ಮಂಡ್ಯ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಮಂಡ್ಯ ಪ್ರವಾಸ ರಾಜ್ಯ ಬಿಜೆಪಿಯಲ್ಲಿ (BJP) ಚುನಾವಣೆ ಚಟುವಟಿಕೆಗಳು ಬಿರುಸುಗೊಂಡಿವೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಹಳೇ ಮೈಸೂರು ಭಾಗವನ್ನೇ ಟಾರ್ಗೆಟ್ ಮಾಡಿರುವ ಬಿಜೆಪಿ, ಸ್ಥಳೀಯ ಪ್ರಬಾವಿ ನಾಯಕರಿಗೆ ಗಾಳ ಹಾಕಿದೆ. ಇದಕ್ಕೆ ಪೂರಕವೆಂಬಂತೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್(CP Yogeshwar) ಆ ಭಾಗದಲ್ಲಿ ಆಪರೇಷನ್ ಕಮಲದ (Operation Kamala) ಸ್ಪೋಟಕ ಸುಳಿವು ಕೊಟ್ಟಿದ್ದಾರೆ. ಅದರಲ್ಲೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರ ರಾಜಕೀಯ ನಡೆ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.
ಇದನ್ನೂ ಓದಿ: ಕೇಸರಿ ಪಾಳಯದಲ್ಲಿ ಸುಮಲತಾ ಅಂಬರೀಶ್: ಸಂಚಲನ ಮೂಡಿಸಿದ ‘ಸ್ವಾಭಿಮಾನಿ’ ಸಂಸದೆಯ ರಾಜಕೀಯ ನಡೆ
ಮಂಡ್ಯದಲ್ಲಿ ಇಂದು(ಡಿಸೆಂಬರ್ 29) ಸುದ್ದಿಗಾರರೊಂದಿಗೆನ ಮಾತನಾಡಿದ ಯೋಗೇಶ್ವರ್, ಹಳೇ ಮೈಸೂರು ಭಾಗದ ಹಲವು ಮುಖಂಡರು ಬಿಜೆಪಿ ಸೇರ್ತಾರೆ. ಸುಮಲತಾ ಮಾನಸಿಕವಾಗಿ ಬಿಜೆಪಿ ಜೊತೆಗೆ ಇದ್ದಾರೆ ಅನ್ನಿಸುತ್ತಿದೆ. ಸುಮಲತಾ ಜೊತೆ ಪಕ್ಷದ ವರಿಷ್ಠರು ಮಾತನಾಡುತ್ತಿದ್ದಾರೆ ಎಂದು ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ನಾವು ಎಲ್ಲೆಲ್ಲಿ ಬಲಿಷ್ಠವಾಗಿದ್ದೇವೋ ಅಲ್ಲಿ ನಾವು ಸ್ಪರ್ಧೆ ಮಾಡುತ್ತೇವೆ. ವೀಕ್ ಇರುವ ಕ್ಷೇತ್ರದಲ್ಲಿ ಬೇರೆ ನಾಯಕರನ್ನು ಪಕ್ಷಕ್ಕೆ ಕರೆತರುತ್ತೇವೆ. ಬಿಜೆಪಿಗೆ ಯಾರು ಬರ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಹಳೇ ಮೈಸೂರು ಭಾಗದಲ್ಲಿ ಸಾಕಷ್ಟು ಮುಖಂಡರು ಬಿಜೆಪಿಗೆ ಸೇರ್ತಾರೆ. ಎರೆಡು ಪಕ್ಷದ ಮುಖಂಡರು ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ಈ ಹಿಂದೆ ನಮ್ಮ ಪಕ್ಷದ ಮುಖಂಡರು ಒಪ್ಪಿಗೆ ಕೊಟ್ಟಿರಲಿಲ್ಲ. ಆದ್ರೆ ಈಗ ಒಪ್ಪಿಗೆ ಕೊಡ್ತಾರೆ. ಬಲಿಷ್ಠ ಪ್ರಬಲ ಹಾಲಿ ಹಾಗೂ ಮಾಜಿ ಶಾಸಕರೇ ಬರ್ತಾರೆ. ನಾವೆಲ್ಲಿ ವೀಕ್ ಇದ್ದೇವೊ ಬೇರೆಯವರನ್ನ ಕರೆದು ಕೊಂಡು ಬರುವ ಕೆಲಸ ಮಾಡುತ್ತೇವೆ ಎಂದು ಸಿಪಿವೈ ಪರೋಕ್ಷವಾಗಿ ಅಪರೇಷನ್ ಕಮಲದ ಕುರಿತು ಗುಟ್ಟು ಬಿಟ್ಟು ಕೊಟ್ಟರು.
ಜೆಡಿಎಸ್ ಪಕ್ಷ ದಿನೇ ದಿನೇ ಕ್ಷೀಣಿಸುತ್ತಿದೆ. ಜೆಡಿಎಸ್ನವರು ಬರೀ ಚುಣಾವಣೆ ಬಂದಾಗ ಬರುತ್ತಾರೆ, ಅಳುತ್ತಾರೆ. ಹೆಚ್.ಡಿ.ಕುಮಾರಸ್ವಾಮಿ ಯಾವುದೇ ತಂತ್ರಗಾರಿಕೆ ವರ್ಕೌಟ್ ಆಗಲ್ಲ. ಜೆಡಿಎಸ್ 10ರಿಂದ 15 ಸ್ಥಾನಕ್ಕೆ ಸೀಮಿತವಾಗಲಿದೆ. ಮಂಡ್ಯ ಜಿಲ್ಲೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೊಡುಗೆ ಏನು? ಎಂದು ಬಿಜೆಪಿ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಓರ್ವ ಸತ್ವ ಇಲ್ಲದೇ ಇರುವ ನಾಯಕ. ಏನೇ ಹೇಳಿದ್ರು ಜನ ಈಗ ನಂಬುವ ಪರಿಸ್ಥಿತಿಯಲ್ಲಿ ಇಲ್ಲ. ಮಂಡ್ಯ ಜಿಲ್ಲೆಗೆ ಕುಮಾರಸ್ವಾಮಿಯವರ ಕೊಡುಗೆ ಏನು? ಅವರ ಬಗ್ಗೆ ಎಷ್ಟೇ ಮಾತನಾಡಿದ್ರು ವೇಸ್ಟ್. ಕುಮಾರಸ್ವಾಮಿಯವರ ಸ್ಟ್ಯಾಟರ್ಜಿ ಏನು ವರ್ಕೌಟ್ ಆಗಲ್ಲ . ಅವರು ತುಂಬಾ ವೀಕ್ ಆಗಿದ್ದು, ಇದು ಅವರ ಕೊನೆಯ ಪ್ರಯತ್ನ. ಹೋದ ಬಾರಿ ಕುಮಾರಸ್ವಾಮಿಯವರು ಓಟ್ ಹಾಕದೆ ಇದ್ರೆ ಸತ್ತೊಗ್ತೀನಿ ಅಂದ್ರು. ಹಾಗಾಗಿ ಜನ ಪಾಪ ಮರಳಾಗಿ ಓಟ್ ಹಾಕಿದ್ರು ಅಷ್ಟೇ. ಗಿರವಿ ಅಂಗಡಿ ಸಾಲಕಟ್ಟಬೇಡಿ ಎಂದು ಗಂಡ ಹೆಂಡ್ತಿ ಓಪನ್ ಆಗಿ ಹೆಳ್ತಾರೆ. ಅದನ್ನ ನಂಬಿಕೊಂಡು ಸಾಕಷ್ಟು ಮಹಿಳೆಯರು ಮೋಸ ಹೋದ್ರು ಎಂದು ಕಿಡಿಕಾರಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 5:11 pm, Thu, 29 December 22