ಬೆಂಗಳೂರು: ಇಡೀ ರಾಜ್ಯವೇ ಕುತೂಹಲದಿಂದ ಎದುರು ನೋಡ್ತಿದ್ದ(Karnataka Assembly Elections 2023). ರಾಷ್ಟ್ರ ರಾಜಕಾರಣದ ಕೇಂದ್ರ ಬಿಂದುವಾಗಿರೋ ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಟೈಂ ಬಂದೇ ಬಿಟ್ಟಿದೆ. ಇಂದು ಬೆಳಗ್ಗೆ 7 ಗಂಟೆಯಿಂದಲೇ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ(Voting). ಇಂದು ಮತದಾರ ಬರೆಯೋ ಹಣೆಬರಹ ಅಖಾಡದಲ್ಲಿ ತೊಡೆ ತಟ್ಟಿರೋ ರಣಕಲಿಗಳ ಭವಿಷ್ಯವನ್ನ ನಿರ್ಧರಿಸಲಿದೆ. ಸಮಾವೇಶ, ರೋಡ್ ಶೋ, ಮನೆ ಮನೆ ಪ್ರಚಾರ ಎಲ್ಲ ಅಂತ್ಯವಾಗಿದ್ದು, ರಾಜ್ಯ ರಾಜಕೀಯದ ದಿಕ್ಕು ದೆಸೆಯನ್ನೇ ಬದಲಿಸೋ ಮಹಾ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ.
ಮೇ 10ರ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಶುರುವಾಗಲಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಇವಿಎಂ, ವಿವಿ ಪ್ಯಾಟ್, ಸೇರಿದಂತೆ ಮತದಾನಕ್ಕೆ ಬೇಕಿರೋ ಎಲ್ಲಾ ವಸ್ತುಗಳನ್ನ ಹೊತ್ತು ಚುನಾವಣಾ ಸಿಬ್ಬಂದಿ ನಿನ್ನೆಯೇ ಮತಗಟ್ಟೆಗಳಿಗೆ ತೆರಳಿ ತಯಾರಿ ನಡೆಸಿದ್ದಾರೆ. 224 ಕ್ಷೇತ್ರ, 2 ಸಾವಿರದ 615 ಅಭ್ಯರ್ಥಿಗಳ ಹಣೆ ಬರಹವನ್ನ ರಾಜ್ಯದ ಮುಕುಟಮಣಿ ಬೀದರ್‌ನಿಂದ ಹಿಡಿದು, ದಕ್ಷಿಣ ತುದಿ ಚಾಮರಾಜನಗರದವರೆಗೂ ಬರೋಬ್ಬರಿ 5 ಕೋಟಿ 31 ಲಕ್ಷದ 33 ಸಾವಿರದ 54 ಮತದಾರರು ಬರೆಯಲಿದ್ದಾರೆ. ರಾಜ್ಯದಲ್ಲಿ 224 ಕ್ಷೇತ್ರಗಳಿದ್ರೂ, ಈ ಪೈಕಿ ಆ 7 ಕ್ಷೇತ್ರಗಳನ್ನ ಸೂಕ್ಷ್ಮ ಕ್ಷೇತ್ರ ಎಂದು ಚುನಾವಣಾ ಆಯೋಗವೇ ಪರಿಗಣಿಸಿದೆ.
ವರುಣಾ, ಹಾಸನ, ಚಿತ್ತಾಪುರ, ಅಥಣಿ, ಚನ್ನಪಟ್ಟಣ, ಹುಬ್ಬಳ್ಳಿ ಸೆಂಟ್ರಲ್, ಈ ಎಲ್ಲ ವಿಧಾನಸಭೆ ಕ್ಷೇತ್ರಗಳು ಅತೀ ಸೂಕ್ಷ್ಮ ಕ್ಷೇತ್ರಗಳಾಗಿವೆ. ಇದೇ ಕ್ಷೇತ್ರಗಳ ಮೇಲೆಯೇ ಎಲ್ಲರ ಚಿತ್ತ ನೆಟ್ಟಿದೆ.
ಇದನ್ನೂ ಓದಿ: ಮತದಾನ ಮಾಡಿದವರಿಗೆ ಉಚಿತ ಉಪಾಹಾರಕ್ಕೆ ನಿರ್ಬಂಧ ಹೇರಿದ ಬಿಬಿಎಂಪಿ ಕ್ರಮಕ್ಕೆ ಹೈಕೋರ್ಟ್ ತಡೆ
ಇತ್ತ ಮೈಸೂರು ಜಿಲ್ಲೆಯಲ್ಲಿ ಒಟ್ಟು 11 ವಿಧಾನಸಭಾ ಕ್ಷೇತ್ರಗಳಿದ್ದು, 143 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 26 ಲಕ್ಷ ಮತದಾರರು ಹಕ್ಕು ಚಲಾಯಿಸಲು ಸಿದ್ದವಾಗಿದ್ದು 2905 ಮತಗಟ್ಟೆಯಲ್ಲಿ ಮತದಾನ ನಡೆಯಲಿದೆ. ತುಮಕೂರು ಜಿಲ್ಲೆಯಲ್ಲೂ 11 ಕ್ಷೇತ್ರಗಳಿದ್ದು, ಮತದಾನಕ್ಕೆ ಬೇಕಿರೋ ವೋಟಿಂಗ್ ಮಷಿನ್, ವಿವಿಪ್ಯಾಟ್, ವೋಟರ್ ಲಿಸ್ಟ್, ಶಾಹಿ ಸೇರಿದಂತೆ 40 ಐಟಂಗಳ ಕಿಟ್‌ನ್ನ ಹೊತ್ತು ಸಿಬ್ಬಂದಿ ಮತಗಟ್ಟೆಗೆ ತೆರಳಿದ್ರು. ಇಲ್ಲಿ 22 ಲಕ್ಷ ಮತದಾರರು ವೋಟಿಂಗ್‌ಗೆ ಅರ್ಹತೆ ಪಡೆದಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿದ್ದು, ಜಿಲ್ಲೆಯಲ್ಲಿ ಒಟ್ಟು 319 ಸೂಕ್ಷ್ಮ ಹಾಗೂ 24 ಅತಿ ಸೂಕ್ಷ್ಮ ಮತಗಟ್ಟೆಗಳಿವೆ. ದಾವಣಗೆರೆ ಜಿಲ್ಲೆಯಲ್ಲೂ 7 ಕ್ಷೇತ್ರಗಳಿದ್ದು, ಎಲ್ಲಾ ಕ್ಷೇತ್ರಗಳ ಚುನಾವಣಾ ಸಾಮಾಗ್ರಿ ಹೊತ್ತು, ಸಿಬ್ಬಂದಿ ಮತಗಟ್ಟೆಗೆ ತೆರಳಿದ್ರು. ಅತ್ತ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲೂ ಮತದಾನಕ್ಕೆ ಎಲ್ಲಾ ಸಿದ್ದತೆ ಇವತ್ತೇ ಪೂರ್ಣಗೊಂಡಿದ್ರೆ, ಮಲೆನಾಡಿದ ಶಿವಮೊಗ್ಗ, ಚಿಕ್ಕಮಗಳೂರಿನಲ್ಲೂ ಚುನಾವಣಾ ಸಿಬ್ಬಂದಿ ವೋಟಿಂಗ್ ಪ್ರಕ್ರಿಯೆಗೆ ರೆಡಿಯಾಗಿದ್ದಾರೆ. ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಬಳ್ಳಾರಿಯಲ್ಲೂ ಎಲ್ಲಾ ಸಿದ್ದತಾ ಕಾರ್ಯ ನಡೆದಿದೆ. ಎಲ್ಲಾ ಪರಿಕರ ಹೊತ್ತು ಮತಗಟ್ಟೆ ತಲುಪಿರೋ ಅಧಿಕಾರಿಗಳ ತಂಡ, ಬೆಳಗ್ಗೆ 5.30 ರಿಂದಲೇ ಕೆಲಸ ಆರಂಭಿಸಿದ್ದು, ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಲಿದೆ.
ಇಂದು ಮತದಾನ ಮಾಡಲು ಗುರುತಿನ ಚೀಟಿಯಾಗಿ ವೋಟರ್ ಐಡಿಯ ಅವಶ್ಯಕತೆ ಇದ್ದು, ವೋಟರ್ ಐಡಿ ಇಲ್ಲದಿದ್ರೆ, ಪಾನ್‌ಕಾರ್ಡ್, ಆಧಾರ್‌ಕಾರ್ಡ್, ಡ್ರೈವಿಂಗ್ ಲೈಸನ್ಸ್, ರೇಷನ್‌ಕಾರ್ಡ್, ಸೇರಿದಂತೆ ಸರ್ಕಾರದ ಯಾವುದಾದ್ರೂ ಐಡಿ ಕಾರ್ಡ್ ತೋರಿಸಿ ಮತದಾನ ಮಾಡಲು ಅವಕಾಶ ಇದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:41 am, Wed, 10 May 23