AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಟಿಕೆಟ್ ಮಿಸ್; ಜೆಪಿ ನಡ್ಡಾ ಭೇಟಿಗೆ ನಾಳೆ ದೆಹಲಿಗೆ ತೆರಳಲಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್

ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ, ಲಕ್ಷ್ಮಣ ಸವದಿ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದೆ. ಈ ನಡುವೆ ನಾಳೆ ತಮ್ಮ ಭೇಟಿಗೆ ಬೆಂಗಳೂರಿಗೆ ಬರುವಂತೆ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಮತ್ತು ಲಕ್ಷ್ಮಣ ಸವದಿಗೆ ಯಡಿಯೂರಪ್ಪ ಅವರು ಕರೆ ಮಾಡಿದ್ದಾರೆ. ಆದರೆ ನಾಳೆ ನಡ್ಡಾ ಭೇಟಿ ಮಾಡಿ ನಾಡಿದ್ದು ಯಡಿಯೂರಪ್ಪ ಅವರನ್ನು ಶೆಟ್ಟರ್ ಭೇಟಿ ಮಾಡಲಿದ್ದಾರೆ.

ಬಿಜೆಪಿ ಟಿಕೆಟ್ ಮಿಸ್; ಜೆಪಿ ನಡ್ಡಾ ಭೇಟಿಗೆ ನಾಳೆ ದೆಹಲಿಗೆ ತೆರಳಲಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್Image Credit source: INDIA TV
Rakesh Nayak Manchi
|

Updated on:Apr 11, 2023 | 10:58 PM

Share

ಹುಬ್ಬಳ್ಳಿ: ಟಿಕೆಟ್ ಘೋಷಣೆಯಾಗದ ಹಿನ್ನೆಲೆ ಬಿಜೆಪಿ ಹಿರಿಯ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಬುಧವಾರ (ಏಪ್ರಿಲ್ 12) ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಶೆಟ್ಟರ್ ಅವರಿಗೆ ಪಕ್ಷದಿಂದ ಟಿಕೆಟ್ ನಿರಾಕರಿಸಿದ ನಂತರ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಎಚ್ಚರಿಕೆ ನಡುವೆ ಬಿಜೆಪಿ ಹೈಕಮಾಂಡ್ (BJP High Commond) ಅವರನ್ನು ಆಹ್ವಾನಿಸಿದೆ. ಸದ್ಯ ಇಂದು ರಾತ್ರಿ ಬಡುಗಡೆಯಾದ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯಲ್ಲಿ ಶೆಟ್ಟರ್ ಪ್ರತಿನಿಧಿಸುತ್ತದ್ದ ಕ್ಷೇತ್ರ ಹುಬ್ಬಳ್ಳಿ ಧಾರವಾಡ ಕೇಂದ್ರದ ಟಿಕೆಟ್ ಘೋಷಣೆ ಮಾಡದೆ ಬಾಕಿ ಉಳಿಸಲಾಗಿದ್ದು, 2ನೇ ಹಂತದ ಪಟ್ಟಿಯಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ.

ಟಿಕೆಟ್ ಸಿಗದ ಬಗ್ಗೆ ಪ್ರತಿಕ್ರಿಯೆ ನೀಡಿದ ಜಗದೀಶ್ ಶೆಟ್ಟರ್, “ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಇರಬೇಕಿತ್ತು. ಆದರೆ ಹೆಸರು ಘೋಷಣೆಯಾಗಿಲ್ಲ. ನಾಳೆ ದೆಹಲಿಗೆ ರಾಷ್ಟ್ರೀಯ ಅಧ್ಯಕ್ಷರು ನನ್ನನ್ನು ಆಹ್ವಾನಿಸಿದ್ದಾರೆ. ನಾನು ದೆಹಲಿಯಿಂದ ಯಾರನ್ನೂ ಸಂಪರ್ಕಿಸಿಲ್ಲ ಆದರೆ ಅವರು ನನ್ನನ್ನು ಆಹ್ವಾನಿಸಿದ್ದಾರೆ. ನನ್ನ ನಿರ್ಧಾರವನ್ನು ಈಗಾಗಲೇ ಅವರಿಗೆ ತಿಳಿಸಿದ್ದೇನೆ. ನನಗೆ ಟಿಕೆಟ್ ಸಿಗುವ ಭರವಸೆ ಇದೆ. ನಾನು ಸ್ಪರ್ಧಿಸುವುದು ಖಚಿತ” ಎಂದು ಹುಬ್ಬಳ್ಳಿಯಲ್ಲಿ ಹೇಳಿದರು.

ಇದನ್ನೂ ಓದಿ: Jagadish Shettar: ಬಿಜೆಪಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗುಡ್ ​ಬೈ; ರಾಜೀನಾಮೆ ಪತ್ರ ವೈರಲ್, ಸ್ಪಷ್ಟನೆ ನೀಡಿದ ಶೆಟ್ಟರ್

ಹುಬ್ಬಳ್ಳಿಯ ಬಿಜೆಪಿ ಶಾಸಕ ಜಗದೀಶ್ ಶೆಟ್ಟರ್ ಇದುವರೆಗೆ ಆರು ಬಾರಿ ಗೆದ್ದಿದ್ದಾರೆ. “ನಾನು ಆರು ಬಾರಿ 21,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಆಯ್ಕೆಯಾಗಿದ್ದೇನೆ. ನನ್ನ ವಿರುದ್ಧ ಯಾವುದೇ ಆರೋಪಗಳಿಲ್ಲ. ನನ್ನನ್ನು ಏಕೆ ಚುನಾವಣೆಯಿಂದ ಹೊರಗಿಡಲಾಗಿದೆ? ನಾನು ಈಗಾಗಲೇ ನನ್ನ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದು, ಅದನ್ನು ತೀವ್ರಗೊಳಿಸುತ್ತೇನೆ” ಎಂದು ಹೇಳಿದ್ದಾರೆ.

ಬಿಜೆಪಿ ಹೈಕಮಾಂಡ್ ಚುನಾವಣೆಯಲ್ಲಿ ಸ್ಪರ್ಧಿಸದೆ ಹೊಸ ಮುಖಗಳಿಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡ ನಂತರ 67 ವರ್ಷದ ಬಿಜೆಪಿ ನಾಯಕ ಶೆಟ್ಟರ್, ಸುದ್ದಿಗೋಷ್ಠಿ ನಡೆಸಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಅಲ್ಲದೆ, ಟಿಕೆಟ್ ನೀಡದಿದ್ದರೂ ಸ್ಪರ್ಧೆ ಮಾಡುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸ್ವತಂತ್ರವಾಗಿ ಸ್ಪರ್ಧಿಸುವ ಎಚ್ಚರಿಕೆ ನೀಡಿದ್ದರು.

ಶೆಟ್ಟರ್, ಈಶ್ವರಪ್ಪ, ಸವದಿಗೆ ಕರೆ ಮಾಡಿದ ಯಡಿಯೂರಪ್ಪ

ಸದ್ಯ ಶೆಟ್ಟರ್, ಈಶ್ವರಪ್ಪ, ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ಕೈತಪ್ಪಿದೆ. ಈ ನಡುವೆ ನಾಳೆ ತಮ್ಮ ಭೇಟಿಗೆ ಬೆಂಗಳೂರಿಗೆ ಬರುವಂತೆ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಮತ್ತು ಲಕ್ಷ್ಮಣ ಸವದಿಗೆ ಯಡಿಯೂರಪ್ಪ ಅವರು ಕರೆ ಮಾಡಿದ್ದಾರೆ. ಆದರೆ ತಾನು ನಾಳೆ ದೆಹಲಿಗೆ ತೆರಳುತ್ತಿರುವುದಾಗಿ ಶೆಟ್ಟರ್ ಅವರು ಯಡಿಯೂರಪ್ಪಗೆ ತಿಳಿಸಿದ್ದಾರೆ. ಹೀಗಾಗಿ ನಾಳೆ ನಡ್ಡಾ ಭೇಟಿ ಮಾಡಿ ನಾಡಿದ್ದು ಯಡಿಯೂರಪ್ಪ ಭೇಟಿ ಮಾಡಲಿದ್ದಾರೆ.

ವಿಧಾನಸಭೆ ಚುಣಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:58 pm, Tue, 11 April 23

ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ