ನಿಮ್ಮ ಕೆಲಸದ ಮೇಲೆ ನಿಮಗೆ ನಂಬಿಕೆ ಇದ್ದಿದ್ದರೆ, ಸಿಎಂ ಬೊಮ್ಮಾಯಿಗೆ ಸಲೀಂ ಅಹ್ಮದ್​ ಸಾಲು ಸಾಲು ಪ್ರಶ್ನೆ

ನಿಮ್ಮ ಕೆಲಸದ ಮೇಲೆ ನಿಮಗೆ ನಂಬಿಕೆ ಇದ್ದಿದ್ದರೆ, ನಿಮ್ಮ ಚುನಾವಣಾ ಪ್ರಚಾರಕ್ಕೆ ಚಿತ್ರ ನಟ ಸುದೀಪ್ ಯಾಕೆ ಬೇಕಿತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್​ ಸಿಎಂ ಬಸವರಾಜ ಬೊಮ್ಮಾಯಿಗೆ ಸಾಲು ಸಾಲು ಪ್ರಶ್ನೆ ಮಾಡಿದ್ದಾರೆ.

ನಿಮ್ಮ ಕೆಲಸದ ಮೇಲೆ ನಿಮಗೆ ನಂಬಿಕೆ ಇದ್ದಿದ್ದರೆ, ಸಿಎಂ ಬೊಮ್ಮಾಯಿಗೆ ಸಲೀಂ ಅಹ್ಮದ್​ ಸಾಲು ಸಾಲು ಪ್ರಶ್ನೆ
ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್
Follow us
ಗಂಗಾಧರ​ ಬ. ಸಾಬೋಜಿ
|

Updated on:Apr 09, 2023 | 5:45 PM

ಹಾವೇರಿ: ನಿಮ್ಮ ಕೆಲಸದ ಮೇಲೆ ನಿಮಗೆ ನಂಬಿಕೆ ಇದ್ದಿದ್ದರೆ, ನಿಮ್ಮ ಚುನಾವಣಾ ಪ್ರಚಾರಕ್ಕೆ ಚಿತ್ರ ನಟ ಸುದೀಪ್ ಯಾಕೆ ಬೇಕಿತ್ತು. ನಿಮ್ಮ ಕೆಲಸದ ಮೇಲೆ ನಿಮಗೆ ನಂಬಿಕೆ ಇದ್ದಿದ್ದರೆ, 23 ಸಾವಿರ ರೌಡಿಗಳನ್ನು ಕರೆದುಕೊಂಡು ಚುನಾವಣೆ ಯಾಕೆ ಮಾಡುತ್ತಿದ್ದೀರಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ (salim ahmed)​ ಸಿಎಂ ಬಸವರಾಜ ಬೊಮ್ಮಾಯಿಗೆ ಸಾಲು ಸಾಲು ಪ್ರಶ್ನೆ ಮಾಡಿದ್ದಾರೆ. ನಗರದಲ್ಲಿ ಆಯೋಜಿಸಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಬೊಮ್ಮಾಯಿಯವರು ನಮ್ಮ ಪಕ್ಷದ ನಾಯಕರನ್ನು ಕರೆದುಕೊಂಡ ಹೋಗಿ ಯಾರು ಬರುತ್ತಾರೆ ಬರಲಿ ಅಂತಾ ಚಾಲೆಂಜ್ ಮಾಡುತ್ತಾರೆ. ಯಾಕೆ ನಿಮ್ಮ ಕೆಲಸದ ಮೇಲೆ ನಿಮಗೆ ನಂಬಿಕೆ ಇಲ್ವಾ? ನಮ್ಮ ಕಾರ್ಯಕರ್ತರನ್ನು ಸೆಳೆದು ಚಾಲೆಂಜ್ ಹಾಕ್ತಿರಾ? ನೀವು ಸಿಎಂ ಆಗಿದ್ದಾಗ ನಡೆದ ಹಾನಗಲ್ಲ ಉಪಚುನಾವಣೆಯಲ್ಲಿ ಗೆದಿದ್ದು ನಾವೇ. ನಿಮ್ಮ‌ ಕ್ಷೇತ್ರದ ಬಂಕಾಪುರ ಸ್ಥಳಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿತು. ನೀವು ಕರ್ನಾಟಕದಲ್ಲಿ ಕೇವಲ 60 ಸೀಟುಗಳಲ್ಲಿ‌ ಮಾತ್ರ ಗೆಲ್ಲುತ್ತೀರಿ ಎಂದು ವಾಗ್ದಾಳಿ ಮಾಡಿದರು.

ಏಪ್ರಿಲ್ 16 ರಂದು ಕೋಲಾರದಲ್ಲಿ ಬೃಹತ್ ಸಮಾವೇಶ

ಕೋಲಾರದಲ್ಲಿ ಏಪ್ರಿಲ್ 16 ರಂದು ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಯವರು ಆಗಮಿಸಲಿದ್ದಾರೆ. ಬಿಜೆಪಿಯವರು ರಾಹುಲ್ ಗಾಂಧಿ ಅವರಿಂದ ಹೆದರಿದ್ದಾರೆ. ಪಾದಯಾತ್ರೆಯಲ್ಲಿ ರಾಹುಲ್​ಗೆ ಸಿಕ್ಕ ಬೆಂಬಲ ಬಿಜೆಪಿ ಭಯ ಹುಟ್ಟಿಸಿದೆ. ರಾಹುಲ್ ಗಾಂಧಿಯವರನ್ನು ತಡೆಯಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ನಾಯಕರಿಗೆ ಉತ್ತರ ನೀಡಲು ನಾವು ದೊಡ್ಡ ಕಾರ್ಯಕ್ರಮ ಹಮ್ಮಿಕೊಂಡಿದ್ದೆವೆ ಎಂದು ತಿಳಿಸಿದರು.

ಇದನ್ನೂ ಓದಿ: ರೆಡ್ಡಿಯಿಂದ ಬೆಳೆದವರೇ ಇಂದು ಅವರನ್ನ ದೂರಮಾಡಿದ್ದಾರೆ, ಸೋಮಶೇಖರ, ಶ್ರೀರಾಮುಲು ವಿರುದ್ಧ ಲಕ್ಷ್ಮೀ ಪರೋಕ್ಷ ವಾಗ್ದಾಳಿ

ಏಪ್ರಿಲ್​ 10 ರಂದು ಮೂರನೆ ಪಟ್ಟಿ ಬಿಡುಗಡೆ

ಏಪ್ರಿಲ್​ 10 ರಂದು ಮೂರನೆ ಪಟ್ಟಿ ಬಿಡುಗಡೆ ಮಾಡುತ್ತೇವೆ. ಬಿಜೆಪಿಯವರು ಇದುವರೆಗೂ ಒಂದೇ ಒಂದು ಪಟ್ಟಿ ಬಿಡುಗಡೆ ಮಾಡುವುದಕ್ಕೆ ಆಗಲಿಲ್ಲ. ಬಿಜೆಪಿಯ ಮುಖಂಡರೆ ಅವರ ಪಕ್ಷದ ಬಗ್ಗೆ ಅಸಹ್ಯ ಪಡುತ್ತಿದ್ದಾರೆ. ನಾವು ಅಭ್ಯರ್ಥಿ ಘೋಷಣೆ ಮಾಡಿದ ಕೆಲವು ಕ್ಷೇತ್ರದಲ್ಲಿ ಸಣ್ಣ ಪುಟ್ಟ ಸಮಸ್ಯೆ ಆಗುತ್ತಿವೆ. ಅಸಮಾಧಾನ ಆಗಿರುವವರ ಜೊತೆ ಮಾತನಾಡಿ ಸಮಾಧಾನ ಮಾಡುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್​ ಸೇರ್ಪಡೆಯಾಗಿದ್ದು ತಪ್ಪಾಯ್ತು, ಪಕ್ಷಕ್ಕೆ ರಾಜೀನಾಮೆ ನೀಡುವುದು ಅಷ್ಟೇ ಬಾಕಿ ಎಂದ ದತ್ತಾ

ಕಾಂಗ್ರೆಸ್​ಗೆ ತಲೆನೋವಾದ ಶಿಗ್ಗಾವಿ 

ಕುಸ್ತಿ ಅಖಾಡಕ್ಕೆ ಯಾರು ಬರ್ತೀರೋ ಬರ್ರಿ ನೋಡೋಣ ಎಂದು ಸಿಎಂ ಓಪನ್ ಚಾಲೆಂಜ್ ಮಾಡಿದ ಹಿನ್ನಲೆ ಶಿಗ್ಗಾವಿ ಕ್ಷೇತ್ರವನ್ನು ಕಾಂಗ್ರೆಸ್ ಹೈಕಮಾಂಡ್ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ಮೊದಲು ಶಿಗ್ಗಾವಿ ಟಿಕೆಟ್​​ ಗೊಂದಲ ಬಗೆಹರಿಸಲು ಕಾಂಗ್ರೆಸ್ ಹೈಕಮಾಂಡ್ ಪೇಚಾಡುತ್ತಿದೆ. ಸಲೀಂ ಅಹ್ಮದ್​ರನ್ನು ಕರೆಸಿ ಶಿಗ್ಗಾವಿ ಟಿಕೆಟ್​ ಫೈಟ್ ಬಗೆಹರಿಸಲು ಕಾಂಗ್ರೆಸ್​ ಮುಂದಾಗಿದೆ. ಹಾವೇರಿ ಖಾಸಗಿ ಹೋಟೆಲ್​ನಲ್ಲಿ ಶಿಗ್ಗಾವಿ ಕಾಂಗ್ರೆಸ್ ಟಿಕೆಟ್​​ ಆಕಾಂಕ್ಷಿಗಳನ್ನು ಕರೆಸಿ ಸಲೀಂ ಅಹ್ಮದ್​ ಸಭೆ ನಡೆಸುತ್ತಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:45 pm, Sun, 9 April 23

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ