ಪ್ರಧಾನಿ ಮೋದಿ ಸಫಾರಿ ಹಾಕೊಂಡು ಸಫಾರಿ ಮಾಡಲು ಬಂದಿದ್ದಾರೆ, ಇದಕ್ಕೆ ಜನ ವೋಟ್​ ಹಾಕ್ತಾರಾ?: ಹೆಚ್​ಡಿ ಕುಮಾರಸ್ವಾಮಿ ವ್ಯಂಗ್ಯ

| Updated By: ವಿವೇಕ ಬಿರಾದಾರ

Updated on: Apr 09, 2023 | 12:05 PM

ಪ್ರಧಾನಿ ಮೋದಿ ಇವತ್ತು ಸಫಾರಿ ಹಾಕೊಂಡು, ಸಫಾರಿ ಮಾಡಲು ಬಂದಿದ್ದಾರೆ. ವನ್ಯಜೀವಿ ನೋಡಲು ಬಂದ ತಕ್ಷಣ ಜನ ಇವರಿಗೆ ವೋಟು ಒತ್ತಿ ಬಿಡುತ್ತಾರಾ? ಪ್ರವಾಹ ಬಂದಾಗ, ಕೋವಿಡ್ ಅನಾಹುತದಿಂದ ಜನ ಬೀದಿಗೆ ಬಂದಾಗ ಬರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಸಫಾರಿ ಹಾಕೊಂಡು ಸಫಾರಿ ಮಾಡಲು ಬಂದಿದ್ದಾರೆ, ಇದಕ್ಕೆ ಜನ ವೋಟ್​ ಹಾಕ್ತಾರಾ?: ಹೆಚ್​ಡಿ ಕುಮಾರಸ್ವಾಮಿ ವ್ಯಂಗ್ಯ
ಹೆಚ್​​ಡಿ ಕುಮಾರಸ್ವಾಮಿ
Follow us on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು (ಏ.9) ಚಾಮರಾಜನಗರ (Chamarajanagar) ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ (Bandipur National Park) ಸಫಾರಿ ನಡೆಸಿದ್ದು, ಈ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಪ್ರಧಾನಿ ಮೋದಿ ಇವತ್ತು ಸಫಾರಿ (PM Modi in Safari) ಹಾಕೊಂಡು, ಸಫಾರಿ ಮಾಡಲು ಬಂದಿದ್ದಾರೆ. ವನ್ಯಜೀವಿ ನೋಡಲು ಬಂದ ತಕ್ಷಣ ಜನ ಇವರಿಗೆ ವೋಟು ಒತ್ತಿ ಬಿಡುತ್ತಾರಾ? ಪ್ರವಾಹ ಬಂದಾಗ, ಕೋವಿಡ್ ಅನಾಹುತದಿಂದ ಜನ ಬೀದಿಗೆ ಬಂದಾಗ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೋಂದಿಗೆ ಮಾತನಾಡಿದ ಅವರು ವನ್ಯಜೀವಿಗಳನ್ನ ರಕ್ಷಣೆ ಮಾಡಬೇಕು ನಿಜ, ಆದರೆ ಮಾನವರ ರಕ್ಷಣೆಯನ್ನೂ ಮಾಡಬೇಕಲ್ವ? ವನ್ಯಜೀವಿಗಳಿಂದ ಎಷ್ಟು ದಾಳಿಯಾಗಿದೆ, ಎಷ್ಟು ಜೀವ ಹಾನಿಯಾಗಿದೆ. ಯಾವುದಾದರೂ ಒಂದು ಕುಟುಂಬಕ್ಕೆ ಭೇಟಿ ಕೊಟ್ಟಿದ್ದಾರಾ? ವನ್ಯಜೀವಿ ದಾಳಿಗೆ ಒಳಗಾದ ಕುಟುಂಬ ಪರಿಸ್ಥಿತಿ ಏನಾಗಿದೆ ಎಂದು ನೋಡಿದ್ದಾರಾ? ಕೂಲಿಂಗ್ ಗ್ಲಾಸ್, ಸೂಟು ಬೂಟು ಹಾಕೊಂಡು ಬಂದ್ರೆ ಆಗುತ್ತಾ? ಅರಣ್ಯ ಭಾಗದಲ್ಲಿ ಪೌಷ್ಟಿಕಾಂಶ, ಆಹಾರದ ಕೊರತೆ ಇದೆ ಅಂತ ವರದಿ ಬಂದಿದೆ. ಅದರ ಬಗ್ಗೆ ಇವರಿಗೆ ಗಮನ ಹರಿಸಲು ಆಗಲ್ಲ. ನಾಡಿನ ಜನತೆ ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದರು.

ಇದನ್ನೂ ಓದಿ: ಕಾಂಗ್ರೆಸ್​ ಟಿಕೆಟ್ ವಂಚಿತ ಎಚ್​ಆರ್ ಶ್ರೀನಾಥ್ ಮನೆಗೆ ಭೇಟಿ ನೀಡಿದ ಜನಾರ್ಧನ ರೆಡ್ಡಿ

ಅವರು ನಮ್ಮ ಹಲವು ಯೋಜನೆಗಳ ಹೆಸರನ್ನೇ ಬದಲಾಯಿಸಿದ್ದಾರೆ

ಚುನಾವಣೆ ಇದೆ ಅಂತಾ ಪ್ರಧಾನಿ ಮೋದಿ ರಾಜ್ಯಕ್ಕೆ ಬರುತ್ತಿದ್ದಾರೆ, ಬರಲಿ. ಪದೇ ಪದೇ ನೆಪ ಮಾಡಿಕೊಂಡು ಪ್ರಧಾನಿ ಮೋದಿ ಬರುತ್ತಿದ್ದಾರೆ. ಪ್ರಜಾಪ್ರಭುತ್ವ ನಮ್ಮಿಂದನೇ ಬಂತು ಅಂತಾ ಹೇಳುತ್ತಾರೆ. ಕಾಂಗ್ರೆಸ್‌ ಕೊಡುಗೆಗಳನ್ನು ತೆಗೆದುಹಾಕುವುದೇ ಅವರ ಉದ್ದೇಶ. ನಮ್ಮ ಸರ್ಕಾರದ ಯೋಜನೆಗಳ ಹೆಸರನ್ನೇ ಬದಲಾಯಿಸಿದ್ದಾರೆ. ಕಾಡಿಗೆ ಹುಲಿಯನ್ನಾದರೂ ಬಿಡಲಿ, ಸಿಂಹವಾದರೂ ಬಿಡಲಿ. 60 ವರ್ಷದಲ್ಲಿ ಕಾಂಗ್ರೆಸ್‌ ಕೊಡುಗೆ ತೆಗೆದುಹಾಕೋದು ಅವರ ಉದ್ದೇಶ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಕಿಡಿಕಾರಿದರು.

ಕಾಂಗ್ರೆಸ್ ಮೂರನೇ ಪಟ್ಟಿ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್​​ ಬಿಜೆಪಿಯವರ ಪಟ್ಟಿ ಮೊದಲು ರಿಲೀಸ್ ಆಗಲಿ. ಅವರನ್ನು ಕೇಳಿ ಯಾವಾಗ ಪಟ್ಟಿ ಪ್ರಕಟ ಅಂತ? ಅವರ ಪಟ್ಟಿ ಬಂದ ಮೇಲೆ ನೋಡೋಣ ಎಂದರು.

ಬೆಂಗಳೂರು: ಕಾಡಿಗೆ ಸಫಾರಿಗೆ ಹೋದಾಗ ಸಫಾರಿ ಡ್ರೆಸ್​ನಲ್ಲಿ ಇರಬೇಕು. ನಾಡಿಗೆ ಬಂದಾಗ ನಾಡಿನ ಡ್ರೆಸ್ ಹಾಕಬೇಕು. ಅದರೆ ಕುಮಾರಸ್ವಾಮಿ ಅವರಿಗೆ ಅದು ಎರಡು ಹಾಕೋಕೆ ಬರೋದಿಲ್ವಲ್ಲ ಏನ್​ ಮಾಡೋದು ಎಂದು ಸಚಿವ ಅಶ್ವತ್​ ನಾರಾಯಣ ವ್ಯಂಗ್ಯವಾಡಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮತಾನಡಿದ ಅವರು ಯಾವ ಯಾವ ಜಾಗಕ್ಕೆ ಯಾವ ಯಾವ ವೇಷಗಳನ್ನು ಹಾಕಬೇಕೋ ಆ ಸ್ಥಳಕ್ಕೆ ಸೂಕ್ತವಾಗಿ ಹಾಕುತ್ತಾರೆ. ಇಡೀ ವಿಶ್ವವನ್ನೇ ನಾವು ಪ್ರತಿನಿಧಿಸುತ್ತಿದ್ದೇವೆ. 140 ಕೋಟಿ ಜನಕ್ಕೆ ನಾಯಕ ಅವರು. ಅವರು ಒಬ್ಬರು ರೋಲ್ ಮಾಡೆಲ್. ಕೋವಿಡ್ ಸಮಯದಲ್ಲಿ ಕುಮಾರಸ್ವಾಮಿ ಎಲ್ಲಿದ್ರು? ಕಾಂಗ್ರೆಸ್​ನವರು ವ್ಯಾಕ್ಸಿನ್​ ತಗೆದುಕೊಳ್ಳಬೇಡಿ ಎಂದು ಹೇಳಿದ್ದರು. ಇಡೀ ವಿಶ್ವದಲ್ಲೇ ಭಾರತ ಮಾದರಿಯಗಿ ಕೋವಿಡ್ ನಿರ್ವಹಣೆ ಮಾಡಿದೆ. ಸುಮ್ನೆ ಪಾಪ ಏನೋ ಹೇಳಬೇಕು ಅಂತ ಹೇಳ್ತಾರೆ. ಜನ ಬುದ್ದಿವಂತರಿದ್ದಾರೆ ಗೊತ್ತಿರಲಿ ಎಂದು ವಾಗ್ದಾಳಿ ಮಾಡಿದರು.

ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿದರು.

Published On - 11:33 am, Sun, 9 April 23