ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಬಿಸಿಬಿಸಿ ಚರ್ಚೆ; ಸಿಎಂ ಯಾರಾಗುತ್ತಾರೆ ಎನ್ನುವುದರ ಬಗ್ಗೆ ಪರಮೇಶ್ವರ್ ಹೇಳಿದ್ದೇನು?

ಸದಾಶಿವನಗರದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿದ ಜಿ.ಪರಮೇಶ್ವರ್ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿ ಹಿಂದಿರುಗಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಬಿಸಿಬಿಸಿ ಚರ್ಚೆ; ಸಿಎಂ ಯಾರಾಗುತ್ತಾರೆ ಎನ್ನುವುದರ ಬಗ್ಗೆ ಪರಮೇಶ್ವರ್ ಹೇಳಿದ್ದೇನು?
ಡಾ ಜಿ ಪರಮೇಶ್ವರ
Follow us
ಆಯೇಷಾ ಬಾನು
|

Updated on:May 12, 2023 | 12:05 PM

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ(Karnataka Assembly Elections 2023) ಮೇ 10ರಂದು ಮತದಾನ(Voting) ಪ್ರಕ್ರಿಯೆ ಮುಗಿದಿದ್ದು ಮೇ 13ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಇನ್ನು ಮತದಾನದ ದಿನದಂದು ಅನೌನ್ಸ್ ಆದ ಎಕ್ಸಿಟ್ ಪೋಲ್ ಫಲಿತಾಂಶ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಎಕ್ಸಿಟ್ ಪೋಲ್ ಫಲಿತಾಂಶದಲ್ಲಿ ಕಾಂಗ್ರೆಸ್ ಬಹುಮತ ಬಂದಿದ್ದು ಕಾಂಗ್ರೆಸ್ ಪಾಳೆಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರನ್ನು ಮಾಜಿ ಡಿಸಿಎಂ ಜಿ.ಪರಮೇಶ್ವರ್(Dr G Parameshwar) ಭೇಟಿ ಮಾಡಿ ಚರ್ಚೆ ತಂತ್ರಕಾರಿಕೆ ಹೆಣೆಯಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.

ಸದಾಶಿವನಗರದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿದ ಜಿ.ಪರಮೇಶ್ವರ್ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿ ಹಿಂದಿರುಗಿದ್ದಾರೆ. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಪರಮೇಶ್ವರ್, ರಾಜ್ಯದಲ್ಲಿ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ಚುನಾವಣೆಯಲ್ಲಿ ಕನಿಷ್ಠ 130 ಸ್ಥಾನಗಳನ್ನ ನಾವು ಗೆಲ್ಲುತ್ತೇವೆ. ಇದನ್ನು ನಾನು ಖಚಿತವಾಗಿಯೇ ಹೇಳುತ್ತಿದ್ದೇವೆ. ಜಿಲ್ಲಾವಾರು ಮಾಹಿತಿ ಪಡೆದುಕೊಂಡಿದ್ದೇವೆ. ನಮ್ಮ ಸ್ವಂತ ಬಲದ ಮೇಲೆ ಸರ್ಕಾರ ರಚಿಸುತ್ತೇವೆ. ಮುಖ್ಯಮಂತ್ರಿ ಆಯ್ಕೆ ಬಗ್ಗೆ ಹೈಕಮಾಂಡ್​ ತೀರ್ಮಾನ ಮಾಡುತ್ತೆ ಎಂದರು.

ಇದನ್ನೂ ಓದಿ: ‘ಮೈತ್ರಿಗೆ ನಾವು ಸಿದ್ಧ’ ಆದ್ರೆ ಕೆಲವು ಷರತ್ತುಗಳಿಗೆ ಒಪ್ಪಬೇಕು; ನಿಲುವು ಸ್ಪಷ್ಟಪಡಿಸಿದ ಹೆಚ್​ಡಿ ಕುಮಾರಸ್ವಾಮಿ

ಇನ್ನು ಇದೇ ವೇಳೆ ಕಪ್ ನಮ್ಮದೇ ಎಂಬ ಆರ್.ಅಶೋಕ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಜಿ.ಪರಮೇಶ್ವರ್, ಕಪ್ ಎಲ್ಲವೂ ಅವರದ್ದೇ ಆದರೂ ಸರ್ಕಾರ ಮಾತ್ರ ನಮ್ಮದು ಎಂದರು. ಹಾಗೂ ಖರ್ಗೆಯವರ ಜೊತೆ ರಾಜಕೀಯ ಮಾತಾಡಿಲ್ಲ. ವೈಯಕ್ತಿಕವಾಗಿ ಮಾತುಕತೆ ಮಾಡಿದ್ದೇವೆ. ಸಿಎಂ ಆಯ್ಕೆ ಬಗ್ಗೆ ನಾನು ಮಾತಾಡುವುದಿಲ್ಲ. ಪದೇ ಪದೇ ನಾವು ಹೇಳಿಕೆ ಕೊಡುವುದರಿಂದ ಗೊಂದಲ ಸೃಷ್ಟಿ ಆಗುತ್ತದೆ. ಹೈಕಮಾಂಡ್, ಯಾರು ಸಿಎಂ ಆಗಬೇಕು ಎಂದು ತೀರ್ಮಾನ ಮಾಡ್ತಾರೆ. ಸಿಎಂ ಆಯ್ಕೆಗೆ ನಮ್ಮಲ್ಲಿ ಯಾವುದೇ ಹೊಸ ಪದ್ದತಿ ಇಲ್ಲ. ಯಾವಾಗಲೂ ಮಾಡುವ ಪ್ರಕಾರವೇ ಆಯ್ಕೆ ಮಾಡ್ತೇವೆ ಎಂದರು.

ನನಗೆ ಜವಾಬ್ದಾರಿ ಕೊಟ್ಟ ದಿನದಿಂದ ನಾನೂ ಮಲಗಿಲ್ಲ, ಮಲಗುವುದಕ್ಕೂ ಬಿಟ್ಟಿಲ್ಲ ಎಂದ ಡಿಕೆಶಿವಕುಮಾರ್

ಬೆಂಗಳೂರು: ‘ನಾನು ಪಕ್ಷಕ್ಕೆ ಶ್ರಮ ಪಟ್ಟಿದ್ದೀನಿ, ರೆಸಾರ್ಟ್​ ರಾಜಕಾರಣ ಮುಗಿದಿದೆ. ನನಗೆ ಜವಾಬ್ದಾರಿ ಕೊಟ್ಟ ದಿನದಿಂದ ನಾನೂ ಮಲಗಿಲ್ಲ, ಮಲಗುವುದಕ್ಕೂ ಬಿಟ್ಟಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ದಿನೇಶ್ ಗುಂಡೂರಾವ್(Dinesh Gundu Rao) ಆಗಲ್ಲವೆಂದು ಬಿಟ್ಟಾಗ ನನಗೆ ಜವಾಬ್ದಾರಿ ಕೊಟ್ಟರು. ನೈತಿಕ ಹೊಣೆ ಹೊತ್ತು ಎಲ್ಲರೂ ರಾಜೀನಾಮೆ ಕೊಟ್ಟಿದ್ರು, ಆಗ ನನಗೆ ಸೋನಿಯ ಗಾಂಧಿಯವರು ಜವಾಬ್ದಾರಿ ಕೊಟ್ಟರು. ಈಗ ಹಿರಿಯರು ಕಿರಿಯರು ಎಲ್ಲರೂ ನಮಗೆ ಈಗ ಸಹಕಾರ ಕೊಡ್ತಾರೆ, ಉತ್ತಮವಾದ ಸರ್ಕಾರ ಕೊಡ್ತೀವಿ ಎಂದರು. ಎಕ್ಸಿಟ್ ಪೋಲ್ ಸರ್ವೇ ಕುರಿತು ಮಾತನಾಡಿದ ಅವರು ‘ ಈ ಬಗ್ಗೆ ನಂಬಿಕೆ ಇಲ್ಲ, ನನ್ನ ನಂಬಿಕೆ 141 ಸೀಟು, ಎಕ್ಸಿಟ್ ಪೋಲ್ ಸ್ಯಾಂಪಲ್ ಸಂಖ್ಯೆ ಕಡಿಮೆ ಇದ್ದು, ನಮ್ಮ ಸ್ಯಾಂಪಲ್ ಸಂಖ್ಯೆ ಜಾಸ್ತಿ ಇದೆ. ಇನ್ನೂ ಹೆಚ್ಚಿನ ಸಂಖ್ಯೆ ಬರಲಿದ್ದು, ನಿಚ್ಚಳವಾದ ಬಹುಮತ ಕಾಂಗ್ರೆಸ್​ಗೆ ಬರುತ್ತದೆ. ಇದು ನನ್ನ ಅಚಲವಾದ ನಂಬಿಕೆ. ಬಿಜೆಪಿಯವರು ಎಷ್ಟೇ ದುಡ್ಡು ಸುರಿದಿರಬಹುದು. ಬಿಜೆಪಿಯ ಎಷ್ಟೇ ದೊಡ್ಡ ನಾಯಕರು ಬಂದು ಪ್ರಚಾರ ಮಾಡಿರಬಹುದು. ಆದರೆ, ‘ಬ್ಯಾಲೇಟ್ ಈಸ್ ಸ್ಟ್ರಾಂಗರ್ ದೇನ್ ಬುಲೆಟ್’ ಯಾವ ರೀತಿ ಆಡಳಿತ ದುರುಪಯೋಗ ಮಾಡಿಕೊಂಡರು ಎನ್ನೋದು ದೊಡ್ಡ ಕಥೆ ಎಂದರು.

ರಾಜ್ಯದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:45 am, Fri, 12 May 23

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ