Basavakalyan Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟಗೊಂಡಿದೆ. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಿಂದ (Basavakalyan Assembly constituency) ಬಿಜೆಪಿಯು ಹಾಲಿ ಶಾಸಕ ಶರಣು ಸಲಗರ ಅವರನ್ನೇ ಕಣಕ್ಕಿಳಿಸಿದ್ದು, ಅವರು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷವು ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಪುತ್ರ ವಿಜಯ್ ಧರಂಸಿಂಗ್ ಅವರನ್ನು ಕಣಕ್ಕಿಳಿಸಿದೆ. ಜೆಡಿಎಸ್ನಿಂದ ಸಂಜೀವ್ ಕುಮಾರ್ ಸ್ಪರ್ಧಿಸಿದ್ದರೆ ಎಎಪಿಯಿಂದ ದೀಪಕ ಮಲಗಾರ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರದಲ್ಲಿ 2021ರಲ್ಲಿ ನಡೆದಿದ್ದ ಉಪಚುನಾವಣೆಯಲ್ಲಿ ಶರಣು ಸಲಗರ 20,629 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಬಿಜೆಪಿಯ ಮಲ್ಲಿಕಾರ್ಜುನ ಖೂಬಾ ವಿರುದ್ಧ ಜಯ ಗಳಿಸಿದ್ದ ಶರಣು ಸಲಗರ ನಂತರ ಪಕ್ಷ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2013ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಜೆಡಿಎಸ್ನ ಮಲ್ಲಿಕಾರ್ಜುನ್ ಸಿದ್ರಾಮಪ್ಪ ಖೂಬಾ ಗೆಲುವು ಸಾಧಿಸಿದ್ದರು.
ಇತ್ತೀಚೆಗೆ ರಾಮನವಮಿಯ ಸಂದರ್ಭದಲ್ಲಿ ಶರಣು ಸಲಗರ ಅವರು ಬಸವಕಲ್ಯಾಣದಲ್ಲಿ ರಾಮನ ಪ್ರತಿಕೃತಿ ತೊಡೆ ಮೇಲೆ ನಿಂತು ಕೊರಳಿಗೆ ಹೂವಿನ ಹಾರ ಹಾಕಿಸಿಕೊಂಡಿದ್ದು, ವಿವಾದಕ್ಕೆ ಕಾರಣವಾಗಿತ್ತು. ಇದು ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿತ್ತು. ವಿಚಾರ ವಿವಾದಕ್ಕೀಡಾಗುತ್ತಿದ್ದಂತೆಯೇ ಅವರು ಕ್ಷಮೆಯಾಚಿಸಿದ್ದರು.
Published On - 12:19 am, Sat, 13 May 23