AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕೆ ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ಗೆ ಬಡಿದ ರಣಹದ್ದು; ವಿಂಡೋ ಗ್ಲಾಸ್​ ಪುಡಿಪುಡಿ, ತಪ್ಪಿದ ಅನಾಹುತ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಚ್​ಎಎಲ್​ನಿಂದ ಮುಳಬಾಗಿಲಿಗೆ ತೆರಳುತ್ತಿದ್ದರು. ಈ ವೇಳೆ ಹೆಲಿಕಾಪ್ಟರ್​ಗೆ ರಣಹದ್ದು ಬಡಿದಿದೆ. ಇದರಿಂದ ಹೆಲಿಕಾಪ್ಟರ್​ ವಿಂಡೋ ಗ್ಲಾಸ್​ ಪುಡಿಪುಡಿಯಾಗಿದ್ದು ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶವಾಗಿದೆ.

ಆಯೇಷಾ ಬಾನು
| Updated By: Digi Tech Desk|

Updated on:May 03, 2023 | 10:25 AM

Share

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ(Karnataka Assembly Elections 2023) ಕೇವಲ 8 ದಿನಗಳು ಮಾತ್ರ ಬಾಕಿ ಇವೆ. ಹೀಗಾಗಿ ರಾಜ್ಯಕೀಯ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಮತ್ತೊಂದೆಡೆ ಇಂದು ಬೆಳಗ್ಗೆ ಕಾಂಗ್ರೆಸ್​ನ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಕೆ ಶಿವಕುಮಾರ್(DK Shivakumar) ಕೋಲಾರದ ಮುಳುಬಾಗಿಲಿಗೆ ಪ್ರಯಾಣಿಸುವ ವೇಳೆ ಅವಘಡವೊಂದು ಸಂಭವಿಸಿದೆ. ಡಿಕೆ ಶಿವಕುಮಾರ್ ಮುಳುಬಾಗಿಲಿಗೆ ತೆರಳಲು ಹೆಚ್​ಎಎಲ್​ ಏರ್​ಪೋರ್ಟ್​​ಗೆ ಬಂದಿದ್ದರು.  ಆದ್ರೆ ಹೆಲಿಕಾಪ್ಟರ್ ಕೊಂಚ ದೂರ ಸಾಗಿ ತುರ್ತು ಭೂಸ್ಪರ್ಶವಾಗಿದೆ. ಏಕೆಂದರೆ ಹಾರಾಟ ವೇಳೆ ಹೆಲಿಕಾಪ್ಟರ್​ ಮುಂಭಾಗದ ವಿಂಡೋ​ ಗಾಜು ಪುಡಿಪುಡಿಯಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ರಚಾರ ಹಿನ್ನೆಲೆ ಮುಳುಬಾಗಿಲಿಗೆ ತೆರಳಬೇಕಿತ್ತು. ಹೀಗಾಗಿ ಬೆಂಗಳೂರಿನ ಹೆಚ್​ಎಎಲ್​ನಿಂದ ಮುಳಬಾಗಿಲಿಗೆ ತೆರಳಲು ಹೆಲಿಕಾಪ್ಟರ್ ಹತ್ತಿದ್ದಾರೆ. ಕೊಂಚ ದೂರ ಸಾಗುತ್ತಿದ್ದಂತೆ ಹೆಲಿಕಾಪ್ಟರ್​ಗೆ ರಣಹದ್ದು ಬಡಿದಿದೆ. ಇದರಿಂದ ಹೆಲಿಕಾಪ್ಟರ್​ ವಿಂಡೋ ಗ್ಲಾಸ್​ ಪುಡಿಪುಡಿಯಾಗಿದ್ದು ತಕ್ಷಣ ಎಚ್ಚೆತ್ತ  ಪೈಲೆಟ್ ತುರ್ತು ಭೂಸ್ಪರ್ಶ ಮಾಡಿದ್ದಾರೆ. ರಣಹದ್ದು ಬಡಿಯುತ್ತಿದ್ದಂತೆ ಡಿಕೆ ಶಿವಕುಮಾರ್ ಕೆಲ ಸಮಯ ಗಾಬರಿಯಾಗಿದ್ದಾರೆ. ಸದ್ಯ ಯಾವುದೇ ಹಾನಿಯಾಗಿಲ್ಲ. ಹೆಲಿಕಾಪ್ಟರ್ ಸಿಬ್ಬಂದಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಟಿವಿ9 ಪ್ರತಿನಿಧಿ, ಕ್ಯಾಮರಾಮೆನ್ ಎಲ್ಲರೂ ಕೂಡ ಸುರಕ್ಷಿತರಾಗಿದ್ದಾರೆ.  ಹೆಚ್​ಎಎಲ್​ ಏರ್​ಪೋರ್ಟ್​​ಗೆ ಹಿಂದಿರುಗಿದ್ದಾರೆ. ಘಟನೆ ನಡೆದ ವೇಳೆ ಟಿವಿ9 ಪ್ರತಿನಿಧಿ ಡಿಕೆ ಶಿವಕುಮಾರ್​ರೊಂದಿಗೆ ಸಂದರ್ಶನದಲ್ಲಿದ್ದರು.

ಇದನ್ನೂ ಓದಿ: Karnataka Assembly Polls: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ತುರ್ತು ಚುಟುಕು ಸಭೆ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ದೊಡ್ಡ ಹದ್ದು ಹೆಲಿಕಾಪ್ಟರ್​ಗೆ ಗ್ಲಾಸ್​ಗೆ ಹೊಡೆಯಿತು. ಹೊಸಕೋಟೆ ಹತ್ತಿರ ತೆರಳುತ್ತಿದ್ದಾಗ ಈ ಘಟನೆ ಆಗಿದೆ. ಘಟನೆಯಿಂದಾಗಿ ಹೆಲಿಕಾಪ್ಟರ್​ ಗ್ಲಾಸ್ ಬ್ಲ್ಯಾಸ್ಟ್ ಆಗಿದೆ. ಪೈಲಟ್​ ನಿಧಾನವಾಗಿಯೇ ಕೆಳಗೆ ಇಳಿಸಿದ್ದಾರೆ. ಸದ್ಯಕ್ಕೆ ಹೆಚ್​​ಎಎಲ್​ಗೆ ವಾಪಸ್​ ಆಗಿದ್ದೇನೆ. ಎಲ್ಲರೂ ಕೂಡ ಸುರಕ್ಷಿತವಾಗಿಯೇ ವಾಪಸಾಗಿದ್ದೇವೆ ಎಂದರು.

ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:07 pm, Tue, 2 May 23

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ