ಬೆಂಗಳೂರು: ನಿಷೇಧಿತ ಪಿಎಫ್‌ಐ (PFI) ಸಂಘಟನೆ ಜೊತೆ ಗುರುತಿಸಿಕೊಂಡಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸಂಘಟನೆಯೊಂದಿಗೆ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಬಿಜೆಪಿ ಶುಕ್ರವಾರ ಆರೋಪಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಇಂಥದೊಂದು ಆರೋಪ ಮಾಡುವ ಮೂಲಕ ವಿಡಿಯೋ ಒಂದನ್ನು ಬಿಜೆಪಿ ಟ್ವೀಟ್ ಮಾಡಿಕೊಂಡಿದೆ. ಕೇರಳ ಕಾಂಗ್ರೆಸ್ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರ ವಿಡಿಯೋವನ್ನು ಬಿಜೆಪಿ ರಾಜ್ಯ ಘಟಕ ಹಂಚಿಕೊಂಡಿದ್ದು, ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಎರಡೂ ಕೈ ಜೋಡಿಸಿವೆ ಎಂದು ಹೇಳಿದೆ.
ಕೇರಳ ಕಾಂಗ್ರೆಸ್ ಸಂಸದ ಉಣ್ಣಿತ್ತಾನ್ (Rajmohan Unnithan) ಅವರು ಕರ್ನಾಟಕದಲ್ಲಿ ಮತಗಳ ವಿಭಜನೆಗೆ ತಂತ್ರ ರೂಪಿಸಿದ್ದು, ಒಂದು ಸಮುದಾಯದ ಮತಗಳಿಗಾಗಿ ಅವರು ಹತಾಶೆಗೊಂಡಿರುವುದು ಬಹಿರಂಗವಾಗಿದೆ. ಮತಗಳನ್ನು ವಿಭಜಿಸದಂತೆ ಎಸ್ಡಿಪಿಐಗೆ ಒತ್ತಾಯಿಸಿದ್ದು, ಆ ಮೂಲಕ ಬಜರಂಗದಳವನ್ನು ಗುರಿಯಾಗಿಸುವ ಅವರ ಬಲವಾದ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಇದು ಅಪಾಯಕಾರಿಯಾಗಿದ್ದು, ಮತಗಳ ವಿಭಜನೆಯ ಈ ಕಾರ್ಯಕ್ಕೆ ಕೋಮುವಾದಿ ಕಾಂಗ್ರೆಸ್ ಎಂದು ಹೇಳುವುದಕ್ಕೆ ಮತ್ತೊಂದು ಉದಾಹರಣೆಯಾಗಿದೆ ಎಂದು ಬಿಜೆಪಿ ಟ್ವೀಟ್ ಮೂಲಕ ಕಿಡಿಕಾರಿದೆ.
ಇದನ್ನೂ ಓದಿ: ಪಿಎಫ್‌ಐ, ಎಸ್‌ಡಿಪಿಐ ಮೆಚ್ಚಿಸಲು ಬಜರಂಗದಳ ನಿಷೇಧಿಸಲು ಹೊರಟ ಕಾಂಗ್ರೆಸ್; ಉಡುಪಿಯಲ್ಲಿ ಅನಿಲ್ ಆ್ಯಂಟನಿ
ನಾವೆಲ್ಲರೂ ಆರ್ಎಸ್ಎಸ್ ಮತ್ತು ಬಿಜೆಪಿ ವಿರುದ್ಧ ಹೋರಾಡುತ್ತಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಮುಸ್ಲಿಮರು ತಮ್ಮೊಳಗೆ ತಾವೆ ಜಗಳವಾಡದೆ ಮತ್ತು ಬಿಜೆಪಿಯನ್ನು ಗೆಲ್ಲಿಸಬಾರದು. ಸರಿಯೇ? ಎಂದು ಉನ್ನಿಥಾನ್ ವಿಡಿಯೋದಲ್ಲಿ ಹೇಳಿದ್ದಾರೆ.
Kerala’s @INCIndia MP Unnithan’s divisive tactics in Karnataka expose their desperation for one community’s votes.
Urging SDPI not to split votes reveals their true intent of targeting Bajrang Dal.
This is yet another example of #CommunalCongress‘ dangerous & divisive agenda. pic.twitter.com/lp1E5qbtMX
— BJP Karnataka (@BJP4Karnataka) May 5, 2023
ಈ ಕುರಿತಾಗಿ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಸಹ ಟ್ವೀಟ್ ಮಾಡಿದ್ದು, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರ ಮಾತುಗಳು ಕಾಂಗ್ರೆಸ್ ಪಕ್ಷದ ಚುನಾವಣಾ ಕಾರ್ಯತಂತ್ರವನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಇಸ್ಲಾಮಿಸ್ಟ್ಗಳನ್ನು ಸೆಳೆಯಲು ಅವರು ಏನು ಬೇಕಾದರೂ ಮಾಡುತ್ತಾರೆ.
ಇದನ್ನೂ ಓದಿ: ಕಾಂಗ್ರೆಸ್, ಜೆಡಿಎಸ್ ಕರ್ನಾಟಕದ ಜನರನ್ನು ಲೂಟಿ ಮಾಡಿವೆ: ತುಮಕೂರಿನಲ್ಲಿ ಪ್ರಧಾನಿ ಮೋದಿ ವಾಗ್ದಾಳಿ
ಕಾಂಗ್ರೆಸ್ನ ಮುಸ್ಲಿಂ ಅಭ್ಯರ್ಥಿಗಳ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಎಸ್ಡಿಪಿಐಗೆ ಉಣ್ಣಿತ್ತಾನ್ ಯಾವುದೇ ಮುಜುಗರವಿಲ್ಲದೆ ಹೇಳುತ್ತಿದ್ದಾರೆ. ಹಾಗಾದರೆ ಈ ಸಂದರ್ಭದಲ್ಲಿ ಬಿಜೆಪಿ ಗೆಲ್ಲಬಹುದಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಇದೇ ವಿಡಿಯೋವನ್ನು ಇತರೆ ಬಿಜೆಪಿ ನಾಯಕರು ಸಹ ಹಂಚಿಕೊಂಡಿದ್ದಾರೆ. ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಸಂಯೋಜಿತ ಅವಳಿ (Siamese twins) ಮಕ್ಕಳಿದ್ದಂತೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:52 pm, Fri, 5 May 23