ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಜಗದೀಶ್​ ಶೆಟ್ಟರ್​ರವರ 27 ಆಪ್ತರನ್ನು ಉಚ್ಚಾಟನೆ ಮಾಡಿದ ಬಿಜೆಪಿ

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಮಾಜಿ ಸಿಎಂ, ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್​ ಶೆಟ್ಟರ್​ ಅವರ 27 ಆಪ್ತರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ.

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಜಗದೀಶ್​ ಶೆಟ್ಟರ್​ರವರ 27 ಆಪ್ತರನ್ನು ಉಚ್ಚಾಟನೆ ಮಾಡಿದ ಬಿಜೆಪಿ
ಜಗದೀಶ್​ ಶೆಟ್ಟರ್
Follow us
|

Updated on:Apr 28, 2023 | 8:21 PM

ಹುಬ್ಬಳ್ಳಿ: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಮಾಜಿ ಸಿಎಂ, ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್​ ಶೆಟ್ಟರ್ (Jagadish Shettar) ಅವರ 27 ಆಪ್ತರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ. ಹು-ಧಾ ಸೆಂಟ್ರಲ್ ಬಿಜೆಪಿ ಬ್ಲಾಕ್ ಅಧ್ಯಕ್ಷ ಸಂತೋಷ್​​ ಆದೇಶ ಹೊರಡಿಸಿದ್ದಾರೆ. ಪಕ್ಷದ ಅಭ್ಯರ್ಥಿ ಘೋಷಣೆಯಾಗಿದ್ದರೂ ಶೆಟ್ಟರ್​ ಪರ ನಿಂತಿದ್ದ ಹಿನ್ನೆಲೆ ಮಲ್ಲಿಕಾರ್ಜುನ ಸಾಹುಕಾರ, ನಾಗೇಶ್ ಕಲಬುರಗಿ, ರಾಧಾ ಪಟ್ಟಣಶೆಟ್ಟಿ, ಮಹೇಶ್ ಪತ್ತಾರ್, ವಿರೂಪಾಕ್ಷಿ ರಾಯನಗೌಡ ಸೇರಿ 27 ಜನರನ್ನು ಉಚ್ಚಾಟನೆ ಮಾಡಲಾಗಿದೆ. ಹು-ಧಾ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಹೇಶ್​ರನ್ನು ಘೋಷಣೆ ಮಾಡಲಾಗಿದೆ.

ಜಗದೀಶ್ ಶೆಟ್ಟರ್ ಸೋಲಿಸಲು ಬಿಜೆಪಿ ಪಣ

ಕಾಂಗ್ರೆಸ್ ಸೇರ್ಪಡೆಯಾಗಿರುವ ಜಗದೀಶ್​ ಶೆಟ್ಟರ್​ ಅವರನ್ನು ಈ ಬಾರಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್​ ಕ್ಷೇತ್ರದಲ್ಲಿ ಸೋಲಿಸಲು ಬಿಜೆಪಿ ನಾಯಕರು ನಾನಾ ತಂತ್ರಗಳನ್ನು ರೂಪಿಸುತ್ತಿದ್ದಾರೆ.  ಜಗದೀಶ್ ಶೆಟ್ಟರ್​ ಕಾಂಗ್ರೆಸ್ ಸೇರ್ಪಡೆಯಾದ ಕೇವಲ ಹತ್ತೇ ದಿನದಲ್ಲಿ ಹುಬ್ಬಳ್ಳಿ ಘಟಾನುಘಟಿ ನಾಯಕರುಗಳು ಭೇಟಿ ನೀಡಿ ಸರಣಿ ಸಭೆಗಳನ್ನು ಮಾಡಿದ್ದು, ಶೆಟ್ಟರ್​ ಸೋಲಿಸಲು ಬೇಕಾದ ಎಲ್ಲಾ ರಣತಂತ್ರಗಳನ್ನು ಹೆಣೆದಿದ್ದಾರೆ.

ಇದನ್ನೂ ಓದಿ: ತೇಜಸ್ವಿನಿ ಅನಂತಕುಮಾರ್​​ಗೆ ಟಿಕೆಟ್​ ಕೈತಪ್ಪಲು ಬಿಎಲ್​ ಸಂತೋಷ್ ಕಾರಣ: ಜಗದೀಶ್ ಶೆಟ್ಟರ್

ಹುಬ್ಬಳ್ಳಿ-ಧಾರವಾಡ ಪಾಲಿಕೆ ಸದಸ್ಯರನ್ನು ಹಾಗೂ ಪಕ್ಷದ ಪದಾಧಿಕಾರಿಗಳನ್ನು ಜಗದೀಶ್ ಶೆಟ್ಟರ್​ ಹಿಂದೆ ಹೋಗದಂತೆ ಹಿಡಿದಿಟ್ಟುಕೊಂಡಿದ್ದಾರೆ. ಅಲ್ಲದೇ ಸ್ಥಳೀಯ ಕಾಂಗ್ರೆಸ್​​ ಮುಖಂಡರಿಗೆ ಗಾಳ ಹಾಕುತ್ತಿದ್ದು,  ಅಲ್ಲದೇ  ಮೊದಲ ಹಂತವಾಗಿ ಹುಬ್ಬಳ್ಳಿ-ಧಾರವಾಡ ಪಾಲಿಕೆ ಮಾಜಿ ಮೇಯರ್​ ಪ್ರಕಾಶ್ ಕ್ಯಾರಕಟ್ಟಿ ಅವರನ್ನು ಬಿಜೆಪಿಗೆ ಸೆಳೆಯುವ ಮೂಲಕ ಜಗದೀಶ್ ಶೆಟ್ಟರ್​ಗೆ ಶಾಕ್ ಕೊಟ್ಟಿದ್ದಾರೆ.

ನನಾಗಾದ ಅನ್ಯಾಯ ತೇಜಸ್ವಿನಿ ಅನಂತ್ ಕುಮಾರ್​ ಅವರಿಗೂ ಆಗಿದೆ: ಜಗದೀಶ್ ಶೆಟ್ಟರ್

ನನಾಗಾದ ಅನ್ಯಾಯ ತೇಜಸ್ವಿನಿ ಅನಂತ್ ಕುಮಾರ್​ ಅವರಿಗೂ ಆಗಿದೆ. ಅವರಿಗೆ ಟಿಕೆಟ್ ತಪ್ಪಲು ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್​​ ಕಾರಣ ಎಂದು ಮಾಜಿ ಮುಖ್ಯಮಂತ್ರಿ, ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್​ ಇತ್ತೀಚೆಗೆ ಹೇಳಿದ್ದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ನಾಯಕತ್ವ ಇಲ್ಲದೆ ಸರಕಾರ ಮಾಡಬೇಕು ಅನ್ನೋದನ್ನ ತೋರಸಬೇಕಿತ್ತು. ಆ ಹಿನ್ನಲೆಯಲ್ಲಿ ಇದೆಲ್ಲ ನಡೆಯುತ್ತಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ನಾನು ಲಿಂಗಾಯತ ಅನ್ನೋ ಕಾರಣಕ್ಕೆ ಟಿಕೆಟ್ ತಪ್ಪಿಸಿದರು ಎಂದಿದ್ದರು.

ಇದನ್ನೂ ಓದಿ: ಪ್ರಚಾರ ವೇಳೆ ಗುಂಪಿನಲ್ಲಿದ್ದ ದುಷ್ಕರ್ಮಿಯಿಂದ ಡಾ ಜಿ ಪರಮೇಶ್ವರ್​ ಮೇಲೆ ಕಲ್ಲೆಸೆತ: ಆಸ್ಪತ್ರೆಗೆ ದಾಖಲು

ಕೆಲವರು ನೇರವಾಗಿ ಯುದ್ದಕ್ಕೆ ಬರಲ್ಲ: ಬಿಎಲ್ ಸಂತೋಷ್ ವಿರುದ್ಧ ಶೆಟ್ಟರ್ ಪರೋಕ್ಷ ವಾಗ್ದಾಳಿ

ಕೆಲವರು ನೇರವಾಗಿ ಯುದ್ದಕ್ಕೆ ಬರಲ್ಲ ಎಂದು ಹೇಳುವ ಮೂಲಕ ಬಿಎಲ್ ಸಂತೋಷ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ನಾನು ಇಷ್ಟು ನೇರವಾಗಿ ಅರೋಪ‌ ಮಾಡಿದರೂ ಅವರು ಮಾತಾಡುತ್ತಿಲ್ಲ, ಅವರಿಗೆ ಧೈರ್ಯ ಇಲ್ಲ ಎಂದರು. ಅಲ್ಲದೆ, ಬಿಎಸ್ ಯಡಿಯೂರಪ್ಪ ಬೇರೆಯವರ ಪ್ರಚೋದನೆ ಮೇಲೆ ನಡೆಯಬಾರದು ಎಂದು ಹೇಳಿದ್ದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:21 pm, Fri, 28 April 23