Karnataka Polls 2023: ಬೆಂಗಳೂರಿನಲ್ಲಿ ಚುನಾವಣಾಧಿಕಾರಿಗಳ ಹದ್ದಿನ ಕಣ್ಣು: 28 ಕ್ಷೇತ್ರಗಳಿಗೆ ವೀಕ್ಷಕರ ನೇಮಕ

ಬೆಂಗಳೂರಿನ 28 ವಿಧಾನಸಭೆ ಚುನಾವಣೆ ಮೇಲೆ ನಿಗಾ ವಹಿಸಲು ವೀಕ್ಷಕರನ್ನು ನೇಮಿಸಲಾಗಿದೆ. ಹಾಗಾದ್ರೆ, ಯಾವ ಕ್ಷೇತ್ರಕ್ಕೆ ಯಾರು? ಎನ್ನುವ ಮಾಹಿತಿ ಈ ಕೆಳಗಿನಂತಿದೆ.

Karnataka Polls 2023: ಬೆಂಗಳೂರಿನಲ್ಲಿ ಚುನಾವಣಾಧಿಕಾರಿಗಳ ಹದ್ದಿನ ಕಣ್ಣು:  28 ಕ್ಷೇತ್ರಗಳಿಗೆ ವೀಕ್ಷಕರ ನೇಮಕ
5 ಜನ ಕಲಾವಿದರಿಂದ ಸಾಂಪ್ರದಾಯಿಕ ಚಿತ್ತಾರದೊಂದಿಗೆ ಮತದಾರರನ್ನು ಸೆಳೆಯಲು ಈ ವಿನೂತನ ಕ್ರಮ

Updated on: Apr 23, 2023 | 4:03 PM

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ರಂಗೇರಿದ್ದು, ಇದೇ ಮೇ 10ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇನ್ನು ಅಕ್ರಮಗಳನ್ನು ತಡೆಗಟ್ಟಲು ಚುನಾವಣಾ ಆಯೋಗ ಸಹ ಎಲ್ಲೆಡೆ ಹದ್ದಿನ ಕಣ್ಣಿಟ್ಟಿದೆ. ವಿಶೇಷವಾಗಿ ಬೆಂಗಳೂರಿನ 28 ಕ್ಷೇತ್ರಗಳ ಮೇಲೆ ಚುನಾವಣಾಧಿಕಾರಿಗಳು ನಿಗಾ ವಹಿಸಿದ್ದು, 28 ಕ್ಷೇತ್ರಗಳಿಗೆ ವೀಕ್ಷಕರನ್ನು(observers) ನೇಮಿಸಲಾಗಿದೆ. 14 ಸಾಮಾನ್ಯ ವೀಕ್ಷಕರು, ನಾಲ್ವರು ಪೊಲೀಸ್ ವೀಕ್ಷಕರು, 24 ಮಂದಿ ಖರ್ಚು ವೆಚ್ಚಗಳ ವೀಕ್ಷಕರನ್ನು ನೇಮಕ ಮಾಡಿ ಬೆಂಗಳೂರು ಚುನಾವಣಾಧಿಕಾರಿ ಇಂದು(ಏಪ್ರಿಲ್ 23) ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: Karnataka Assembly Elections 2023: ಬೆಂಗಳೂರಿನಲ್ಲಿ ಈವರೆಗೂ ಸೀಜ್‌ ಆದ ವಸ್ತುಗಳ ಮೌಲ್ಯ ಇಷ್ಟೊಂದಾ? ಅಬ್ಬಬ್ಬಾ..!

ಚುನಾವಣೆ ವೇಳೆ ನಡೆಯುವ ಅಕ್ರಮಗಳು ನಡೆಯುತ್ತಿರುವ ಬಗ್ಗೆ ಹೆಚ್ಚು ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ಐಎಎಸ್ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಲಾಗಿದ್ದು, ನಾಲ್ವರನ್ನು ಪೊಲೀಸರ ಕಾರ್ಯ ವೈಖರಿ ಬಗ್ಗೆ ನಿಗಾವಹಿಸಲಿದ್ದಾರೆ. ಇನ್ನು 24 ವೀಕ್ಷಕರು ಕ್ಷೇತ್ರಗಳ ವಿವಿಧ ಪಕ್ಷಗಳ ಅಭ್ಯರ್ಥಿಗಳ ಖರ್ಚು ವೆಚ್ಚಗಳ ಮೇಲೆ ನಿಗಾ ಇಡಲಿದ್ದಾರೆ.

ಯಾವ ಕ್ಷೇತ್ರಕ್ಕೆ ಯಾರು?

  •  ಮಹದೇವಪುರ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರ- ಡಾ. ನಾರಾಯಣಸ್ವಾಮಿ( ಐಎಎಸ್)
  • ಯಶವಂತಪುರ ಹಾಗೂ ದಾಸರಹಳ್ಳಿ- ಕಾಮಿನಿ ಚೌಹಾಣ್ ರತನ್(ಐಎಎಸ್ )
  • ಆರ್ ಆರ್ ನಗರ ಹಾಗೂ ಶಿವಾಜಿನಗರ- ಅಹಮದ್ ನದೀಮ್
  • ಗೋವಿಂದರಾಜನಗರ ಹಾಗೂ ಚಿಕ್ಕಪೇಟೆ-ಲೋಚನ್ ಸೆಹ್ರಾ
  • ಜಯನಗರ ಹಾಗೂ ಬೊಮ್ಮನಹಳ್ಳಿ- ಸಮೀರ್ ವರ್ಮಾ
  • ವಿಜಯನಗರ ಹಾಗೂ ಬಸವನಗುಡಿ- ಬಿ. ಬಾಲಮಯ ದೇವಿ
  • ಯಲಹಂಕ ಹಾಗೂ ಬ್ಯಾಟರಾಯನಪುರ-ಡಾ.ಪ್ರತಿಭಾ ಸಿಂಗ್
  • ಕೆ ಆರ್ ಪುರ ಹಾಗೂ ಆನೇಕಲ್-ಕೆ. ವೀರರಾಘವ ರಾವ್
  • ಮಲ್ಲೇಶ್ವರಂ ಹಾಗೂ ಹೆಬ್ಬಾಳ-ದೀಪಕ್ ಆನಂದ್
  • ಸರ್ವಜ್ಞನಗರ ಹಾಗೂ ಸಿ ವಿ ರಾಮನ್ ನಗರ-ಡಾ.ಕೆ ವಾಸುಕಿ
  • ರಾಜಾಜಿನಗರ ಹಾಗೂ ಚಾಮರಾಜಪೇಟೆ-ಸುಶೀಲ್ ಕುಮಾರ್ ಪಟೇಲ್
  • ಮಹಾಲಕ್ಷ್ಮಿಲೇಔಟ್ ಹಾಗೂ ಪುಲಿಕೇಶಿನಗರ-ಹರಿಚಂದನ ದಾಸರಿ
  • ಶಾಂತಿನಗರ ಹಾಗೂ ಗಾಂಧಿನಗರ- ಅನಿಮೇಶ್ ಕುಮಾರ್ ಪರಶಾರ್
  • ಪದ್ಮನಾಭನಗರ ಹಾಗೂ ಬಿಟಿಎಂ ಲೇಔಟ್-ಅವದೇಶ್ ಕುಮಾರ್ ತಿವಾರಿ

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Follow Us