ಭಜರಂಗದಳ ನಿಷೇಧಿಸುವ ಭರವಸೆ: ಕಾಂಗ್ರೆಸ್ ಪ್ರಣಾಳಿಕೆಗೆ ಶೋಭಾ ಕರಂದ್ಲಾಜೆ ಕೆಂಡಾಮಂಡಲ

ಕಾಂಗ್ರೆಸ್​ ಭಜರಂಗದಳ, ಪಿಎಫ್‌ಐ ಬ್ಯಾನ್ ಮಾಡುವ ವಿಚಾರವಾಗಿ ಮಾತನಾಡಿದ ಅವರು ‘ ಪಿಎಫ್‌ಐ ಬಾಂಬ್ ಬ್ಲಾಸ್ಟ್ ಮಾಡಿದ್ದು, ಈಗಾಗಲೇ ಅದನ್ನ ಬ್ಯಾನ್ ಮಾಡಲಾಗಿದೆ. ಆದ್ರೆ, ಇವತ್ತು ಕಾಂಗ್ರೆಸ್ ಹೇಳ್ತಿದೆ ಪಿಎಫ್‌ಐ ಬ್ಯಾನ್ ಮಾಡ್ತೀವಿ ಅಂತ. ಆದ್ರೆ, ಅವರ ಉದ್ದೇಶ ಭಜರಂಗದಳ ಬ್ಯಾನ್ ಮಾಡಬೇಕೆಂದು. ‘ನಾನೂ ಭಜರಂಗದಳದ ಕಾರ್ಯಕರ್ತೆ. ತಾಕತ್ ಇದ್ರೆ ನನ್ನನ್ನೂ ಅರೆಸ್ಟ್ ಮಾಡಿ ಎಂದು ಕಾಂಗ್ರೆಸ್​ಗೆ ಶೋಭಾ ನೇರ ಸವಾಲು ಹಾಕಿದ್ದಾರೆ.

ಭಜರಂಗದಳ ನಿಷೇಧಿಸುವ ಭರವಸೆ: ಕಾಂಗ್ರೆಸ್ ಪ್ರಣಾಳಿಕೆಗೆ ಶೋಭಾ ಕರಂದ್ಲಾಜೆ ಕೆಂಡಾಮಂಡಲ
ಶೋಭಾ ಕರಂದ್ಲಾಜೆ
Follow us
ಕಿರಣ್ ಹನುಮಂತ್​ ಮಾದಾರ್
|

Updated on:May 02, 2023 | 12:46 PM

ಬೆಂಗಳೂರು: ವಿಧಾನಸಭೆ ಚುನಾವಣೆಯ(Karnataka Assembly Election)ಲ್ಲಿ ಗೆಲುವು ಸಾಧಿಸಲು ಉಭಯ ಪಕ್ಷಗಳು ಅಬ್ಬರದ ಪ್ರಚಾರದ ಜೊತೆಗೆ ವಿವಿಧ ಆಶ್ವಾಸನೆಗಳನ್ನ ಕೊಡುತ್ತಿದೆ. ಅದರಂತೆ ಇಂದು(ಮೇ.2) ಕಾಂಗ್ರೆಸ್​ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಕುರಿತು ಮಾತನಾಡಿದ ಶೋಭಾ ಕರಂದ್ಲಾಜೆ(Shobha Karandlaje) ‘ವಿನಾಶಕಾಲೆ, ವಿಪರೀತ ಬುದ್ದಿ ಎಂಬ ಗಾದೆ ಮಾತಿದೆ. ವಿನಾಶ ಬಂದಾಗ ಬುದ್ದಿ ಹೊಳೆಯಲ್ಲ, ವಿಪರೀತವಾಗಿ ಯೋಚನೆ ಮಾಡ್ತಾರೆ. ಕಾಂಗ್ರೆಸ್‌ಗೂ ವಿನಾಶ ಕಾಲ ಬಂದಿದೆ ಎಂದರು. ಬೆಂಗಳೂರಿನಲ್ಲಿ ಸುದ್ದಿಗೊಷ್ಠಿ ನಡೆಸಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ(Bajrang Dal), ಪಿಎಫ್‌ಐ(PFI) ಬ್ಯಾನ್ ಮಾಡುವ ವಿಚಾರ ಕುರಿತು ಮಾತನಾಡಿದ ಅವರು ‘ ಪಿಎಫ್‌ಐ ಬಾಂಬ್ ಬ್ಲಾಸ್ಟ್ ಮಾಡಿದ್ದು, ಈಗಾಗಲೇ ಅದನ್ನ ಬ್ಯಾನ್ ಮಾಡಲಾಗಿದೆ. ಆದ್ರೆ, ಇವತ್ತು ಕಾಂಗ್ರೆಸ್ ಹೇಳ್ತಿದೆ ಪಿಎಫ್‌ಐ ಬ್ಯಾನ್ ಮಾಡ್ತೀವಿ ಅಂತ. ಆದ್ರೆ, ಅವರ ಉದ್ದೇಶ ಭಜರಂಗದಳ ಬ್ಯಾನ್ ಮಾಡಬೇಕೆಂದು. ಕಾಂಗ್ರೆಸ್ ಈ ಹಿಂದೆ ಮೂರು ಬಾರಿ ಆರ್‌ಎಸ್ಎಸ್ (RSS) ಅನ್ನ ಬ್ಯಾನ್ ಮಾಡಿತ್ತು. ಆದ್ರೆ, ಇವತ್ತು ಜಗತ್ತಿನ ಅತಿ ದೊಡ್ಡ ಸಂಘಟನೆ ಆರ್‌ಎಸ್ಎಸ್ ಆಗಿದೆ. ಆರ್‌ಎಸ್ಎಸ್ ನಲ್ಲಿ ವಿವಿಧ ವಿಭಾಗ ಕೆಲಸ ಮಾಡ್ತಿದೆ ಎಂದರು.

ತಾಕತ್ ಇದ್ದರೆ, ಭಜರಂಗದಳ ಬ್ಯಾನ್ ಮಾಡಿ ತೋರಿಸಿ

ನಿಮಗೆ ತಾಕತ್ ಇದ್ದರೆ, ಭಜರಂಗದಳ ಬ್ಯಾನ್ ಮಾಡಿ ತೋರಿಸಿ. ಆರ್‌ಎಸ್ಎಸ್ ನ ಯುವಕರ ದಳ ಭಜರಂಗದಳ, ಇದು ದೇಶದ ಪರ ಕೆಲಸ ಮಾಡುತ್ತಿರುವ ಸಂಘಟನೆ, ದೇಶ ವಿರೋಧಿ ಸಂಘಟನೆ ಅಲ್ಲ. ಇವತ್ತು ಭಜರಂಗದಳ ಮತ್ತು ಪಿಎಫ್ಐ ಎರಡನ್ನೂ ಒಂದೇ ತಕ್ಕಡಿಯಲ್ಲಿ ಕಾಂಗ್ರೆಸ್ ಇಟ್ಟಿದೆ. ದೇಶದ್ರೋಹಿ ಪಿಎಫ್ಐ ಜತೆ ದೇಶಪ್ರೇಮಿ ಭಜರಂಗದಳ ಹೋಲಿಸಿರೋದು ಸರಿಯಲ್ಲ. ನಿಮಗೆ ತಾಕತ್ ಇದ್ದರೆ ಭಜರಂಗದಳ ನಿಷೇಧ ಮಾಡಿ ನೋಡಿ. ಆಗ ನಾವೂ ದೇಶಾದ್ಯಂತ ತೋರಿಸ್ತೇವೆ. ಭಜರಂಗದಳದ ನಿಷೇಧವನ್ನು ಹಿಂದೂ ಸಮಾಜ ಒಪ್ಪಲ್ಲ. ಮುಸಲ್ಮಾನರ ಮುಖವಾಡ ಸಿದ್ದರಾಮಯ್ಯ ಎಂದು ನಾನು ಹಿಂದೆ ಹೇಳಿದ್ದೆ. ಅದು ಇವತ್ತು ಸಾಬೀತಾಗಿದೆ. ನಾನೂ ಭಜರಂಗದಳದ ಕಾರ್ಯಕರ್ತೆ. ತಾಕತ್ ಇದ್ರೆ ನನ್ನನ್ನೂ ಅರೆಸ್ಟ್ ಮಾಡಿ ಎಂದು ಕಾಂಗ್ರೆಸ್​ಗೆ ಶೋಭಾ ನೇರ ಸವಾಲು ಹಾಕಿದ್ದಾರೆ.

ಇದನ್ನೂ ಓದಿ:Congress Manifesto 2023: ಈ ಬಾರಿ ಚುನಾವಣೆಯಲ್ಲಿ ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಕಾಂಗ್ರೆಸ್, ಶೇ.50ರಿಂದ ಶೇ.75ಕ್ಕೇರಿಸುವ ಭರವಸೆ

ನೀವು ಅಧಿಕಾರಕ್ಕೆ ಬಂದ್ರೆ, 10 ಸಾವಿರ ಕೋಟಿ ಮುಸ್ಲಿಮರಿಗೆ ಮೀಸಲು, ಗೋ‌ಹತ್ಯೆ ಕಾಯ್ದೆ ವಾಪಸ್, ಮತಾಂತರ ಕಾಯ್ದೆ ವಾಪಸ್ ಎಂದು ಹೇಳಿದ್ದೀರಿ. ತಾಯಿ ಎದೆ ಹಾಲು ಇಲ್ಲದಾಗ ಗೋ ಹಾಲನ್ನ ಕುಡೀತಿವಿ. ಆದ್ರೆ, ನೀವು ಗೋ ಹತ್ಯೆ ಕಾಯ್ದೆಯನ್ನೇ ತೆಗೀತೀವಿ ಅಂತ ಹೇಳ್ತೀರಿ. ಇವತ್ತು ಪಿಎಫ್‌ಐ ಇಸ್ಲಾಂ ಜೊತೆ, ಐಸಿಸ್ ಜೊತೆ ಸಂಬಂಧ ಇಟ್ಟುಕೊಂಡಿದ್ರು. ಶಿವಮೊಗ್ಗದಲ್ಲಿ ಎನ್ಐಎ ದಾಳಿ ನಡೆಸಿದಾಗ ಸಿಕ್ಕಿಬಿದ್ರು. ಅವರೆಲ್ಲರೂ ಎನ್ಐಎ ವಿಚಾರಣೆ ನಡೆಸುತ್ತಿದೆ. ಯಾರೆಲ್ಲಾ ಬಾಂಬ್ ಬ್ಲಾಸ್ಟ್ ನಲ್ಲಿ ಸಿಕ್ಕಿಬಿದ್ರು ಅವರೆಲ್ಲ ನಮ್ಮ ಅಣ್ಣ ತಮ್ಮಂದಿರು ಅಂತ ಡಿಕೆಶಿ ಹೇಳಿದ್ದಾರೆ. ಈ ಎಲ್ಲಾ ಕೃತ್ಯಗಳಿಗೆ ಸಿದ್ದರಾಮಯ್ಯ, ಡಿಕೆಶಿ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದೀಗ ನಾವೆಲ್ಲರೂ ಒಟ್ಟಾಗಿ ಎದುರಿಸಬೇಕು. ನಿಮ್ಮ ಅಜ್ಜಿ, ತಾತನ ಕಾಲದಲ್ಲಿ RSS ಬ್ಯಾನ್ ಮಾಡಿದ್ರಿ, ಈಗ ಏನೂ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾವು ವಿಶ್ವದ, ದೇಶದ ಅತಿ ದೊಡ್ಡ ಸಂಘಟನೆ, ಅತಿ ದೊಡ್ಡ ಪಕ್ಷ, ನಮ್ಮ ನಾಯಕ ವಿಶ್ವದ ದೊಡ್ಡ ನಾಯಕ. ನೀವು ಕೇವಲ ಮುಸ್ಲಿಂ ಓಟಲ್ಲಿ ಗೆದ್ದು ಬನ್ನಿ, ಕಾಂಗ್ರೆಸ್‌ಗೆ ತಾಕತ್ ಇದೆಯಾ.? ಈ ಪ್ರಣಾಳಿಕೆಯಲ್ಲಿ ಕೊಟ್ಟಿರೋದು ಕೇವಲ ಒಂದು ಧರ್ಮದ ಓಲೈಕೆ ಮಾಡಲು, ಅವರನ್ನೇ ಓಲೈಕೆ ಮಾಡಿ, ಹಿಂದೂಗಳ ಓಟ್ ನಿಮಗೆ ಸಿಗೋದಿಲ್ಲ ಎಂದು ಕಿಡಿಕಾಡಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:40 pm, Tue, 2 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ