Congress Bus Yatra ಪಕ್ಷ ಸಂಘಟನೆಗೆ ಕಾಂಗ್ರೆಸ್ ಬಸ್ ಯಾತ್ರೆ: ಎರಡು ಪ್ರತ್ಯೇಕ ಸಮಿತಿ ರಚಿಸಿದ ಡಿಕೆ ಶಿವಕುಮಾರ್

| Updated By: ರಮೇಶ್ ಬಿ. ಜವಳಗೇರಾ

Updated on: Jan 03, 2023 | 4:53 PM

ಪಕ್ಷ ಸಂಘಟನೆ ಸಲುವಾಗಿ ಕಾಂಗ್ರೆಸ್ ಬಸ್ ಯಾತ್ರೆ ಕೈಗೊಂಡಿದ್ದರು, ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎರಡು ಪ್ರತ್ಯೇಕ ಸಮನ್ವಯ ಸಮಿತಿ ರಚಿಸಿದ್ದಾರೆ.

Congress Bus Yatra ಪಕ್ಷ ಸಂಘಟನೆಗೆ ಕಾಂಗ್ರೆಸ್ ಬಸ್ ಯಾತ್ರೆ: ಎರಡು ಪ್ರತ್ಯೇಕ ಸಮಿತಿ ರಚಿಸಿದ ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
Follow us on

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ (Karnataka Assembly election 2023) ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸಿದ್ದು, ಈಗಾಗಲೇ ಟಿಕೆಟ್​ ಹಂಚಿಕೆ ಸಂಬಂಧ ಜಿಲ್ಲಾವಾರು ಅಭ್ಯರ್ಥಿಗಳ ಅಭಿಪ್ರಾಯ ಸಂಗ್ರಹ ನಡೆದಿದೆ. ಇನ್ನೊಂದೆಡೆ ಪಕ್ಷ ಸಂಘಟನೆಗಾಗಿ ಬಸ್ ಯಾತ್ರೆಗೆ (Congress Bus Yatra) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಎರಡು ಪ್ರತ್ಯೇಕ ಸಮನ್ವಯ ಸಮಿತಿ ರಚಿಸಿದ್ದಾರೆ.

ಇದನ್ನೂ ಓದಿ: Congress Bus Yatra:ಕರ್ನಾಟಕ ಕಾಂಗ್ರೆಸ್​ ಬಸ್ ಯಾತ್ರೆಗೆ ಮುಹೂರ್ತ ಫಿಕ್ಸ್, ಇಲ್ಲಿದೆ ವೇಳಾಪಟ್ಟಿ

ಕಾಂಗ್ರೆಸ್ ಪಕ್ಷ ಸಂಘಟನೆಗೆ ನಾಯಕರ ಬಸ್ ಯಾತ್ರೆ ಹಿನ್ನೆಲೆ ಡಿಕೆ ಶಿವಕುಮಾರ್ ಅವರು ಉತ್ತರ ಹಾಗೂ ದಕ್ಷಿಣ ಕರ್ನಾಟಕ್ಕೆ ಎರಡು ಪ್ರತ್ಯೇಕ ಸಮನ್ವಯ ಸಮಿತಿ ರಚನೆ ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗಕ್ಕೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ನೇತೃತ್ವದಲ್ಲಿ 22 ಸಮನ್ವಯ ಸದಸ್ಯರನ್ನು ನೇಮಿಸಿದ್ರೆ, ದಕ್ಷಿಣ ‌ಕರ್ನಾಟಕಕ್ಕೆ ಸಂಸದ ಜಿ ಸಿ ಚಂದ್ರಶೇಖರ ನೇತೃತ್ವದಲ್ಲಿ 29 ಸದಸ್ಯರ ನೇಮಕ ಮಾಡಿ ಡಿಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಈ ಎರಡು ಸಮನ್ವಯ ಸಮಿತಿ ಬಸ್ ಯಾತ್ರೆಯ ಸಿದ್ಧತೆ ನೋಡಿಕೊಳ್ಳಲಿದೆ.

ಜ.11ರಿಂದ ಬಸ್ ಯಾತ್ರೆ ಶುರು

ಕಾಂಗ್ರೆಸ್​ ಬಸ್ ಯಾತ್ರೆಗೆ (Congress Bus Yatra) ಮುಹೂರ್ತ ಫಿಕ್ಸ್​ ಆಗಿದ್ದು, ಜನವರಿ 11ರಿಂದ ಕಾಂಗ್ರೆಸ್ ನಾಯಕರ ಜಂಟಿ ಬಸ್ ಯಾತ್ರೆ ಆರಂಭವಾಗಲಿದೆ. ಬೆಳಗಾವಿಯಿಂದ ಶುರುವಾಗಲಿದ್ದು, ಒಟ್ಟೂ 21 ಜಿಲ್ಲೆಗಳಲ್ಲಿ ಬಸ್ ಯಾತ್ರೆ ಸಂಚರಿಸಲಿದೆ.

* ಜನವರಿ 11ರಂದು ಬೆಳಗಾವಿ ಜಿಲ್ಲೆ * ಜನವರಿ 16ರಂದು ಹೊಸಪೇಟೆ * ಜನವರಿ 17ರಂದು ಕೊಪ್ಪಳದಲ್ಲಿ ಯಾತ್ರೆ * ಜನವರಿ 18ರಂದು ಬಾಗಲಕೋಟೆ, ಗದಗ ಜಿಲ್ಲೆಯಲ್ಲಿ ಬಸ್ ಯಾತ್ರೆ * ಜನವರಿ 19ರಂದು ಹಾವೇರಿ, ದಾವಣಗೆರೆ ಜಿಲ್ಲೆ * ಜನವರಿ 21 ಹಾಸನ, ಚಿಕ್ಕಮಗಳೂರು * ಜನವರಿ 22 ಉಡುಪಿ, ದಕ್ಷಿಣ ಕನ್ನಡ. * ಜನವರಿ 23 ಕೋಲಾರ, ಚಿಕ್ಕಬಳ್ಳಾಪುರ * ಜನವರಿ 24 ತುಮಕೂರು, ಬೆಂಗಳೂರು ಗ್ರಾಮಾಂತರ * ಜನವರಿ 25 ಚಾಮರಾಜನಗರ, ಮೈಸೂರು * ಜನವರಿ 26 ಮಂಡ್ಯ ಮತ್ತು ರಾಮನಗರ * ಜನವರಿ 27 ಯಾದಗಿರಿ-ಕಲಬುರಗಿ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ