ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ (Karnataka Assembly Elections 2023) ಬಹುನಿರೀಕ್ಷಿತ ಫಲಿತಾಂಶ ಶನಿವಾರ ಹೊರಬಿದ್ದಿದ್ದು, ರಾಜ್ಯದ ಮತದಾರರು ಕಾಂಗ್ರೆಸ್ ಕೈಹಿಡಿದಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ನ ಹಿರಿಯ ನಾಯಕರು ಇಂದು ಸಂಜೆ ಸಿಹಿ ತಿನ್ನುವ ಮೂಲಕ ಸಂಭ್ರಮಿಸಿದರು. ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣೆ ಹಿಡಿಯಲು ಸಜ್ಜಾಗಿದೆ. ಭರ್ಜರಿ ಗೆಲುವಿನ ನಂತರ ಕಾಂಗ್ರೆಸ್ ನಾಯಕರು ಭಾನುವಾರ ಸಂಜೆ 5:30 ಕ್ಕೆ ಶಾಸಕಾಂಗ ಪಕ್ಷದ ಸಭೆ ಕೂಡ ಕರೆದಿದ್ದಾರೆ. ಕಾಂಗ್ರೆಸ್ ಈ ಭಾರಿ ಒಟ್ಟು 42 ಹೊಸಮುಖಗಳಿಗೆ ಮಣೆ ಹಾಕಿತ್ತು. ಆ ಪೈಕಿ 35 ಹೊಸ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇನ್ನು ಕಾಂಗ್ರೆಸ್ ಯಾವ ಯಾವ ಸಮುದಾಯದವರಿಗೆ ಎಷ್ಟು ಶಾಸಕರಿದ್ದಾರೆ ತಿಳಿಯಿರಿ.
ಸಮುದಾಯ ಸಂಖ್ಯೆ
ಬ್ರಾಹ್ಮಣ: 3
ಲಿಂಗಾಯತ: 39
ಒಕ್ಕಲಿಗ: 21
ರೆಡ್ಡಿ: 4
ಬಂಟ್: 1
ಕೊಡವ: 1
ಮುಸ್ಲಿಂ: 9
ಕ್ರಿಶ್ಚಿಯನ್: 1
ಜೈನ್: 1
ಎಸ್ಸಿ ಲೆಫ್ಟ್ 6
ಎಸ್ಸಿ-ರೈಟ್: 11
ಎಸ್ಸಿ-ಬೋವಿ: 3
ಎಸ್ಸಿ-ಲಮಾಣಿ: 1
ಕೊರ್ಚಾ: 1
ಎಸ್ಟಿ: 15
ಬಿಸಿ-ಕುರುಬ: 8
ಬಿಸಿ-ಬಲಿಜ: 1
ಬಿಸಿ ಬೆಸ್ತ: 1
ಬಿಸಿ ಬಿಲ್ಲವ: 2
ಬಿಸಿ ಈಡಿಗ: 3
ಬಿಸಿ ಮರಾಠಾ: 2
ಬಿಸಿ-ರಾಜಪುತ್: 1
ಬಿಸಿ-ಉಪ್ಪಾರ: 1
ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿ ಪಾದಯಾತ್ರೆ ಸಾಗಿದ ಬಹುತೇಕ ಕಡೆ ಕಾಂಗ್ರೆಸ್ ಗೆದ್ದಿದೆ: ರಣದೀಪ್ ಸುರ್ಜೆವಾಲ
ಕರ್ನಾಟಕ ವಿಧಾನಸಭಾ ಚುನಾವಣೆಗೆ 2023 ಮೇ 10ರಂದು ಮತದಾನವಾಗಿತ್ತು. ಇಂದು ಮೇ 13ರಂದು ಫಲಿತಾಂಶ ಪ್ರಕಟವಾಗಿದ್ದು 224 ಕ್ಷೇತ್ರಗಳಲ್ಲಿ ಕಾಂಗ್ರೆಸ್ 136 ಸ್ಥಾನಗಳನ್ನು ಗೆದ್ದಿದೆ. ಬಹುಮತಕ್ಕೆ ಬೇಕಾದ 113 ಸ್ಥಾನಗಳ ಗಡಿಯನ್ನು ಕಾಂಗ್ರೆಸ್ ಸುಲಭವಾಗಿ ದಾಟಿ ಹೋಗಿದ್ದು 5 ವರ್ಷ ಕಾಲ ಸುಭದ್ರ ಸರ್ಕಾರ ಸ್ಥಾಪಿಸುವ ಖಚಿತತೆ ಸಿಕ್ಕಿದೆ.
ಆಡಳಿತಾರೂಢ ಬಿಜೆಪಿ 64 ಸ್ಥಾನಗಳಿಗೆ ತೃಪ್ತಿಪಡಬೇಕಿದೆ. 30ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದ ಜೆಡಿಎಸ್ ಪಕ್ಷ 20 ಸ್ಥಾನಗಳಿಗೆ ತೃಪ್ತಿ ಪಡುವಂತಾಗಿದೆ. ಸ್ವಂತ ಪಕ್ಷ ಕಟ್ಟಿದ್ದ ಜನಾರ್ಧನ ರೆಡ್ಡಿಗೆ ನಿರಾಸೆಯಾಗಿದೆ.