ಅಪ್ಪ-ಮಕ್ಕಳು, ಅಣ್ತಮ್ಮಂದಿರಿಗೆ ಟಿಕೆಟ್ ಸಿಗಲ್ಲ: ಗುಜರಾತ್​ ಮಾದರಿಯಲ್ಲಿ ಟಿಕೆಟ್ ಹಂಚಿಕೆ ಸುಳಿವು ಕೊಟ್ಟ ಯತ್ನಾಳ್

| Updated By: ರಮೇಶ್ ಬಿ. ಜವಳಗೇರಾ

Updated on: Dec 12, 2022 | 5:20 PM

2023ರಲ್ಲಿ ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಗುಜರಾತ್ ಮಾದರಿಯಲ್ಲೇ ಬಿಜೆಪಿ ಟಿಕೆಟ್ ಹಂಚಿಕೆ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ. ಇನ್ನು ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಿಷ್ಟು.

ಅಪ್ಪ-ಮಕ್ಕಳು, ಅಣ್ತಮ್ಮಂದಿರಿಗೆ ಟಿಕೆಟ್ ಸಿಗಲ್ಲ: ಗುಜರಾತ್​ ಮಾದರಿಯಲ್ಲಿ ಟಿಕೆಟ್ ಹಂಚಿಕೆ ಸುಳಿವು ಕೊಟ್ಟ ಯತ್ನಾಳ್
ಬಸನಗೌಡ ಪಾಟೀಲ ಯತ್ನಾಳ್, ಶಾಸಕರು
Follow us on

ಬೆಳಗಾವಿ: ಗುಜರಾತ್​ನಲ್ಲಿ (Gujarat) ಕಳೆದ ಬಾರಿ ಗೆದ್ದ ಕ್ಷೇತ್ರಗಳಲ್ಲಿ ಈ ಬಾರಿ ಹೊಸ ಮುಖಗಳಿಗೆ ಮಣೆ ಹಾಕಲಾಗಿತ್ತು. ಹೀಗಾಗಿ ಇದೇ ತಂತ್ರವನ್ನೂ ಕರ್ನಾಟಕದಲ್ಲಿ (Karnataka) ಅನುಸರಿಸಲು ಬಿಜೆಪಿ(BJP) ಮುಂದಾಗಿದೆಯಂತೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಗೆದ್ದಿರೋ ಕ್ಷೇತ್ರಗಳಲ್ಲಿ ಹೊಸಮುಖಗಳಿಗೆ ಮಣೆ ಹಾಕಲು ಪ್ಲ್ಯಾನ್ ರೂಪಿಸಲಾಗಿದ್ದು, ಹಲವರಿಗೆ ಟಿಕೆಟ್ ಕೈತಪ್ಪುವ ಭೀತಿ ಶುರುವಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  (Basangouda Patil Yatnal) ಪ್ರತಿಕ್ರಿಯಿಸಿದ್ದು, ಅಪ್ಪ-ಮಕ್ಕಳು, ಅಣ್ಣತಮ್ಮಂದಿರಿಗೆ ಟಿಕೆಟ್ ಸಿಗಲ್ಲ ಎಂದಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲೂ ಗುಜರಾತ್ ಮಾದರಿ ಎಲೆಕ್ಷನ್: ಏನಿದು ಗುಜರಾತ್ ಮಾಡೆಲ್? ಹೇಗಿರುತ್ತೆ ಕಾರ್ಯ ತಂತ್ರ? ಇಲ್ಲಿದೆ ಮಾಹಿತಿ

ಬೆಳಗಾವಿಯಲ್ಲಿ ಇಂದು(ಡಿಸೆಂಬರ್ 12) ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಈ ಬಾರಿ ಕರ್ನಾಟಕದಲ್ಲಿ ಬಹಳಷ್ಟು ಬದಲಾವಣೆ ಮಾಡುತ್ತಾರೆ. ಯಾರ ಮೇಲೆ ಆರೋಪಗಳಿವೆ ಅಂತಹವರಿಗೆ ಟಿಕೆಟ್ ನೀಡಲ್ಲ. ಒಂದೇ ಕುಟುಂಬದಲ್ಲಿ ಎರಡ್ಮೂರು ಟಿಕೆಟ್​​ಗಳು ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಾರಿ ಗುಜರಾತ್ ಮಾದರಿಯಲ್ಲೇ ಮಾಡಲಿದ್ದು, ಬಹಳಷ್ಟು ಬದಲಾವಣೆ ಮಾಡ್ತಾರೆ. ಒಂದೇ ಕುಟುಂಬದಲ್ಲಿ ಜಾಕೆಟ್ ಹೊಲಿಸಿಕೊಂಡು ಕುಳಿತಿದ್ದಾರೆ. ಅಪ್ಪ-ಮಕ್ಕಳು, ಅಣ್ಣ-ತಮ್ಮರಿಗೆ ಬಿಜೆಪಿ ಟಿಕೆಟ್ ಸಿಗುವುದಿಲ್ಲ. ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಬೀಳುತ್ತೆ. ಒಂದು ಕುಟುಂಬಕ್ಕೆ ಒಂದು ಟಿಕೆಟ್ ಸಿಗುತ್ತದೆ ಎಂದು ಹೇಳಿದರು.

ರಾಜ್ಯ ಬಿಜೆಪಿಗೆ ಸಮೀಕ್ಷೆಯಲ್ಲಿ ಹಿನ್ನಡೆ ಆಗ್ತಿದ್ಯಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಗುಜರಾತ್, ಯುಪಿಯಲ್ಲೂ ಹಾಗೆ ಹೇಳಿದ್ರೂ ಬಿಜೆಪಿ ಬಂತು. ಕರ್ನಾಟಕದಲ್ಲಿ ನರೇಂದ್ರ ಮೋದಿಯವರು ಪ್ರವಾಸ ಮಾಡುತ್ತಾರೆ. ಯಡಿಯೂರಪ್ಪರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರನ್ನಾಗಿ ಮಾಡಿದ್ದಾರೆ. ಸಿಎಂ ಬೊಮ್ಮಾಯಿ & ಬಿಎಸ್​ವೈ ಕ್ಷೇತ್ರ ಸಂಚಾರ ಮಾಡಬೇಕು ಎಂದು ಇದೇ ಮೊದಲ ಬಾರಿಗೆ ಬಿಎಸ್​ವೈ ವಿಚಾರದಲ್ಲಿ ಸಾಫ್ಟ್​ ಕಾರ್ನರ್ ತೋರಿಸಿದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ