AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತದಾನ ದಿನದಂದು ನಮ್ಮ ಮೆಟ್ರೋ ರೈಲು ಸಂಚಾರ ಮಧ್ಯರಾತ್ರಿಯವರೆಗೂ ವಿಸ್ತರಣೆ: ಇಲ್ಲಿದೆ ವೇಳಾಪಟ್ಟಿ

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಎರಡು ದಿನ ಬಾಕಿಯಿದೆ. ಉಭಯ ಪಕ್ಷಗಳು ಅಬ್ಬರದ ಪ್ರಚಾರ ಕೈಗೊಂಡಿವೆ. ಅದರಂತೆ ಮೇ.10 ರಂದು ನಡೆಯುವ ಮತದಾನಕ್ಕೆ ಬಿಎಂಆರ್​ಸಿಎಲ್ ಮೆಟ್ರೋ ರೈಲು ಸಂಚಾರದ ಅವಧಿಯನ್ನ ವಿಸ್ತರಣೆ ಮಾಡಿದೆ.

ಮತದಾನ ದಿನದಂದು ನಮ್ಮ ಮೆಟ್ರೋ ರೈಲು ಸಂಚಾರ  ಮಧ್ಯರಾತ್ರಿಯವರೆಗೂ ವಿಸ್ತರಣೆ: ಇಲ್ಲಿದೆ ವೇಳಾಪಟ್ಟಿ
ಪ್ರಾತಿನಿಧಿಕ ಚಿತ್ರ
ಕಿರಣ್ ಹನುಮಂತ್​ ಮಾದಾರ್
|

Updated on:May 08, 2023 | 1:58 PM

Share

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ(Karnataka Assembly Election)ಗೆ ಇನ್ನು ಎರಡು ದಿನ ಬಾಕಿಯಿದೆ. ಉಭಯ ಪಕ್ಷಗಳು ಅಬ್ಬರದ ಪ್ರಚಾರ ಕೈಗೊಂಡಿವೆ. ಅದರಂತೆ ಮೇ.10 ರಂದು ನಡೆಯುವ ಮತದಾನಕ್ಕೆ ಬಿಎಂಆರ್​ಸಿಎಲ್(BMRCL) ಮೆಟ್ರೋ ರೈಲು ಸಂಚಾರದ ಅವಧಿಯನ್ನ ವಿಸ್ತರಣೆ ಮಾಡಿದೆ. ಹೌದು ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ರೈಲು ಸೇವೆಗಳನ್ನ ಮಧ್ಯರಾತ್ರಿಯವರೆಗೆ ವಿಸ್ತರಿಸಲಾಗಿದೆ.

ಮೆಟ್ರೋ ರೈಲು ಸಂಚಾರದ ವೇಳಾ ಪಟ್ಟಿ ಇಲ್ಲಿದೆ

ಟರ್ಮಿನಲ್ ನಿಲ್ದಾಣಗಳಾದ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ರೇಷ್ಮೆ, ಸಂಸ್ಥೆ, ಕೃಷ್ಣರಾಜಪುರ ಮತ್ತು ವೈಟ್‌ ಫೀಲ್ಡ್ (ಕಾಡುಗೋಡಿ)ಯಿಂದ ಕೊನೆಯ ರೈಲು ಮೇ.11 ರ ರಾತ್ರಿ 12 ಗಂಟೆ 05 ನಿಮಿಷಕ್ಕೆ ಹೊರಡಲಿದೆ. ಇನ್ನು ನಾಡಪುಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್‌ನಿಂದ ಕೊನೆಯ ರೈಲು ಮೇ.11 ರ ರಾತ್ರಿ 12 ಗಂಟೆ 35 ನಿಮಿಷಕ್ಕೆ ಎಲ್ಲಾ ನಾಲ್ಕು ದಿಕ್ಕುಗಳ ಕಡೆಗೆ ಅಂದರೆ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ರೇಷ್ಮೆ, ಸಂಸ್ಥೆಯಿಂದ ಹೊರಡಲಿದೆ. ಈ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಬೇಕೆಂದು ಬಿಎಂಆರ್ಸಿಎಲ್ ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ:3ನೇ ತರಗತಿ ವಿದ್ಯಾರ್ಥಿನಿಯಿಂದ ಮತದಾನದ ಜಾಗೃತಿ ಅಭಿಯಾನ; ವಿಡಿಯೋ ವೈರಲ್​

KSTDC: ಮತದಾನ ದಿನದಂದು ‘ಮಯೂರ’ ಹೋಟೆಲ್‌ಗಳಲ್ಲಿ ತಂಗಲು 50% ವಿಶೇಷ ರಿಯಾಯಿತಿ

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ಜೋರಾಗಿದ್ದು, ಎಲ್ಲ ಪಕ್ಷಗಳು ಪ್ರಚಾರದಲ್ಲಿ ತೊಡಗಿದ್ದಾರೆ. ಇದರ ಜೊತೆ ಸರ್ಕಾರ, ರಾಜ್ಯದಲ್ಲಿ ಮತದಾನದ ಮಹತ್ವವನ್ನ ವಿವಿಧ ಪ್ರಯೋಗಗಳನ್ನ ಮಾಡುವ ಮೂಲಕ ತಿಳಿಸುತ್ತಿದೆ. ಅದರಂತೆ ಇದೀಗ ಮೇ.10 ರಂದು ಮತದಾನ ಮಾಡುವವರಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು(KSTDC) ನಡೆಸುತ್ತಿರುವ ಮಯೂರ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲು ಶೇಕಡಾ 50 ರಷ್ಟು ರಿಯಾಯಿತಿಯನ್ನ ಘೋಷಿಸಿವೆ. ಹೌದು ಈ ಕೊಡುಗೆಯನ್ನ ಮೇ 10 ರಂದು ರಾಜ್ಯಾದ್ಯಂತ ಪಡೆಯಬಹುದು. ಮತದಾನದ ದಿನದಂದು ಹೊರಹೋಗಲು ಮತ್ತು ಮತದಾನ ಮಾಡಲು ಜನರನ್ನು ಉತ್ತೇಜಿಸಲು ಇಲಾಖೆ ಇದನ್ನ ಪ್ರಕಟಿಸಿದೆ.

ಈ ಕುರಿತು ಕೆಎಸ್‌ಟಿಡಿಸಿ ‘ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಉತ್ತೇಜಿಸುವ ಸಲುವಾಗಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ನಿಗಮದ ಒಡೆತನದ ‘ಮಯೂರ’ ಹೋಟೆಲ್‌ಗಳಲ್ಲಿ ತಂಗಲು 50% ವಿಶೇಷ ರಿಯಾಯಿತಿಯನ್ನು ನೀಡಲು ಘೋಷಿಸಿದೆ. ರಾಜ್ಯದಾದ್ಯಂತ ಮತದಾನ ಮಾಡುವ ಸಾರ್ವಜನಿಕರಿಗೆ, ಪ್ರವಾಸಿಗರಿಗೆ. ವಿಶೇಷ ರಿಯಾಯಿತಿಯನ್ನು ಪಡೆಯಲು ಬಯಸುವ ಸಾರ್ವಜನಿಕರು ಕಡ್ಡಾಯವಾಗಿ ಮತ ಚಲಾಯಿಸಿ ಮತ್ತು ಈ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಇನ್ನು ರಾಜ್ಯ ಸರ್ಕಾರ ನಡೆಸುವ ಮಯೂರ ಹೋಟೆಲ್‌ಗಳು ಕರ್ನಾಟಕದಾದ್ಯಂತ ಮತ್ತು ರಾಜ್ಯದ ಎಲ್ಲಾ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿವೆ ಎಂದಿದೆ.

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:52 pm, Mon, 8 May 23