Updated on:May 05, 2023 | 8:36 PM
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿಗೆ ಏಪ್ರಿಲ್ 6ರಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು, ಇವರನ್ನು ಸ್ವಾಗತಿಸಲು ಬೇಕಾದ ಎಲ್ಲಾ ತಯಾರಿಗಳನ್ನು ಬಿಜೆಪಿ ನಾಯಕರು ಸಿದ್ದತೆಗಳನ್ನು ನಡೆಸಿದ್ದಾರೆ.
ಹೇಳಿ ಕೇಳಿ, ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ. ರಾಜ್ಯ ವಿರೋಧ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ಅವರ ಕ್ಷೇತ್ರಕ್ಕೆ ನಾಳೆ ಲಗ್ಗೆ ಇಡುತ್ತಿರುವ ಮೋದಿ, ಕ್ಷೇತ್ರದಲ್ಲಿ ಘರ್ಜಿಸಲಿದ್ದಾರೆ. (File Photo)
ಇನ್ನು, ಜಿಲ್ಲೆಗೆ ಆಗಮಿಸುತ್ತಿರುವ ಮೋದಿಗೆ ಉಡುಗೊರೆ ನೀಡಲು ಬಿಜೆಪಿ ನಾಯಕರು ಸಿಂಹವಾಹಿನಿಯಾಗಿರುವ (ಸಿಂಹದ ಮೇಲೆ ಕೂತಿರುವ) ಬನಶಂಕರಿ ದೇವಿಯ ಮೂರ್ತಿಯನ್ನು ಸಿದ್ದಪಡಿಸಿದ್ದಾರೆ.
ವೇದಿಕೆಯಲ್ಲಿ ಬಿಜೆಪಿ ಮುಖಂಡರ ಮೂಲಕ ಬನಶಂಕರಿ ದೇವಿಯ ಬೆಳ್ಳಿ ವಿಗ್ರಹವನ್ನು ಮೋದಿಗೆ ನೀಡಲಾಗುತ್ತದೆ.
ಒಂದು ಕೆಜಿ 900 ಗ್ರಾಮ್ ತೂಕದ ಬೆಳ್ಳಿ ವಿಗ್ರಹ ಇದಾಗಿದ್ದು, ಎಂಟುವರೆ ಇಂಚು ಎತ್ತರ, ಐದೂರವರೆ ಇಂಚು ಅಗಲ ಇದೆ.
ಪ್ರಧಾನಿ ಮೋದಿಗೆ ನೀಡುತ್ತಿರುವ ವಿಗ್ರಹವು ಶುದ್ದ ಬೆಳ್ಳಿಯಿಂದ ಕೂಡಿದೆ.
ಅಷ್ಟಕ್ಕೂ, ಮೋದಿಗೆ ಇಂತಹದ್ದೊಂದು ಕಾಣಿಕೆಯನ್ನು ಬನಶಂಕರಿ ದೇವಸ್ಥಾನದವರು ಕೊಡುತ್ತಿದ್ದಾರೆ. ಬಾಗಲಕೋಟೆ ಶೀಲವಂತ ಆ್ಯಂಡ್ ಸನ್ಸ್ ಜುವೆಲ್ಸ್, ಬೆಳ್ಳಿಯ ವಿಗ್ರಹವನ್ನು ಪಾಲಿಶ್ ಮಾಡುವ ಜವಾಬ್ದಾರಿ ಪಡೆದುಕೊಂಡಿದೆ.
ವಿಗ್ರಹವನ್ನು ಪಾಲಿಶ್ ಮಾಡಿ ಹಸ್ತಾಂತರ ಮಾಡುವ ಜವಾಬ್ದಾರಿ ನಮಗೆ ಸಿಕ್ಕಿದ್ದು ಬಹಳ ಖುಷಿ ತಂದಿದೆ ಎಂದು ಬೆಳ್ಳಿ ಶಾಪ್ ಮಾಲೀಕ ಮಲ್ಲಿಕಾರ್ಜುನ ಶೀಲವಂತ ಹೇಳಿದ್ದಾರೆ.
Published On - 8:36 pm, Fri, 5 May 23