ಸಕ್ಕರೆ ನಾಡು ಮಂಡ್ಯದಲ್ಲಿ ಅಂಬಿ ಅಭಿಮಾನಿಗಳಿಂದ ಗೋ ಬ್ಯಾಕ್ ರಮ್ಯಾ ಅಭಿಯಾನ
ರಮ್ಯಾ ಮಂಡ್ಯಕ್ಕೆ ಎಂಟ್ರಿ ಬೆನ್ನಲ್ಲೇ ಅಂಬಿ ಅಭಿಮಾನಿಗಳು ಕೆಂಡಾ ಮಂಡಲರಾಗಿದ್ದಾರೆ. ರಾಜಕೀಯಕ್ಕೆ ಕಮ್ ಬ್ಯಾಕ್ ಮಾಡಿದ ರಮ್ಯಾರ ವಿರುದ್ಧ ಮಂಡ್ಯದಲ್ಲಿ ಗೋ ಬ್ಯಾಕ್ ರಮ್ಯಾ ಅಭಿಯಾನ ಶುರು ಮಾಡಲಾಗಿದೆ.
ಮಂಡ್ಯ: ಸ್ಯಾಂಡಲ್ ವುಡ್ ಕ್ವೀನ್, ಮಾಜಿ ಸಂಸದೆ ರಮ್ಯಾ ಅವರು ಮತ್ತೆ ರಾಜಕೀಯದಲ್ಲಿ ಆಕ್ಟಿವ್ ಆಗಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ. ಇಂದು ಕಾಂಗ್ರೆಸ್ಸಿನ ವಿಧಾನಸಭಾ ಅಭ್ಯರ್ಥಿಗಳ ಪರವಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಮತ್ತು ಇತರ ಕಾಂಗ್ರೆಸ್ ನಾಯಕರೊಂದಿಗೆ ಮಂಡ್ಯದಲ್ಲಿ ಪ್ರಚಾರ ಮಾಡಲಿದ್ದಾರೆ. ಆದ್ರೆ ರಮ್ಯಾಗೆ ಸಂಕಷ್ಟವೊಂದು ಎದುರಾಗಲಿದೆ. ರಾಜಕೀಯಕ್ಕೆ ಕಮ್ ಬ್ಯಾಕ್ ಮಾಡಿದ ರಮ್ಯಾರ ವಿರುದ್ಧ ಮಂಡ್ಯದಲ್ಲಿ ಗೋ ಬ್ಯಾಕ್ ರಮ್ಯಾ ಅಭಿಯಾನ ಶುರು ಮಾಡಲಾಗಿದೆ.
ಮಂಡ್ಯದಲ್ಲಿ ಶುರುವಾಯ್ತು ಗೋ ಬ್ಯಾಕ್ ರಮ್ಯಾ ಅಭಿಯಾನ
ರಮ್ಯಾ ಮಂಡ್ಯಕ್ಕೆ ಎಂಟ್ರಿ ಬೆನ್ನಲ್ಲೇ ಅಂಬಿ ಅಭಿಮಾನಿಗಳು ಕೆಂಡಾ ಮಂಡಲರಾಗಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ತೀರಿ ಹೋದಾಗ ಮುಖವನ್ನ ಸಹ ನೋಡಲು ಬಾರದ ರಮ್ಯಾ ಈಗ ಬರೋದು ಏಕೆ? ಅಂದು ಮನೆ ಮಗಳ ರೀತಿ ಸಾಕಿ ಸಂಸದೆಯನ್ನ ಮಾಡಿದ್ದು ನಮ್ಮ ಅಂಬರೀಶ್ ಅಣ್ಣ. ಪ್ರತಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ್ದು ಅಂಬಿ ಅಣ್ಣ. ಮಂಡ್ಯದಲ್ಲಿ ಕಾಂಗ್ರೆಸ್ ಗೆಲ್ಲಲು ಕಾರಣ ಇದೇ ಅಂಬರೀಶ್ ಅಣ್ಣ. ರಮ್ಯಾರಿಗೆ ಕಿಂಚಿತ್ತು ನಿಯತ್ತಿಲ್ಲ, ನಂಬಿಕೆ ವಿಶ್ವಾಸ ದ್ರೋಹ ಮಾಡಿದ್ದು ರಮ್ಯಾ. ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ರಾತ್ರೋ ರಾತ್ರಿ ಮನೆ ಕಾಲಿ ಮಾಡಿ ಪರಾರಿಯಾಗಿದ್ರು. ಮಂಡ್ಯದ ಕಾಂಗ್ರೆಸ್ ಕಾರ್ಯಕರ್ತರನ್ನ ಅವರ ಅಭಿಮಾನಿಗಳನ್ನ ಸೈಡ್ ಲೈನ್ ಮಾಡಿದ್ರು. ಮಂಡ್ಯಕ್ಕೆ ರಮ್ಯಾರ ಕೊಡುಗೆ ಶೂನ್ಯ. ಅಂದು ಬೇಡವಾದ ಮಂಡ್ಯ ಈಗ ಯಾಕೆ ಬೇಕು? ಚುನಾವಣೆಗೋಸ್ಕರ ಮಂಡ್ಯ ಕ್ಷೇತ್ರ ರಮ್ಯಾರಿಗೆ ಈಗ ನೆನಪಾಯ್ತಾ? ಎಂದು ಮಂಡ್ಯದಲ್ಲಿ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ.
ನಾಳೆ ನಾನು ಕಾಂಗ್ರೆಸ್ಸಿನ ವಿಧಾನಸಭಾ ಅಭ್ಯರ್ಥಿಗಳ ಪರವಾಗಿ ಪ್ರಿಯಾಂಕ ಗಾಂಧಿ ವಾದ್ರಾ ಮತ್ತು ಇತರ ಕಾಂಗ್ರೆಸ್ ನಾಯಕರೊಂದಿಗೆ ಮಂಡ್ಯದಲ್ಲಿ ಪ್ರಚಾರ ಮಾಡಲಿದ್ದೇನೆ. ನಿಮ್ಮೆಲ್ಲರನ್ನೂ ಭೇಟಿಯಾಗಲು ಎದುರುನೋಡುತ್ತಿದ್ದೇನೆ
— Ramya/Divya Spandana (@divyaspandana) May 1, 2023
ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಎಲ್ಲಾ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಎಲ್ಲಾ 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನ್ನು ಸೋಲಿಸಿ ಜೆಡಿಎಸ್ ಜಯಭೇರಿ ಬಾರಿಸಿತ್ತು. ಇದಾದ ಬಳಿಕ ರಮ್ಯಾ ಮಂಡ್ಯ ಜನತೆಯಿಂದ ದೂರುವಾಗಿದ್ದರು. ರಾಜಕೀಯದಿಂದ ಮೂರು ವರ್ಷಗಳಿಂದ ಅಂತರ ಕಾಯ್ದುಕೊಂಡಿದ್ದ ರಮ್ಯಾ ಅವರು ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಟಾರ್ ಪ್ರಚಾರಕಿಯಾಗಿ ರಾಜ್ಯ ರಾಜಕಾರಣಕ್ಕೆ ಮರು ಎಂಟ್ರಿ ಕೊಟ್ಟಿದ್ದಾರೆ. ಮೇ 1ರಿಂದ ವಿಜಯಪುರ, ಮಂಡ್ಯ, ರಾಮನಗರ, ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಮತಯಾಚನೆ ಶುರು ಮಾಡಿದ್ದಾರೆ. ಸದ್ಯ ಇಂದು ಮಂಡ್ಯಕ್ಕೆ ಪ್ರಚಾರಕ್ಕಾಗಿ ರಮ್ಯಾ ಭೇಟಿ ನೀಡಲಿದ್ದು ಗೋ ಬ್ಯಾಕ್ ರಮ್ಯಾ ಅಭಿಯಾನ ಶುರುವಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ