಹೋದರು. ಆವಾಗ ಪ್ರಜಾಪ್ರಭುತ್ವ ಸಮಾಧಿ ಆಗಿರಲಿಲ್ವಾ. ಜಯಲಲಿತಾ, ಲಾಲೂ ಪ್ರಸಾದ್ ಯಾದವ್ ಜೈಲಿಗೆ ಹಾಕಿದ್ರಲಾ ಅವಾಗ ಪ್ರಜಾಪ್ರಭುತ್ವ ಸತ್ತಿರಲಿಲ್ವಾ ಎಂದು ಪ್ರಶ್ನಿಸಿದರು.
2013 ರಲ್ಲಿ ಸುಗ್ರೀವಾಜ್ಞೆ ತಂದರು. ಆದರೆ ಅದನ್ನು ರಾಹುಲ್ ಗಾಂಧಿ ಹರಿದು ಬಿಸಾಕಿದರು. ಈಗ ಅವರ ಬುಡಕ್ಕೆ ಬಂದಮೇಲೆ, ನ್ಯಾಯಾಲಯದ ತೀರ್ಪು ಒಪ್ಪಿಕೊಳ್ಳದೆ ಹೋರಾಟ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಗೇಡು. ಬಿಜೆಪಿಯವರು ಅತ್ಯಂತ ಪ್ರೀತಿ, ವಿಶ್ವಾಸದಿಂದ, ಗೌರವಯುತವಾಗಿ ಆಹ್ವಾನ ನೀಡಿದ್ದಾರೆ. ಪಕ್ಷ ಏನು ಹೇಳುತ್ತೆ ನಾನು ಅದನ್ನು ಮಾಡುತ್ತೇನೆ. ಚುನಾವಣೆಗೆ ಸ್ಪರ್ಧಿಸೋದು ಪಕ್ಷದ ತೀರ್ಮಾನಕ್ಕೆ ಬಿಟ್ಟದ್ದು ಎಂದರು.
ಇದನ್ನೂ ಓದಿ: Kichcha Sudeep: ನನ್ನ ಜೊತೆಗೆ ಬಿಜೆಪಿ ಪರವೂ ನಟ ಕಿಚ್ಚ ಸುದೀಪ್ ಪ್ರಚಾರ ಮಾಡುತ್ತಾರೆ: ಸಿಎಂ ಬಸವರಾಜ ಬೊಮ್ಮಾಯಿ
ಪಕ್ಷದ ತತ್ವದ ಸಿದ್ದಾಂತಕ್ಕೂ ಬದ್ಧ
ವಿರೋಧ ಪಕ್ಷಗಳು ಬಿಜೆಪಿ ಪಕ್ಷವನ್ನು 40% ಸರ್ಕಾರ ಎಂದು ಆರೋಪಿಸುತ್ತಿರುವಾಗ ಪ್ರಮಾಣಿಕರೆನಿಸಿ ಕೊಂಡಿರುವ ರಾಮಸ್ವಾಮಿ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಾಡಿ, ಯಾವ ಪಕ್ಷದಲ್ಲಿ ದೋಷಗಳಿಲ್ಲ ಹೇಳಿ, ವ್ಯವಸ್ಥೆಯೊಳಗೆ ಇದ್ದು ಅದನ್ನು ಸರಿ ಮಾಡುಬೇಕು. ಯಾರು ಯಾರು ಎಷ್ಟು ದುಡ್ಡು ಕೊಟ್ಟು ಟಿಕೆಟ್ ತೆಗೆದುಕೊಳ್ಳತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಏನೇನು ನಡಿತು, ಯಾಕೆ ತಿರಸ್ಕಾರ ಮಾಡಿದ್ರು, ಹೈಕಮಾಂಡ್ ಏನು ಹೇಳಿದೆ ನನಗೆ ಗೊತ್ತಿದೆ. ಪಕ್ಷದ ತತ್ವದ ಸಿದ್ದಾಂತಕ್ಕೂ ಬದ್ಧ, ಮನುಷ್ಯನನ್ನು ಮನುಷ್ಯನಾಗಿ ನೋಡುತ್ತೇನೆ ಎಂದು ಹೇಳಿದರು.
ಹೆಚ್.ಡಿ ರೇವಣ್ಣ ವಿರುದ್ಧ ವಾಗ್ದಾಳಿ
ಪುನೀತ್ ಕೆರೆಹಳ್ಳಿ ಪ್ರಕರಣ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ನೈತಿಕ ಪೊಲೀಸ್‌ಗಿರಿ ತಪ್ಪು, ಯಾರು ಅವಕಾಶ ಕೊಟ್ಟಿದ್ದಾರೆ. ಕಾನೂನು ಇದೆ ಕ್ರಮ ಕೈಗೊಳ್ಳುತ್ತೆ, ಅಪರಾಧಿಗಳನ್ನು ಬಿಡುವುದಿಲ್ಲ. ಪೊಲೀಸರು ತಪ್ಪಿತಸ್ಥರನ್ನು ಬಂಧಿಸುತ್ತಾರೆ. ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ವಿಚಾರವಾಗಿ ಮಾತನಾಡಿದ್ದು, ಮುಸ್ಲಿಂ ಮೀಸಲಾತಿ ರದ್ದು ಮಾಡಿರುವುದು ಅನ್ಯಾಯವಾಗಿಲ್ಲ. ಹತ್ತು ಪರ್ಸೆಂಟ್ ಮೀಸಲಾತಿಗೆ ಸೇರಿಸಿದ್ದಾರೆ. ದೇವರ ಬಳಿ ರೈತರಿಗೆ, ನಾಡಿಗೆ ಒಳ್ಳೆಯದಾಗಲಿ ಎಂದು ಕೇಳಿದ್ದೇನೆ ಅಂತಾರೆ ನಾನು ಬಗರ್‌ಹುಕುಂ ಸಾಗುವಳಿ ಮೀಟಿಂಗ್ ಮಾಡಿ ಹಕ್ಕುಪತ್ರ ನೀಡಲು ಹೋದರೆ ಮೀಟಿಂಗ್‌ಗೆ ಹೋಗ ಬೇಡಿ ಅಂತ ತಹಸೀಲ್ದಾರ್‌ಗೆ ಫೋನ್ ಮಾಡುತ್ತಾರೆ ಎಂದು ಹೆಚ್.ಡಿ ರೇವಣ್ಣ ವಿರುದ್ಧ ವಾಗ್ದಾಳಿ ಮಾಡಿದರು.
ಇದನ್ನೂ ಓದಿ: Karnataka Assembly Election 2023: ರಾಜಕೀಯ ನಿಲುವು ಪ್ರಕಟಿಸಿದ ನಟ ಕಿಚ್ಚ ಸುದೀಪ್
ಒಂದು ಕ್ಷೇತ್ರದ ಟಿಕೆಟ್ ಸಮಸ್ಯೆ ಬಗೆಹರಿಸಲು ಆಗಿಲ್ಲ ರಾಜ್ಯದ ಸಮಸ್ಯೆ ಹೇಗೆ ಬಗೆಹರಿಸುತ್ತೀರಾ?
ರೈತರಿಗೆ ಅನ್ನ ಕೊಡುವ ಬದಲು ಕಲ್ಲು ಹಾಕುತ್ತಾರೆ. ಡಿಸಿಸಿ ಬ್ಯಾಂಕ್‌ನಲ್ಲಿ ರೈತರ ಹೆಸರಿನಲ್ಲಿ ನಕಲಿ ಸಾಲ ಕೊಟ್ಟಿದ್ದಾರೆ. ಹೇಳೋದು ರೈತರ ಹೆಸರು, ಮಾಡೋದು ಅನಾಚಾರ ಮನೆಯ ಮುಂದೆ ಬೃಂದಾವನ. ಹಾಸನದಲ್ಲಿ ಇವತ್ತು ಏನು ನಡೆಯುತ್ತಿದೆ. ಇಡೀ ಜಿಲ್ಲೆಯನ್ನು ಇವರ ಕುಟುಂಬದ ಆಸ್ತಿ ಮಾಡಿಕೊಳ್ಳಲು ಹೋರಟಿದ್ದಾರಾ. ಜನರನ್ನು ಗುಲಾಮರನ್ನಾಗಿ ಮಾಡಿಕೊಳ್ಳಲು ಹೊರಟಿದ್ದೀರಾ ಎಂದು ಪ್ರಶ್ನಿಸಿದರು. ಹಾಸನ ಒಂದು ಕ್ಷೇತ್ರದ ಟಿಕೆಟ್ ಸಮಸ್ಯೆ ಬಗೆಹರಿಸಲು ಆಗಿಲ್ಲ, ಇನ್ನೂ ರಾಜ್ಯದ ಸಮಸ್ಯೆ ಬಗೆಹರಿಸುತ್ತೀರಾ ಎಂದು ಕಿಡಿಕಾರಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:10 pm, Wed, 5 April 23