AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೆಡೆ ರಾಹುಲ್​ ಗಾಂಧಿ ಹೆಲಿಕಾಪ್ಟರ್​​​, ಮತ್ತೊಂದೆಡೆ ಸಿಎಂ ಬೊಮ್ಮಾಯಿ ಕಾರು ತಪಾಸಣೆ ಮಾಡಿದ ಚುನಾವಣಾಧಿಕಾರಿಗಳು

ಚುನಾವಣಾಧಿಕಾರಿಗಳು ಬಾಗಲಕೋಟೆಯಲ್ಲಿ ರಾಹುಲ್​ ಗಾಂಧಿಯವರ ಹೆಲಿಕಾಪ್ಟರ್​ ಅನ್ನು ಪರಿಶೀಲಿಸಿದರೇ ಇತ್ತ ದೊಡ್ಡಬಳ್ಳಾಪುರ ಚೆಕ್​​ಪೋಸ್ಟ್​​ನಲ್ಲಿ ಸಿಎಂ ಬೊಮ್ಮಾಯಿ ಅವರ ಕಾರನ್ನು ತಪಾಸಣೆ ಮಾಡಿದ್ದಾರೆ.

ವಿವೇಕ ಬಿರಾದಾರ
|

Updated on:Apr 23, 2023 | 1:45 PM

Share

ಬಾಗಲಕೋಟ: ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Election 2023) ಹಿನ್ನೆಲೆ ಕಾಂಗ್ರೆಸ್​ (Congress) ನಾಯಕ ರಾಹುಲ್​​ ಗಾಂಧಿ (Rahul Gandhi) ರಾಜ್ಯ ಪ್ರವಾಸದಲ್ಲಿದ್ದು, ಇಂದು (ಏ.23) ಹೆಲಿಕಾಪ್ಟರ್​ ಮೂಲಕ ಬಾಗಲಕೋಟೆಗೆ (Bagalkot) ಆಗಮಿಸಿದ್ದಾರೆ. ಈ ವೇಳೆ ಚುನಾವಣಾಧಿಕಾರಿಗಳು (Election Commission Officers) ಅವರ ಹೆಲಿಕಾಪ್ಟರ್ ಅನ್ನು ಪರಿಶೀಲಿಸಿದ್ದಾರೆ. ಮತ್ತೊಂದೆಡೆ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ (CM Basavaraj Bommai) ಕಾರನ್ನು ದೊಡ್ಡಬಳ್ಳಾಪುರ ಚೆಕ್​​ಪೋಸ್ಟ್​​ನಲ್ಲಿ ಚುನಾವಣಾಧಿಕಾರಿಗಳು ಪರಿಶೀಲಿಸಿದ್ದಾರೆ.

ರಾಹುಲ್​ ಗಾಂಧಿಯವರು ಇಂದು ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮಕ್ಕೆ ಬಂದ ರಾಹುಲ್​ ಗಾಂಧಿಯವರು ಭೇಟಿ ನೀಡಿದ್ದಾರೆ. ರಾಹುಲ್​ ಗಾಂಧಿ ಹೆಲಿಕಾಪ್ಟರ್ ಮೂಲಕ ಆಗಮಿಸಿದದ್ದು, ಚಾಪರ್​​ ಕೂಡಲಸಂಗಮದ ಬಸವ ಭವನದ ಪಕ್ಕದ ಹೆಲಿಪ್ಯಾಡ್​​ನಲ್ಲಿ ಲ್ಯಾಂಡ್​ ಆಗುತ್ತಿದ್ದಂತೆ ಚುನಾವಣಾ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಅಲ್ಲದೇ ಅಧಿಕಾರಿಗಳು ವಿಡಿಯೋ, ಫೋಟೋ ದಾಖಲೆ ಮಾಡಿಕೊಂಡಿಕೊಂಡಿದ್ದಾರೆ. ಮೊತ್ತೊಂದಡೆ ಇಂದಿನಿಂದ ಪ್ರಚಾರದ ಭರಾಟೆಯಲ್ಲಿ ತೊಡಗಿಸಿಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕಾರ್​ನ್ನು ಚುನಾವಣಾ ಅಧಿಕಾರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಚೆಕ್​​ಪೋಸ್ಟ್​​ನಲ್ಲಿ ತಪಾಸಣೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:52 pm, Sun, 23 April 23

ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ