ಮಲ್ಲಿಕಾರ್ಜುನ ಖರ್ಗೆ ಸಿಎಂ ಆದ್ರೆ ಕೆಲಸ ಮಾಡಲು ಸಿದ್ಧ: ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದ ಡಿಕೆ ಶಿವಕುಮಾರ್
ಮಲ್ಲಿಕಾರ್ಜುನ ಖರ್ಗೆ ಸಿಎಂ ಆದ್ರೆ ಕೆಲಸ ಮಾಡಲು ಸಿದ್ಧ ಎಂಬ ತಮ್ಮ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮರ್ಥನೆ ನೀಡಿದ್ದಾರೆ.
ಹಾಸನ: ಮಲ್ಲಿಕಾರ್ಜುನ ಖರ್ಗೆ ಹಿರಿಯ ನಾಯಕ, ಎಐಸಿಸಿ ಅಧ್ಯಕ್ಷರು. ಅವರ ನಾಯಕತ್ವಕ್ಕೆ ಬೆಂಬಲಿಸಲಿಲ್ಲ ಅಂದ್ರೆ ನಾವೇನು ಮನುಷ್ಯರಾ? ನಮಗೆ ಅಧಿಕಾರ ಮುಖ್ಯ ಅಲ್ಲ, ಕಾಂಗ್ರೆಸ್‌ಗೆ ಅಧಿಕಾರ ಮುಖ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (Dk Shivakumar) ಹೇಳಿದರು. ಜಿಲ್ಲೆಯ ಅರಸೀಕೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಸಿಎಂ ಆದ್ರೆ ಕೆಲಸ ಮಾಡಲು ಸಿದ್ಧ ಎಂಬ ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದರು. ಕಡೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ದತ್ತಾ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಟಿಕೆಟ್ ಕೊಡುತ್ತೇವೆ ಎಂದು ಷರತ್ತು ಹಾಕಿ ಪಕ್ಷಕ್ಕೆ ಸೇರಿಸಿಕೊಂಡಿರಲಿಲ್ಲ. ವೈಎಸ್‌ವಿ ದತ್ತಾಗೆ ಪಕ್ಷದಲ್ಲಿ ಒಳ್ಳೆಯ ಸ್ಥಾನಮಾನ ಕೊಡಬೇಕು, ಕೊಡುತ್ತೇವೆ. YSV ದತ್ತಾ ಕಾಂಗ್ರೆಸ್ ಸೇರಬೇಕಾದರೆ ಏನು ಮಾತಾಡಿದ್ದರೆಂದು ಗಮನಿಸಿ, ಆಮೇಲೆ ಮಾತನಾಡೋಣ ಎಂದು ಹೇಳಿದರು.
ಇದು ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ
ಇವತ್ತು ಕಾಂಗ್ರೆಸ್ ಪಕ್ಷಕ್ಕೆ ಶಿವಲಿಂಗೇಗೌಡರನ್ನ ಅಧಿಕೃತವಾಗಿ ಸೇರ್ಪಡೆ ಮಾಡಿಕೊಳ್ಳಲು ಬಂದಿದ್ದೇವೆ. ಅರಸೀಕೆರೆಯಲ್ಲಿ ಗೃಹಜ್ಯೋತಿಯನ್ನು ಹಚ್ಚುತ್ತಿದ್ದೇವೆ, ಪ್ರತಿ ಮನೆಯಲ್ಲೂ 200 ಯೂನಿಟ್ ಬೆಳಕು ಫ್ರೀಯಾಗಿ ಕೊಡಲು ಇಲ್ಲಿಗೆ ಬಂದಿದ್ದೇವೆ. ಹೆಣ್ಣುಮಕ್ಕಳು, ಕುಟುಂಬದ ಹೆಣ್ಣು, ಕುಟುಂಬದ ಕಣ್ಣು. ಅವರ ಕಷ್ಟ ಸುಖ ನಿವಾರಣೆ ಮಾಡಲು ಎರಡು ಸಾವಿರ ಗ್ಯಾರೆಂಟಿ ಕೊಡಲು ಬಂದಿದ್ದೇವೆ. ಯುವಕರಿಗೆ ನಿರುದ್ಯೋಗ ಭತ್ಯೆ ಯುವನಿಧಿ ಮೂರು ಸಾವಿರ ಕೊಡಲು ಬಂದಿದ್ದೇವೆ. ಹಸಿದವರಿಗೆ ಅನ್ನಭಾಗ್ಯ ಹತ್ತು ಕೆಜಿ ಅಕ್ಕಿ ಕೊಡಲು ಬಂದಿದ್ದೇವೆ ಇದು ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಎಂದರು.
ಇದನ್ನೂ ಓದಿ: ನಿಮ್ಮ ಕೆಲಸದ ಮೇಲೆ ನಿಮಗೆ ನಂಬಿಕೆ ಇದ್ದಿದ್ದರೆ, ಸಿಎಂ ಬೊಮ್ಮಾಯಿಗೆ ಸಲೀಂ ಅಹ್ಮದ್ ಸಾಲು ಸಾಲು ಪ್ರಶ್ನೆ
ಬಿಜೆಪಿ ಬಿದ್ದು ಹೋಗಿದೆ ಮೇಲೆತ್ತಲು ಪ್ರಧಾನಿ ಮೋದಿ ಬಂದಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ಸಫಾರಿ ವಿಚಾರವಾಗಿ ಮಾತನಾಡಿದ್ದು, ಬರಲಿ ಪಾಪ ಅವರು, ಅವರ ಪಾರ್ಟಿ ಬಿದ್ದೋಗಿದೆ ಅಂತಾ ಗೊತ್ತಾಗಿದೆ. ಮೇಲೆ ಎತ್ತಲು ಬಂದಿದ್ದಾರೆ. ಅದಕ್ಕೆ ಹುಲಿ ನೋಡಿಕೊಂಡು ಹೋಗಲು ಬಂದಿದ್ದಾರೆ ಬಹಳ ಸಂತೋಷ. ಕರ್ನಾಟಕ ರಾಜ್ಯದಲ್ಲಿ ಹೊಸ ಅಧ್ಯಾಯ. ಭ್ರಷ್ಟಾಚಾರ ನಿರ್ಮೂಲನೆ ಮಾಡುವ ದಿನ ಹತ್ತನೇ ತಾರೀಖು, ಭ್ರಷ್ಟಾಚಾರ ಬದಿದೋಡಿಸುವ ದಿನ. ಈ ರಾಜ್ಯಕ್ಕೆ ಹೊಸ ಭವಿಷ್ಯವನ್ನ, ಅಭಿವೃದ್ಧಿ ಶೀಲ ಕರ್ನಾಟಕ ನಿರ್ಮಾಣ ಮಾಡುವ ದಿನ ಬಂದಿದೆ. ಈಗ ತಾನೇ ಚಿಕ್ಕನಾಯಕನಹಳ್ಳಿ ಮುಗಿಸಿ ಬಂದಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ: ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ವಿರುದ್ಧ ದೂರು ನೀಡಿದ ಜೆಡಿಎಸ್
ಕಾಂಗ್ರೆಸ್ ಪಕ್ಷ ಮಾತ್ರ ವಿಶ್ವಾಸ
ಕಿರಣ್‌ಕುಮಾರ್ ಏನ್ ದಡ್ಡರೇ, ಶಿವಲಿಂಗೇಗೌಡರಿಗೆ ಏನು ಬುದ್ದಿ ಇಲ್ವೇ. ಎಲ್ಲಾ ಶಾಸಕರಾಗಿರುವವರು ಇಂತಹ ಯೋಚನೆ ಮಾಡುತ್ತಿದ್ದಾರೆ. ಬಿಜೆಪಿಯ ಸಿಟ್ಟಿಂಗ್ ಎಂಎಲ್‌ಎ, ಎಂಎಲ್‌ಸಿಗಳು ಎಲ್ಲೂ ಕೂಡ ಹೆಜ್ಜೆ ಇಡ್ತಾ ಇದ್ದಾರೆ. ಅವರೆಲ್ಲರೂ ಪ್ರಜ್ಞಾವಂತ ನಾಯಕರುಗಳು. ಇವರು ಎರಡು ಪಕ್ಷಗಳ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಮಾತ್ರ ವಿಶ್ವಾಸ ಅಂತ ಎಲ್ಲರೂ ಬರ್ತಾ ಇದ್ದಾರೆ.
ಕಾಂಗ್ರೆಸ್‌ನಲ್ಲಿ ಟಿಕೆಟ್ ವಂಚಿತರ ಬಂಡಾಯ ವಿಚಾರ ಹಾಗೂ ನಮ್ಮ ಪಕ್ಷಕ್ಕೆ ಬರ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಬಹಳ ಸಂತೋಷ, ನಾನು ಅವರ ಪಾರ್ಟಿಯಿಂದ ಬಂದಿರುವವರ ಲೆಕ್ಕ ಕೊಡುತ್ತೇನೆ ಎಂದು ಹೇಳಿದರು.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:46 pm, Sun, 9 April 23