Bailhongal Election Result: ಬೈಲಹೊಂಗಲ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಕಾಂಗ್ರೆಸ್​​ನ ಮಹಾಂತೇಶ್ ಎಸ್ ಕೌಜಲಗಿ ಗೆಲುವು

Bailhongal Assembly Election Results 2023 Live Counting Updates: ಬೈಲಹೊಂಗಲ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಶಂಕರ ಮಾಡಲಗಿ (ಜೆಡಿಎಸ್), ಬಿ. ಎಂ. ಚಿಕ್ಕನಗೌಡರ ಎಎಪಿ, ಬಿಜೆಪಿ ಅಭ್ಯರ್ಥಿ ಜಗದೀಶ್ ಚನ್ನಪ್ಪ ಮೇಟಗದ್, ಮತ್ತು ಕಾಂಗ್ರೆಸ್ ಪಕ್ಷದ ಮಹಾಂತೇಶ್ ಎಸ್ ಕೌಜಲಗಿ ಕಣದಲ್ಲಿದ್ದಾರೆ.

Bailhongal Election Result: ಬೈಲಹೊಂಗಲ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಕಾಂಗ್ರೆಸ್​​ನ ಮಹಾಂತೇಶ್ ಎಸ್ ಕೌಜಲಗಿ ಗೆಲುವು
ಮಹಾಂತೇಶ್ ಎಸ್ ಕೌಜಲಗಿ

Updated on: May 13, 2023 | 8:11 PM

Bailhongal Assembly Election Results 2023: 1989, 1999 ಮತ್ತು 2013 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರ ಹಿಡಿದಾಗಲೂ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕ್ಷೇತ್ರ ಮಾತ್ರ ಜನತಾ ಪರಿವಾರದಾಗಿತ್ತು.1999ರಲ್ಲಿ ಸಂಯುಕ್ತ ಜನತಾದಳದಿಂದ ಗೆದ್ದ ಮಹಾಂತೇಶ ಕೌಜಲಗಿ 2004 ರಲ್ಲಿ ಕಾಂಗ್ರೆಸ್ ಸೇರಿದಾಗ ಇಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಅಂದಹಾಗೆ ಇಲ್ಲಿ ಎರಡು ಬಾರಿ ಬಿಜೆಪಿ ಗೆದ್ದಿದೆ. 2013ರಲ್ಲಿ ಇಲ್ಲಿ ಕೆಜೆಪಿ ಗೆದ್ದಿದ್ದು 2018 ರಲ್ಲಿ ಸುದೀರ್ಘ 33 ವರ್ಷಗಳ ಬಳಿಕ ಇಲ್ಲಿ ಕೈ ಮೇಲುಗೈ ಸಾಧಿಸಿತ್ತು. ಈ ಬಾರಿ ಕಾಂಗ್ರೆಸ್ ಪಕ್ಷದ ಮಹಾಂತೇಶ್ ಎಸ್ ಕೌಜಲಗಿ ಇಲ್ಲಿ ಗೆಲುವು ಸಾಧಿಸಿದ್ದಾರೆ.

2004ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ವಿರೂಪಾಕ್ಷಿ ಸಿ ಎಂ ಬರೋಬ್ಬರಿ 11,575 ಮತಗಳ ಅಂತರದಿಂದ ಗೆದ್ದು ಬೀಗಿದ್ದರು. 2008ರಲ್ಲಿ ಬಿಜೆಪಿಯ ಜಗದೀಶ್ ವಿರೂಪಾಕ್ಷಿ ಸಿ ಮೇಟಗುಡ್ಡ ಗೆದ್ದಿದ್ದು, 2013ರಲ್ಲಿ ಕೆಜಿಪಿ ಪಕ್ಷದ ಡಾ. ವಿಶ‍್ವನಾಥ್ ಈರನಗೌಡ ಪಾಟೀಲ್ ಗೆದ್ದಿದ್ದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮಹಾಂತೇಶ್ ಎಸ್ ಕೌಜಲಗಿ ಅವರು 5,122 ಮತಗಳ ಅಂತರದಿಂದ ಪಕ್ಷೇತರ ಅಭ್ಯರ್ಥಿ ಜಗದೀಶ್ ಚನ್ನಪ್ಪ ಮೆಟಗುಡ್ಡ ಅವರನ್ನು ಪರಾಭವಗೊಳಿಸಿದ್ದಾರೆ.
ಈ ಬಾರಿ ಶಂಕರ ಮಾಡಲಗಿ ಜೆಡಿಎಸ್, ಬಿ. ಎಂ. ಚಿಕ್ಕನಗೌಡರ ಎಎಪಿ, ಬಿಜೆಪಿ ಅಭ್ಯರ್ಥಿ ಜಗದೀಶ್ ಚನ್ನಪ್ಪ ಮೇಟಗದ್, ಮತ್ತು ಕಾಂಗ್ರೆಸ್ ಪಕ್ಷದ ಮಹಾಂತೇಶ್ ಎಸ್ ಕೌಜಲಗಿ ಕಣದಲ್ಲಿದ್ದಾರೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 1:40 am, Sat, 13 May 23

Follow Us