PM Modi Roadshow: ಮಂಡ್ಯದಲ್ಲಿ ಮೋದಿ ರೋಡ್‌ಶೋ, ದಾರಿಯುದ್ದಕ್ಕೂ ಹೂಮಳೆಗೆರೆದು ಜೈಕಾರ ಕೂಗಿದ ಜನ
Modi in Mandya ಪ್ರವಾಸಿಮಂದಿರ ವೃತ್ತದಿಂದ ನಂದಾ ಸರ್ಕಲ್‌ವರೆಗೆ ರೋಡ್‌ಶೋ ನಡೆಯಲಿದೆ. ಮಾರ್ಗಮಧ್ಯೆ ಕಾರು ನಿಲ್ಲಿಸಿ ಮೋದಿ ಜನರತ್ತ ಕೈಬೀಸಿದ್ದಾರೆ.
ಮಂಡ್ಯದ (Mandya) ರಸ್ತೆಗಳಲ್ಲಿ ನರೇಂದ್ರ ಮೋದಿಯವರನ್ನು(Narendra Modi) ನೋಡಲು ಸಾವಿರಾರು ಜನರು ಜಮಾಯಿಸಿದ್ದು ಹೂವಿನ ಸುರಿಮಳೆಗೈದು ಪ್ರಧಾನಿಯವರನ್ನು ಸ್ವಾಗತಿಸಿದ್ದಾರೆ. ಮಂಡ್ಯದ ಪ್ರವಾಸಿಮಂದಿರ ಸರ್ಕಲ್ ನಿಂದ ಮೋದಿ ರೋಡ್‌ಶೋ (Modi Road Show) ಆರಂಭಿಸಿದ್ದಾರೆ. ಪ್ರವಾಸಿಮಂದಿರ ವೃತ್ತದಿಂದ ನಂದಾ ಸರ್ಕಲ್‌ವರೆಗೆ ರೋಡ್‌ಶೋ ನಡೆಯಲಿದೆ. ಮಾರ್ಗಮಧ್ಯೆ ಕಾರು ನಿಲ್ಲಿಸಿ ಮೋದಿ ಜನರತ್ತ ಕೈಬೀಸಿದ್ದಾರೆ. 1.8 ಕಿ.ಮೀ. ದೂರ ಪ್ರಧಾನಮಂತ್ರಿ ನರೇಂದ್ರ ಮೋದಿ ರೋಡ್ ಶೋ ನಡೆಯಲಿದೆ. ರೋಡ್‌ಶೋ ನಂತರ, ವಿಧಾನಸಭಾ ಚುನಾವಣೆಗೆ ಮುನ್ನ ಆಡಳಿತಾರೂಢ ಬಿಜೆಪಿಗೆ ರಾಜಕೀಯ ಪ್ರಾಮುಖ್ಯತೆ ಹೊಂದಿರುವ ಒಕ್ಕಲಿಗ ಪ್ರಾಬಲ್ಯ ಜಿಲ್ಲೆಗೆ ಭೇಟಿ ನೀಡುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಯೋಜನೆಗಳನ್ನು ಉದ್ಘಾಟಿಸಿದ ನಂತರ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
#WATCH | Thousands of people line along the streets of Mandya to extend a warm welcome to PM Modi
PM will dedicate the Bengaluru-Mysuru Expressway to the nation and lay the foundation stone for Mysuru-Kushalnagar 4-lane highway here
(Source: DD) pic.twitter.com/yFUnZWOiq1
— ANI (@ANI) March 12, 2023
ಮಂಡ್ಯ ಹಳೆ ಮೈಸೂರು ಭಾಗದ ಭಾಗವಾಗಿದ್ದು, ಇಲ್ಲಿ ಬಿಜೆಪಿ ದುರ್ಬಲ ಎಂದು ಪರಿಗಣಿಸಲಾಗಿದೆ. ಹಾಗಾಗಿ ಈ ಬಾರಿಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುವ ಗುರಿಯೊಂದಿಗೆ ಈ ಪ್ರದೇಶದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವತ್ತ ಬಿಜೆಪಿ ಗಮನಹರಿಸಿದೆ.
ಮೋದಿ ಅವರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಯೋಜನೆಯನ್ನು ಶೀಘ್ರದಲ್ಲೇ ಮಂಡ್ಯದಲ್ಲಿ ದೇಶಕ್ಕೆ ಅರ್ಪಿಸಲಿದ್ದಾರೆ, ಇದು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು 3 ಗಂಟೆಗಳಿಂದ 75 ನಿಮಿಷಗಳಿಗೆ ಕಡಿಮೆ ಮಾಡುತ್ತದೆ. ಯೋಜನೆಯು NH-275 ರ ಬೆಂಗಳೂರು-ನಿಡಘಟ್ಟ-ಮೈಸೂರು ವಿಭಾಗದ 6-ಪಥವನ್ನು ಒಳಗೊಂಡಿರುತ್ತದೆ.
ಸುಮಾರು 8,480 ಕೋಟಿ ರೂಪಾಯಿ ವೆಚ್ಚದಲ್ಲಿ 118 ಕಿಮೀ ಉದ್ದದ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಧಾನ ಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.
ಮೈಸೂರು-ಕುಶಾಲನಗರ 4 ಪಥದ ಹೆದ್ದಾರಿಗೂ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 92 ಕಿಲೋಮೀಟರ್‌ಗಳಷ್ಟು ವ್ಯಾಪಿಸಿರುವ ಈ ಯೋಜನೆಯನ್ನು ಸುಮಾರು 4,130 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.
Traditional welcome given to PM @narendramodi during his visit to Mandya, Karnataka pic.twitter.com/j4LcFodG4t
— DD News (@DDNewslive) March 12, 2023
ಈ ಯೋಜನೆಯು ಬೆಂಗಳೂರಿನೊಂದಿಗೆ ಕುಶಾಲನಗರದ ಸಂಪರ್ಕವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಪ್ರಯಾಣದ ಸಮಯವನ್ನು ಸುಮಾರು 5 ರಿಂದ ಕೇವಲ 2.5 ಗಂಟೆಗಳವರೆಗೆ ಅರ್ಧಕ್ಕೆ ಇಳಿಸಲು ಸಹಾಯ ಮಾಡುತ್ತದೆ.
ಇತ್ತೀಚೆಗಷ್ಟೇ ಮಂಡ್ಯದ ಲೋಕಸಭೆಯ ಸ್ವತಂತ್ರ ಸಂಸದೆ ಬಿಜೆಪಿಗೆ ಬೆಂಬಲ ಸೂಚಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:31 pm, Sun, 12 March 23