Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರುಣಾ ಕ್ಷೇತ್ರದಲ್ಲಿ ಎಲ್ಲ ವರ್ಗದ ಜನರು ಬಿಜೆಪಿ ಪರವಾಗಿದ್ದಾರೆ; ಬಸವರಾಜ ಬೊಮ್ಮಾಯಿ

ವರುಣಾ ಬಹಳ ಉತ್ತಮಗೊಂಡಿದ್ದು, ಎಲ್ಲಾ ವರ್ಗದ ಜನರು ನಮ್ಮ ಪರವಾಗಿದ್ದಾರೆ. ನಮಗೆ ಬಹಳ ಉತ್ತಮವಾದ ಸಂಖ್ಯೆ ಬರುವ ನಿರೀಕ್ಷೆ ಇದೆ. ಸ್ಪಷ್ಟ ಬಹುಮತಕ್ಕಿಂತ ಒಂದಷ್ಟು ಸ್ಥಾನ ಹೆಚ್ಚಾಗಿಯೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವರುಣಾ ಕ್ಷೇತ್ರದಲ್ಲಿ ಎಲ್ಲ ವರ್ಗದ ಜನರು ಬಿಜೆಪಿ ಪರವಾಗಿದ್ದಾರೆ; ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us
ಕಿರಣ್ ಹನುಮಂತ್​ ಮಾದಾರ್
|

Updated on: May 05, 2023 | 1:31 PM

ಮೈಸೂರು: ‘ವರುಣಾ(Varuna) ಬಹಳ ಉತ್ತಮಗೊಂಡಿದ್ದು, ಎಲ್ಲಾ ವರ್ಗದ ಜನರು ನಮ್ಮ ಪರವಾಗಿದ್ದಾರೆ. ನಮಗೆ ಬಹಳ ಉತ್ತಮವಾದ ಸಂಖ್ಯೆ ಬರುವ ನಿರೀಕ್ಷೆ ಇದೆ. ಸ್ಪಷ್ಟ ಬಹುಮತಕ್ಕಿಂತ ಒಂದಷ್ಟು ಸ್ಥಾನ ಹೆಚ್ಚಾಗಿಯೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದರು. ರಾಜ್ಯದ ಹನುಮ ದೇವಾಲಯಗಳ ಅಭಿವೃದ್ಧಿ ಮಾಡ್ತಿವಿ ಎಂಬ ಕಾಂಗ್ರೆಸ್(Congress) ಭರವಸೆ ವಿಚಾರವಾಗಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ‘ಕಾಂಗ್ರೆಸ್​ಗೆ ಎಷ್ಟು ಅಭದ್ರತೆ ಕಾಡುತ್ತಿದೆ ಎಂಬುದಕ್ಕೆ ಈ ಭರವಸೆಯೆ ಸಾಕ್ಷಿ. ಮೊದಲು ತಪ್ಪು ಮಾಡೋದು ನಂತರ ಅದಕ್ಕೆ ಓವರ್ ರಿಯಾಕ್ಟ್​ ಮಾಡೋದು ಎರಡು ತಪ್ಪೆ. ಈ ಕೆಲಸವನ್ನು ಈಗ ಕಾಂಗ್ರೆಸ್ ಮಾಡುತ್ತಿದೆ ಎಂದರು.

ಮೈಸೂರಿನಲ್ಲಿ ಮಾತನಾಡಿದ ಅವರು ‘ಕಾಂಗ್ರೆಸ್​ನ ಮಾತುಗಳಲ್ಲಿ ಅಪ್ರಮಾಣಿಕತೆ ಮತ್ತು ಅಭದ್ರತೆ ಎದ್ದು ಕಾಣುತ್ತಿದೆ. ಸಿದ್ದರಾಮಯ್ಯ ಮೊದಲು ಒಂದೇ ದಿನ ಕ್ಷೇತ್ರಕ್ಕೆ ಬರುತ್ತೇನೆ ಅಂದರು, ಈಗ ಸ್ಟಾರ್​ಗಳ ಸಮೇತ ಬಂದು ಪ್ರಚಾರ ಮಾಡ್ತಿದ್ದಾರೆ. ಜೊತೆಗೆ ಲಿಂಗಾಯತರ ವಿಚಾರದಲ್ಲಿ ಸಿದ್ದರಾಮಯ್ಯ ಸ್ಪಷ್ಟೀಕರಣ ಕುರಿತು ‘ಮೊದಲು ಡ್ಯಾಮೇಜ್ ಮಾಡೋದು ನಂತರ ಡ್ಯಾಮೇಜ್ ಕಂಟ್ರೋಲ್​ಗೆ ಯತ್ನಿಸೋದು ಇದೆಲ್ಲಾ ಈಗ ನಡೆಯಲ್ಲ. ಕ್ಯಾಮರಾ ಇರೋದರಿಂದ ಜನರು ಎಲ್ಲವನ್ನೂ ನೋಡುತ್ತಾರೆ. ಈಗ ಸ್ಪಷ್ಟೀಕರಣಕ್ಕೆ ಬೆಲೆ ಇಲ್ಲ ಎನ್ನುವ ಮೂಲಕ ಸಿಎಂ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ:ಲಿಂಗಾಯತರ ಕ್ಷಮೆ ಕೋರಿದ್ರಾ ಸಿದ್ದರಾಮಯ್ಯ? ವರುಣಾದಲ್ಲಿ ಮಾಜಿ ಸಿಎಂಗೆ ಶುರುವಾಗಿದೆಯಾ ಈ ಒಂದು ಭಯ?

ಬಜರಂಗ ದಳಕ್ಕೆ ಆಂಜನೇಯಗೆ ಏನು ಸಂಬಂಧ ಎಂಬ ಡಿಕೆ ಶಿವಕುಮಾರ್​ಗೆ ಸಿಎಂ ಬೊಮ್ಮಾಯಿ ಕೊಟ್ಟ ಉತ್ತರ ಹೀಗಿತ್ತು

ಹುಬ್ಬಳ್ಳಿ: ಬಜರಂಗದಳ ನಿಷೇಧ ಬಗ್ಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದು, ಇದು ಭಾರೀ ವಿವಾದಕ್ಕೀಡಾಗಿತ್ತು. ಇದಕ್ಕೆ ಬಿಜೆಪಿ ನಾಯಕರು ಹಾಗೂ ಹಿಂದೂಪರ ಸಂಘಟನೆಗಳು ಕಾಂಗ್ರೆಸ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ಕುರಿತು ಡಿಕೆ ಶಿವಕುಮಾರ್ ಆಂಜನೇಯನಿಗೂ ಬಜರಂಗದಳಕ್ಕೂ ಏನು ಸಂಬಂಧ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ‘ರಾಮನಿಗೂ ಹನುಮನಿಗೂ ಯಾವ ರೀತಿ ಸಂಬಂಧ ಇದೆಯೋ, ಅದೇ ರೀತಿಯ ಸಂಬಂಧ ಹನುಮನಿಗೂ ಬಜರಂಗದಳಕ್ಕೂ ಇದೆ. ಇದನ್ನು ಕಾಂಗ್ರೆಸ್ ಪಕ್ಷ ಮೊದಲು ಅರ್ಥ ಮಾಡಿಕೊಳ್ಳಲಿ ಎನ್ನುವ ಮೂಲಕ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದರು.

ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ಬರುವ ರೀತಿಯಲ್ಲಿ ಕಾಂಗ್ರೆಸ್ ವರ್ತಿಸುತ್ತಿದೆ. ಜನರ ಭಾವನೆಗಳಿಗೆ ಧಕ್ಕೆ ಬರುವ ರೀತಿಯಲ್ಲಿ ಮಾತನಾಡೋದು ಸರಿಯಲ್ಲ. ನಾವು ನಮ್ಮ ಕಾರ್ಯಕ್ರಮಗಳ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಅವರು ಅವರ ಭರವಸೆಗಳ ಮೇಲೆ ಚುನಾವಣೆ ಎದುರಿಸುತ್ತಿದ್ದಾರೆ. ಅನಾವಶ್ಯಕವಾಗಿ ಕೆದಕಿ ಚುನಾವಣೆಯ ವಾತಾವರಣವನ್ನ ಜಾತಿ, ಧರ್ಮ, ಕೋಮು ಭಾವನೆಗಳಿಂದ ಕೆರಳಿಸೋದು ಸರಿಯಲ್ಲ. ಇದು ಕಾಂಗ್ರೆಸ್​ನ ತುಷ್ಟೀಕರಣ ರಾಜಕಾರಣ ತೋರ್ಪಡಿಸುತ್ತೆ ಎಂದಿದ್ದರು.

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ