ಮನೆ ದೇವರ ಭವಿಷ್ಯವಾಣಿಯನ್ನು ಧಿಕ್ಕರಿಸಿದ ಸಿದ್ದರಾಮಾಯ್ಯ, 2 ಕ್ಷೇತ್ರದಲ್ಲಿ ನಿಲ್ಲುವಂತೆ ದೇವಿ ಭವಿಷ್ಯಕ್ಕೆ ಸಿದ್ದು ಹೇಳಿದ್ದಿಷ್ಟು
ಮುಂದಿನ ಚುನಾವಣೆಯಲ್ಲಿ ತಮ್ಮ ಕ್ಷೇತ್ರದ ಬಗ್ಗೆ ಮಂಡ್ಯದ ಚಿಕ್ಕಮ್ಮ ದೇವಿ ನುಡಿದ ಭವಿಷ್ಯವಾಣಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಧಿಕ್ಕರಿಸಿದ್ದಾರೆ.
ಹಾಸನ: ಮಂಡ್ಯದ (Mandya)ಚೊಟ್ಟನಹಳ್ಳಿಯಲ್ಲಿರುವ ಚಿಕ್ಕಮ್ಮ ದೇವಿ ದೇವಸ್ಥಾನಕ್ಕೆ ಸಿದ್ದರಾಮಯ್ಯ(Siddaramaiah) ಪುತ್ರ ಯತೀಂದ್ರ ಭೇಟಿ ನೀಡಿದ್ದ ವೇಳೆ, ಅಲ್ಲಿನ ಪೂಜಾರಿ ನಿಂಗಣ್ಣ ಎಂಬುವವರ ಮೈಮೇಲೆ ದೇವಿ ಬಂದಿದ್ದು, ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ನಿಂತರೆ ಒಳಿತು ಎನ್ನುವ ಭವಿಷ್ಯ ನುಡಿದಿದ್ದಾರೆ. ಈ ಮಂಡ್ಯದ ಮಳವಳ್ಳಿಯ ಚಿಕ್ಕಮ್ಮ ದೇವಿ ನುಡಿದ ಭವಿಷ್ಯ ಕಾಂಗ್ರೆಸ್ ಮನೆಯಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಆದ್ರೆ, ಸಿದ್ದರಾಮಯ್ಯ ಅವರು ಮಂಡ್ಯದ ಚಿಕ್ಕಮ್ಮ ದೇವಿ ನುಡಿದ ಭವಿಷ್ಯವಾಣಿಯನ್ನು ಧಿಕ್ಕರಿಸಿದ್ದಾರೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮುದಗನೂರು ಗ್ರಾಮದಲ್ಲಿ ಇಂದು(ಜನವರಿ 13) ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲಿ ಎಂದು ದೈವವಾಣಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇದು ದೈವವಾಣಿ ಹಾಗೂ ಯತೀಂದ್ರ ಅಭಿಪ್ರಾಯ. ನನ್ನ ಅಭಿಪ್ರಾಯವಲ್ಲ. ನಾನು ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆಂದು ಸ್ಪಷ್ಟಪಡಿಸಿದರು.
ಇನ್ನು ಚಿಕ್ಕಮ್ಮ ದೇವರ ಭವಿಷ್ಯದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಪುತ್ರ ಯತೀಂದ್ರ, ನಾವು ಇದನ್ನೆಲ್ಲಾ ಹೆಚ್ಚು ತಲೆಕೆಡಿಸಿಕೊಳ್ಳೋಕೆ ಹೋಗಲ್ಲ. ದೇವರ ಭವಿಷ್ಯಕ್ಕೂ ರಾಜಕೀಯ ತೀರ್ಮಾನಕ್ಕೂ ತಾಳೆ ಹಾಕುವುದು ಬೇಡ ಎಂದು ಹೇಳಿದ್ದಾರೆ.
2023 ರ ವಿಧಾನಸಭೆ ಯುದ್ಧದಲ್ಲಿ ಸಿದ್ದು ಯಾವ ಕ್ಷೇತ್ರದಲ್ಲಿ ನಿಲ್ಲುತ್ತಾರೆ ಎನ್ನುವುದು ಇನ್ನೂ ಅಸ್ಪಷ್ಟ. ಯಾಕಂದ್ರೆ ಬಾದಾಮಿ ಬಿಟ್ಟು, ಪುತ್ರನಿಗೆ ವರುಣಾ ಕೊಟ್ಟು, ಸಿದ್ದರಾಮಯ್ಯ ಕೋಲಾರದತ್ತ ಕೈ ಬೀಸಿದ್ದಾರೆ. ಕೋಲಾರದಿಂದಲೇ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಆದ್ರೆ ಕೊನೆಗೆ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಅಡ್ಡಗೋಡೆ ಮೇಲೆ ದೀಪವನ್ನೂ ಇಟ್ಟಿದ್ದಾರೆ. ಹೀಗಿರುವಾಗ ಸಿದ್ದು ಕ್ಷೇತ್ರದ ಬಗ್ಗೆ, ಮಂಡ್ಯದ ಚಿಕ್ಕಮ್ಮ ದೇವಿ ನುಡಿದ ಭವಿಷ್ಯವಾಣಿ, ಬೆಂಬಲಿಗರಿಗೆ ‘ಡಬಲ್’ ಟೆನ್ಷನ್ ತಂದಿಟ್ಟಿದೆ. ಹೀಗಿರುವಾಗ ಸಿದ್ದು ಕ್ಷೇತ್ರದ ಬಗ್ಗೆ, ಮಂಡ್ಯದ ಚಿಕ್ಕಮ್ಮ ದೇವಿ ನುಡಿದ ಭವಿಷ್ಯವಾಣಿ, ಬೆಂಬಲಿಗರಿಗೆ ‘ಡಬಲ್’ ಟೆನ್ಷನ್ ತಂದಿಟ್ಟಿದೆ.
ಒಟ್ಟಾರೆ ಕೋಲಾರದಲ್ಲಿ ರಣಕಹಳೆ ಮೊಳಗಿಸೋಕೆ ಸನ್ನದ್ಧವಾಗಿದ್ದ ಸಿದ್ದುಗೆ ದೇವಿಯೇ ಎಚ್ಚರಿಕೆ ಹೆಜ್ಜೆ ಇಡುವಂತೆ ಸಂದೇಶ ಕೊಟ್ಟಿದೆ.. ಇದು ಒಂದು ಕಡೆ ಇರಲಿ ಇತ್ತ ಸಿದ್ದು ಬೆಂಬಲಿಗರು ಕೂಡ ಸಿದ್ದು ವರುಣಾಗೆ ಬರಲಿ ಎಂದು ಹೋದಲ್ಲಿ ಬಂದಲ್ಲಿ ಹೇಳುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅದ್ಯಾವ ನಿರ್ಧಾರ ತೆಗೆದುಕೊಳ್ತಾರೆ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆ.
Published On - 7:42 pm, Fri, 13 January 23