ಚಿಕ್ಕಮಗಳೂರು: ಮೂಲಸೌಕರ್ಯ ಆಗ್ರಹಿಸಿ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ, ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ವಿಧಾನಸಭಾ ಚುನಾವಣೆಗೆ ಕೆಲವೆ ದಿನಗಳು ಬಾಕಿ ಇರುವಾಗಲೇ ಬಹಿಷ್ಕಾರದ ಕೂಗು ಆರಂಭವಾಗಿದೆ. ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ನಂದಿಗಾವೆ, ದಂಡುಬೆಟ್ಟಹಾರ ಗ್ರಾಮದ ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಬ್ಯಾನರ್ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು: ವಿಧಾನಸಭಾ ಚುನಾವಣೆಗೆ(Karnataka Assembly Election) ಕೆಲವೇ ದಿನಗಳು ಬಾಕಿ ಇರುವಾಗಲೆ ಚುನಾವಣೆ ಬಹಿಷ್ಕಾರದ ಕೂಗು ಆರಂಭವಾಗಿದೆ. ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ನಂದಿಗಾವೆ, ದಂಡುಬೆಟ್ಟಹಾರದ ಗ್ರಾಮಸ್ಥರು ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. ಕಳೆದ ಬಾರಿ ಸುರಿದ ಮಳೆಯಿಂದ ಗ್ರಾಮಗಳ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಎಷ್ಟು ಬಾರಿ ಮನವಿ ಸಲ್ಲಿಸಿದರೂ ಜನಪ್ರತಿನಿಧಿಗಳು ಕಿವಿಗೊಟ್ಟಿಲ್ಲ. ಈ ಹಿನ್ನಲೆ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಚುನಾವಣೆ ಬಹಿಷ್ಕರಿಸುವುದಾಗಿ ಹೇಳಿದ್ದಾರೆ.
ಮತದಾರರ ಒಲೈಕೆಗೆ ಹೆಚ್ಚಾದ ಗಿಫ್ಟ್ ಪಾಲಿಟಿಕ್ಸ್, ಪೊಲೀಸ್ ಇಲಾಖೆಯಿಂದ ಹೈ ಅಲರ್ಟ್
ಚಿಕ್ಕಮಗಳೂರು: ಚುನಾವಣಾ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಜಿಲ್ಲಾ ಪೊಲೀಸ್ ಇಲಾಖೆ ಹೈ ಅಲರ್ಟ್ ಘೋಷಣೆ ಮಾಡಿದ್ದು, ಜಿಲ್ಲೆಯಲ್ಲಿ 18 ಚೆಕ್ ಪೋಸ್ಟ್ ನಿರ್ಮಾಣ ಮಾಡಿದೆ. ಸಾರ್ವಜನಿಕರು ಚುನಾವಣೆ ಅಕ್ರಮದ ಬಗ್ಗೆ ತಿಳಿಸಲು ಕಂಪ್ಲೇಂಟ್ ಮಾನಿಟರಿಂಗ್ ಸೆಲ್ ತೆರೆಯಲಾಗಿದ್ದು, ಇದು ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿದೆ. 8277991000 ಗೆ ಕರೆ ಅಥವಾ ವಾಟ್ಸಾಪ್ ಮೂಲಕ ಸಂಪರ್ಕಿಸಲು ಪೊಲೀಸ್ ಇಲಾಖೆ ಮನವಿ ಮಾಡಿದೆ.
ಇದನ್ನೂ ಓದಿ: Double Bridge! ಚಿಕ್ಕಮಗಳೂರು: 30 ಮನೆಗಳಿರುವ ಕುಗ್ರಾಮಕ್ಕೆ ಎರಡು ಸೇತುವೆ ಭಾಗ್ಯ ಕಲ್ಪಿಸಿದ ಸರ್ಕಾರ, ಗ್ರಾಮಸ್ಥರು ಹೇಳೋದೇನು?
ಮತದಾರರನ್ನ ಸೆಳೆಯಲು ಸ್ಥಳೀಯ ಮುಖಂಡರು ಸೀರೆ, ಹಣ, ಕುಕ್ಕರ್ ಹಂಚಿಕೆ ಮಾಡಿದ್ದರು. ಗಿಫ್ಟ್ ಪಾಲಿಟಿಕ್ಸ್ ಹೆಚ್ಚಾದ ಹಿನ್ನೆಲೆ ಈ ಕ್ರಮಕ್ಕೆ ಮುಂದಾಗಿದ್ದು, ಜಿಲ್ಲೆಯ ಗಡಿ ಭಾಗ ಸೇರಿದಂತೆ ನಗರ ಸೂಕ್ಷ್ಮ ಪ್ರದೇಶದಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದ್ದು, ನಗರ ಪ್ರವೇಶಿಸುವ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಮಾಗಡಿ, ಕೊಟ್ಟಿಗೆಹಾರ, ಎಂಸಿ ಹಳ್ಳಿ, ತನಿಕೋಡು, ಕಮ್ಮರಡಿ ಸೇರಿದಂತೆ ಒಟ್ಟು 18 ಕಡೆ ಚೆಕ್ಪೊಸ್ಟ್ ನಿರ್ಮಾಣ ಮಾಡಲಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:27 pm, Tue, 21 March 23