AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದವರು ಕೂಡಾ ಮೋದಿಯಂಥಾ ಪ್ರಧಾನಿ ನಮಗೂ ಬೇಕು ಅಂತಿದ್ದಾರೆ: ಸಿಎಂ ಬೊಮ್ಮಾಯಿ

ಮೋದಿಯವರನ್ನು ವಿಶ್ವನಾಯಕ ಎಂದು ಕರೆಯಲು ಕಾರಣವಿದೆ. ವಿರೋಧಿ ರಾಷ್ಟ್ರಗಳಲ್ಲಿನ ಜನ ಕೂಡ ಮೋದಿಯನ್ನು ಒಪ್ಪಿಕೊಂಡಿದ್ದಾರೆ.  2014ರಲ್ಲಿ ಮೋದಿ ಪ್ರಧಾನಿಯಾದ ಮೇಲೆ ದೇಶ ಅಭಿವೃದ್ಧಿ ಆಗುತ್ತಿದೆ. ವಿಪಕ್ಷಗಳು ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ.

ಪಾಕಿಸ್ತಾನದವರು ಕೂಡಾ ಮೋದಿಯಂಥಾ ಪ್ರಧಾನಿ ನಮಗೂ ಬೇಕು ಅಂತಿದ್ದಾರೆ: ಸಿಎಂ ಬೊಮ್ಮಾಯಿ
ಮೋದಿಯವರನ್ನು ಸ್ವಾಗತಿಸಿದ ಬೊಮ್ಮಾಯಿ
ರಶ್ಮಿ ಕಲ್ಲಕಟ್ಟ
|

Updated on:Mar 12, 2023 | 3:02 PM

Share

ಮಂಡ್ಯ(Mandya) ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ಬೆಂಗಳೂರು- ಮೈಸೂರು ಎಕ್ಸ್​​ಪ್ರೆಸ್​​ ವೇ(Bengaluru mysuru expressway)ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು  ಸಿಎಂ ಬಸವರಾಜ ಬೊಮ್ಮಾಯಿ (Basavaraj bommai) ಹಸಿರು ಶಾಲು ಹೊದಿಸಿ, ಮೈಸೂರು ಪೇಟಾ ತೊಡಿಸಿ, ಮಲ್ಲಿಗೆ ಹೂವಿನ ಹಾರ ಹಾಕಿ, ನೆನಪಿನ ಕಾಣಿಕೆ ನೀಡಿ ಸನ್ಮಾನ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯಂತಹ ನಾಯಕ ಬೇಕು ಎಂದು ಪಾಕಿಸ್ತಾನಿಗಳೂ ಹೇಳಿಕೊಂಡಿದ್ದಾರೆ. ನಾವು ಅವರನ್ನು ಜಾಗತಿಕ ನಾಯಕ ಎಂದು ಕರೆಯುತ್ತೇವೆ ಮತ್ತು ಅದಕ್ಕೆ ಕಾರಣವಿದೆ. ಏಕೆಂದರೆ ಭಾರತೀಯರಷ್ಟೇ ಅಲ್ಲ, ಪಾಕಿಸ್ತಾನಿಗಳೂ ಅವರನ್ನು ಶ್ರೇಷ್ಠ ನಾಯಕ ಎಂದು ಒಪ್ಪಿಕೊಂಡಿದ್ದಾರೆ. ಇಂದು ತಮ್ಮ ಸಮಸ್ಯೆ ಬಗೆಹರಿಸಲು ಮೋದಿಯಂತಹ ಪ್ರಧಾನಿ ಬೇಕು ಎಂದು ಹೇಳುತ್ತಿದ್ದಾರೆ’ ಎಂದು ಮಂಡ್ಯದಲ್ಲಿ 6 ಪಥದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಬೊಮ್ಮಾಯಿ ಹೇಳಿದ್ದಾರೆ. ಪಾಕಿಸ್ತಾನಿಗಳಿಗೆ ಪ್ರಧಾನಿ ಮೋದಿಯಂತಹ ನಾಯಕ ಬೇಕು ಎಂಬ ಪಾಕಿಸ್ತಾನದ ವ್ಯಕ್ತಿಯೊಬ್ಬರು ಹೇಳಿರುವ ವಿಡಿಯೊ ವೈರಲ್ ಆಗಿತ್ತು.ಈ  ವಿಡಿಯೊವನ್ನು ಉಲ್ಲೇಖಿಸಿ ಸಿಎಂ ಈ ಮಾತು ಹೇಳಿದ್ದಾರೆ.

ಪಾಕಿಸ್ತಾನ, ಚೀನಾ ನಾಗರಿಕರಿಗೂ ನರೇಂದ್ರ ಮೋದಿ ಅಂದರೆ ಇಷ್ಟ.ಮೋದಿ ರೀತಿ ನಾಯಕ ಬೇಕು ಅಂತಿದ್ದಾರೆ ಪಾಕಿಸ್ತಾನದ ಜನ. ಮೋದಿ ವಿಶ್ವ ನಾಯಕ ಅಂತಾ ಹೊಗಳುತ್ತಾರೆ ಚೀನಾದವರು. ಅಮೆರಿಕ ಪ್ರಜೆಗಳೂ ನರೇಂದ್ರ ಮೋದಿಗೆ ಬಹುಪರಾಕ್ ಹೇಳಿದ್ದಾರೆ ಎಂದು ಬೊಮ್ಮಾಯಿ ಪ್ರಧಾನಿಯವರನ್ನು ಕೊಂಡಾಡಿದ್ದಾರೆ.ಮಂಡ್ಯ ಅಂದ್ರೆ ಇಂಡಿಯಾ ಎಂದು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡ್ಯ ಜನರನ್ನು ಹುರಿದುಂಬಿಸಿದರು.

ಇದನ್ನೂ ಓದಿ: Bengaluru-Mysuru Expressway:ಕರ್ನಾಟಕದ ಮೊದಲ ಎಕ್ಸ್​ಪ್ರೆಸ್​ವೇ ಲೋಕಾರ್ಪಣೆಗೊಳಿಸಿದ ಮೋದಿ, ಇಲ್ಲಿವೆ ಫೋಟೋಗಳು

ಮೋದಿಯವರನ್ನು ವಿಶ್ವನಾಯಕ ಎಂದು ಕರೆಯಲು ಕಾರಣವಿದೆ. ವಿರೋಧಿ ರಾಷ್ಟ್ರಗಳಲ್ಲಿನ ಜನ ಕೂಡ ಮೋದಿಯನ್ನು ಒಪ್ಪಿಕೊಂಡಿದ್ದಾರೆ.  2014ರಲ್ಲಿ ಮೋದಿ ಪ್ರಧಾನಿಯಾದ ಮೇಲೆ ದೇಶ ಅಭಿವೃದ್ಧಿ ಆಗುತ್ತಿದೆ. ವಿಪಕ್ಷಗಳು ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ. ಅಡಿಗಲ್ಲು ಹಾಕಿ ಉದ್ಘಾಟನೆ ಮಾಡುತ್ತಿರುವುದು ಮೋದಿ ಸರ್ಕಾರ. ಡಬಲ್ ಇಂಜಿನ್ ಸರ್ಕಾರ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಂಡ್ಯದ ಮೈಶುಗರ್ ಕಾರ್ಖಾನೆ ಪುನಾರಂಭ ಮಾಡಿದ್ದು ಬಿಜೆಪಿ. ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರಿಗೆ ಅನುಕೂಲವಾಗಿದೆ. ಮಂಡ್ಯದ 2 ಲಕ್ಷಕ್ಕೂ ಹೆಚ್ಚು ಜನ ಯೋಜನೆ ಲಾಭ ಪಡೆದಿದ್ದಾರೆ. ಬಿಜೆಪಿಯಿಂದ ಮಾತ್ರ ಭಾರತದ ಅಭಿವೃದ್ಧಿ ಸಾಧ್ಯ. ಎಲ್ಲ ಪಕ್ಷಗಳ ಅಭಿವೃದ್ಧಿ ರಿಪೋರ್ಟ್ ನೋಡಿ ನೀವು ಬೆಂಬಲ ನೀಡಿ. ಮುಂದಿನ ದಿನಗಳಲ್ಲಿ ಬಿಜೆಪಿ ಬೆಂಬಲಿಸುವ ಮೂಲಕ ಆಶೀರ್ವದಿಸಿ ಎಂದಿದ್ದಾರೆ ಬೊಮ್ಮಾಯಿ.

ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:30 pm, Sun, 12 March 23