AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Koppal: ಕಾಂಗ್ರೆಸ್​ ಟಿಕೆಟ್ ವಂಚಿತ ಎಚ್​ಆರ್ ಶ್ರೀನಾಥ್ ಮನೆಗೆ ಭೇಟಿ ನೀಡಿದ ಜನಾರ್ಧನ ರೆಡ್ಡಿ

ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ನಿಂದ ವಂಚಿತರಾಗಿರುವ ಎಚ್​​ಆರ್ ಶ್ರೀನಾಥ್​ಗೆ ಜನಾರ್ಧನ ರೆಡ್ಡಿ ಗಾಳ ಹಾಕಿದ್ದಾರೆ. ಎಚ್​ಆರ್​ ಶ್ರೀನಾಥ್​ಗೆ ಟಿಕೆಟ್ ಕೈತಪ್ಪುತ್ತಿದ್ದಂತೆಯೇ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

Koppal: ಕಾಂಗ್ರೆಸ್​ ಟಿಕೆಟ್ ವಂಚಿತ ಎಚ್​ಆರ್ ಶ್ರೀನಾಥ್ ಮನೆಗೆ ಭೇಟಿ ನೀಡಿದ ಜನಾರ್ಧನ ರೆಡ್ಡಿ
ಜನಾರ್ಧನ ರೆಡ್ಡಿ, ಎಚ್​ಆರ್ ಶ್ರೀನಾಥ್
ನಯನಾ ರಾಜೀವ್
|

Updated on: Apr 09, 2023 | 9:41 AM

Share

ಕೊಪ್ಪಳ: ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ನಿಂದ ವಂಚಿತರಾಗಿರುವ ಎಚ್​​ಆರ್ ಶ್ರೀನಾಥ್​ಗೆ ಜನಾರ್ಧನ ರೆಡ್ಡಿ ಗಾಳ ಹಾಕಿದ್ದಾರೆ. ಎಚ್​ಆರ್​ ಶ್ರೀನಾಥ್​ಗೆ ಟಿಕೆಟ್ ಕೈತಪ್ಪುತ್ತಿದ್ದಂತೆಯೇ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಬಿಜೆಪಿ ಶಾಸಕರಾದ ಪರಣ್ಣ ಮುನವಳ್ಳಿ ಹಾಗೂ ಬಸವರಾಜ ದಢೇಸೂಗೂರು ಅವರು ಮಧ್ಯಾಹ್ನ ಶ್ರೀನಾಥ್ ಅವರನ್ನು ಭೇಟಿಯಾದ ಬೆನ್ನಲ್ಲೇ ಜನಾರ್ಧನ ರೆಡ್ಡಿ ಕೂಡ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶ್ರೀನಾಥ್ ಟಿಕೆಟ್ ಆಕಾಂಕ್ಷಿಯಾಗಿದ್ದಾಗ ಬೇರೆ ಯಾವ ಪಕ್ಷಗಳ ಯಾವ ನಾಯಕರೂ ಅವರನ್ನು ಭೇಟಿಯಾಗಿರಲಿಲ್ಲ, ಇದೀಗ ಟಿಕೆಟ್ ಕೈತಪ್ಪುತ್ತಿದ್ದಂತೆ ಬೇರೆ ಪಕ್ಷಗಳಿಂದ ಓಲೈಕೆ ಶುರುವಾಗಿದೆ. ರಾತ್ರೋರಾತ್ರಿ ಜನಾರ್ಧನ ರೆಡ್ಡಿ ಶ್ರೀನಾಥ್ ಮನೆಗೆ ಭೇಟಿ ನೀಡಿದ್ದಾರೆ. ಗಂಗಾವತಿ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಇಕ್ಬಾಲ್ ಅನ್ಸಾರಿಗೆ ಟಿಕೆಟ್ ಘೋಷಣೆ ಹಿನ್ನೆಲೆ ಶ್ರೀನಾಥ್​ಗೆ ಟಿಕೆಟ್ ತಪ್ಪಿದೆ.

ಮತ್ತಷ್ಟು ಓದಿ: ಕಾರ್ಯಕರ್ತನೇ ಹಾಸನದ ಜೆಡಿಎಸ್ ಅಭ್ಯರ್ಥಿ, ಬ್ಲ್ಯಾಕ್​ಮೇಲ್​​ ನನ್ನ ಹತ್ತಿರ ನಡೆಯಲ್ಲ: ಭವಾನಿ ರೇವಣ್ಣಗೆ ಕುಮಾರಸ್ವಾಮಿ ಟಾಂಗ್

ಎಚ್​ ಆರ್ ಶ್ರೀನಾಥ್ ಅವರು ಕಾಂಗ್ರೆಸ್​ ಮೇಲೆ ಅಸಮಾಧಾನಗೊಂಡಿದ್ದು, ಈ ಸಂದರ್ಭದ ಲಾಭ ಪಡೆಯಲು ಬಿಜೆಪಿ ಮುಂದಾಗಿದೆ ಹಿಂದಿನ ಇಂದಿರಾಗಾಂಧಿ ಕಾಂಗ್ರೆಸ್ ಈಗ ಇಲ್ಲ, ಇದು ಸಿದ್ದರಾಮಯ್ಯ ಕಾಂಗ್ರೆಸ್ ಎಂದು ಶ್ರೀನಾಥ್ ಹೇಳಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಲ್ಲ: ಶ್ರೀನಾಥ್ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಶ್ರೀನಾಥ್ ಜಿಲ್ಲೆಯಲ್ಲಿ ಕಾಂಗ್ರೆಸ್​ನ ಯಾವ ಅಭ್ಯರ್ಥಿ ಪರವೂ ಪ್ರಚಾರ ಮಾಡುವುದಿಲ್ಲ, ಹೊರ ಜಿಲ್ಲೆಗಳಲ್ಲಿ ಅಲ್ಲಿನ ಅಭ್ಯರ್ಥಿಗಳ ಪರವಾಗಿ ಮತ ಕೇಳುತ್ತೇನೆ ಎಂದಿದ್ದಾರೆ. ಗಂಗಾವತಿಯಲ್ಲಿ ಟಿಕೆಟ್​ಗಾಗಿ ಇಕ್ಬಾಲ್​ ಅನ್ಸಾರಿ, ಮಲ್ಲಿಕಾರ್ಜುನ ನಾಗಪ್ಪ ಹಾಗೂ ಎಚ್​ಆರ್ ಶ್ರೀನಾಥ್ ನಡುವೆ ಸ್ಪರ್ಧೆ ಇತ್ತು. ಪಕ್ಷ ಅನ್ಸಾರಿ ಅವರಿಗೆ ಟಿಕೆಟ್ ನೀಡಿದೆ.

ಅನ್ಸಾರಿಗೆ ಟಿಕೆಟ್ ನೀಡಿದರೆ ಪಕ್ಷ ಸೋಲುತ್ತದೆ ಎಂದು ಆಂತರಿಕ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಇದನ್ನು ವರಿಷ್ಠರ ಗಮನಕ್ಕೆ ತಂದಿದ್ದೇನೆ, ಅನ್ಸಾರಿಗೆ ಟಿಕೆಟ್ ನೀಡಿದ್ದರಿಂದ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದು ಹೇಳಿದ್ದಾರೆ.

ಇದರ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿರುವ ಶ್ರೀನಾಥ್ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ, ಟಿಕೆಟ್ ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರೇ ಕೆಲಸ ಮಾಡಿದ್ದಾರೆ.

ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು