ನಾನು ಬಿಜೆಪಿ ಸ್ಟಾರ್ ಪ್ರಚಾರಕ, ನನ್ನ ಸಲುವಾಗಿ 4 ದಿನ ಹೆಲಿಕಾಪ್ಟರ್ಗಳು ನಿಂತಿದ್ದವು: ಎಂಬಿ ಪಾಟೀಲ್ ವಿರುದ್ಧ ಗುಡುಗಿದ ಯತ್ನಾಳ್
ವಿಧಾನಸಭೆ ಚುನಾವಣೆ ಕಾವು ಜೋರಾಗಿದ್ದು, ಇಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದೆ. ಅದರಂತೆ ಇಂದು(ಮೇ.8) ಬಸನಗೌಡ ಪಾಟೀಲ್ ಯತ್ನಾಳ್ ಅಬ್ಬರದ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಎಂ.ಬಿ.ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರ: ವಿಧಾನಸಭೆ ಚುನಾವಣೆ(Karnataka Assembly Election) ಕಾವು ಜೋರಾಗಿದ್ದು, ಇಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದೆ. ಅದರಂತೆ ಇಂದು(ಮೇ.8) ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal) ಅಬ್ಬರದ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಎಂ.ಬಿ.ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ನೀವು ನಾಟಕ ಮಾಡಿ, ವಿಜಯಪುರ ನಗರದಲ್ಲಿ ನಿಮ್ಮ ನಾಟಕ ಮಾಡಬೇಡಿ. ನೀವು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷನಾಗಿರಬಹುದು, ನಾನು ರಾಜ್ಯ ಬಿಜೆಪಿಯ ಸ್ಟಾರ್ ಪ್ರಚಾರಕ. ನನ್ನ ಸಲುವಾಗಿಯೇ 4 ದಿನಗಳ ಕಾಲ ಹೆಲಿಕಾಪ್ಟರ್ಗಳು ನಿಂತಿದ್ದವು. ಬಿಜೆಪಿಯ 30 ಸ್ಟಾರ್ ಪ್ರಚಾರಕರಲ್ಲಿ ನಾನೂ ಒಬ್ಬ ಅನ್ನೋದು ತಿಳ್ಕೋರಿ ಎನ್ನುವ ಮೂಲಕ ಹರಿಹಾಯ್ದಿದ್ದಾರೆ.
ಸ್ವಪಕ್ಷಿಯ ನಾಯಕನ ವಿರುದ್ಧವೂ ಯತ್ನಾಳ ವಾಗ್ದಾಳಿ
ನಗರದಲ್ಲಿ ಕೊನೆಯ ಹಂತದ ಪ್ರಚಾರ ನಡೆಸಿದ ಯತ್ನಾಳ್, ಭರ್ಜರಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ್ದಾರೆ. ಇದೇ ವೇಳೆ ಬಳಿಕ ಸಿದ್ದೇಶ್ವರ ದೇವಸ್ಥಾನ ಬಳಿ ಭಾಷಣ ಮಾಡಿದ್ದು, ನನ್ನ ಸೋಲಿಸೋಕೆ 2 ಕೋಟಿ ಹಣಕಾಸಿನ , 5555 ನಂಬರ್ ಕಾರ್ ತಗೊಂಡಿದ್ದಾನೆ. ಎಂದು ಪರೋಕ್ಷವಾಗಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ವಿರುದ್ಧ ಕಿಡಿಕಾರಿದರು. ಇದೀಗ ಹೊಲಸ ಮುಖ ತಗೊಂಡು ನಾಗಠಾಣ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾನೆ. ಮುಖಕ್ಕೆ ಪೇರ್ ಆಂಡ್ ಲವ್ಲಿನಾದರೂ ಹಚ್ಕೋ ಎಂದು ಯತ್ನಾಳ್ ಟೀಕಿಸಿದ್ದಾರೆ.
ಇದನ್ನೂ ಓದಿ:ಈ ಕ್ಷೇತ್ರದಲ್ಲಿ ಶುರುವಾಗಿದೆ ದೇಣಿಗೆ ರಾಜಕೀಯ; ಜೆಡಿಎಸ್ ಅಭ್ಯರ್ಥಿಗೆ ಹೋದಲೆಲ್ಲ ಹರಿದು ಬರ್ತಿದೆ ಹಣ
ರೌಡಿಶೀಟರ್ ಹೈದರ್ ಅಲಿ ಹತ್ಯೆ ಪ್ರಕರಣ ಕೆಣಕಿದ ಯತ್ನಾಳ್
ಇನ್ನು ಇದೇ ವೇಳೆ ವಿಜಯಪುರ ನಗರದಲ್ಲಿ ರೌಡಿಶೀಟರ್ ಹೈದರ್ ಅಲಿ ಹತ್ಯೆ ಪ್ರಕರಣವನ್ನ ಕೆಣಕಿದ್ದಾರೆ. ಹೌದು ‘ಹೈದರ್ ಅಲಿಗೆ ಹಣ ತಗೊಂಡು ನಮಗೆ ಸಪೋರ್ಟ್ ಮಾಡು ಎಂದು ಕಾಂಗ್ರೆಸ್ನವರು ಹೇಳಿದ್ದರು. ಅವ ಅವರ ಮಾತು ಕೇಳದೇ ದೊಡ್ಡ ಹಣದ ಪೇಟಿ ಕೇಳಿದ್ದನು. ಅದಕ್ಕೆ ಅವನನ್ನ ಹೊಡೆದು ಹಾಕಿದ್ದಾರೆ. ಕಳೆದ 5 ವರ್ಷದಲ್ಲಿ ನಗರದಲ್ಲಿ ಒಂದೇ ಒಂದು ಶೂಟೌಟ್ ನಡೆದಿದೆಯಾ? ಎಂದು ಪ್ರಶ್ನಿಸಿದ್ದಾರೆ.
ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ