ಪುಲಿಕೇಶಿನಗರದಲ್ಲಿ ಬಿರುಸಿನ ಪ್ರಚಾರ: ಮುಸ್ಲಿಂ ಮತ ಸೆಳೆಯಲು ಮೂರು ಪಕ್ಷಗಳಿಂದ ಪೈಪೋಟಿ
ಪುಲಕೇಶಿನಗರ ಸದ್ಯ ರಾಜಕೀಯ ಜಿದ್ದಾಜಿದ್ದಿ ಕ್ಷೇತ್ರವಾಗಿದ್ದು, ಮುಸ್ಲಿಂ ಮತ ಸೆಳೆಯಲು ಮೂರು ಪಕ್ಷಗಳು ಪೈಪೋಟಿಗೆ ಇಳಿದಿವೆ. ಟ್ಯಾನ್ರಿ ರೋಡ್ ಮತ್ತು ಟ್ಯಾಗ್ ಮೊಹಲ್ಲಾ ಮಸೀದಿಯ ಬಳಿ ಶುಕ್ರವಾರದ ನಮಾಜ್ ವೇಳೆ ಮತದಾರರ ವೇಳೆ ಮುಗಿಬಿದಿದ್ದಾರೆ.
ಬೆಂಗಳೂರು: ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುಸ್ಲಿಂ ಮತದಾರರ ಓಲೈಕೆಗೆ ಪಕ್ಷಗಳು ಯತ್ನಿಸುತ್ತಿದ್ದು, ಬೆಂಗಳೂರಿನ ಪುಲಿಕೇಶಿನಗರದಲ್ಲಿ (Pulikeshinagar) ಬಿರುಸಿನ ಪ್ರಚಾರ ಕಂಡುಬಂದಿದೆ. ಪುಲಕೇಶಿನಗರ ಸದ್ಯ ರಾಜಕೀಯ ಜಿದ್ದಾಜಿದ್ದಿ ಕ್ಷೇತ್ರವಾಗಿದ್ದು, ಮುಸ್ಲಿಂ ಮತ ಸೆಳೆಯಲು ಮೂರು ಪಕ್ಷಗಳು ಪೈಪೋಟಿಗೆ ಇಳಿದಿವೆ. ಟ್ಯಾನ್ರಿ ರೋಡ್ ಮತ್ತು ಟ್ಯಾಗ್ ಮೊಹಲ್ಲಾ ಮಸೀದಿಯ ಬಳಿ ಶುಕ್ರವಾರದ ನಮಾಜ್ ವೇಳೆ ಮತದಾರರ ವೇಳೆ ಮುಗಿಬಿದ್ದು, ಅಭ್ಯರ್ಥಿಗಳು ಮತಯಾಚನೆ ಮಾಡಿದ್ದಾರೆ. ಮತಯಾಚನೆ ವೇಳೆ ಡಿಜೆ ಹಳ್ಳಿ ಮುಖ್ಯ ರಸ್ತೆ ಬಳಿ SDPI ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಪರಸ್ಪರ ಘೋಷಣೆ ಕೂಗಿದ್ದಾರೆ.
ಮುಸ್ಲಿಂ ಸಮುದಾಯದ ಅಮಾಯಕರ ಭವಿಷ್ಯ ಹಾಳು ಮಾಡಿದವರು ಕಾಂಗ್ರೆಸ್ ಎಂದು SDPI ಕಾರ್ಯಕರ್ತರು ಘೋಷಣೆ ಹಾಕಿದ್ದಾರೆ. ಎಸ್ಡಿಪಿಐ ಕೂಗಾಟದ ಮಧ್ಯೆಯೇ ನಮಾಜ್ ಮುಗಿಸಿ ಬಂದವರ ಬಳಿ ಕಾಂಗ್ರೆಸ್ ಅಭ್ಯರ್ಥಿ ಎಸಿ ಶ್ರೀನಿವಾಸ ಮತಯಾಚನೆ ಮಾಡಿದ್ದಾರೆ. ಟ್ಯಾಗ್ ಮೊಹಲ್ಲಾ ಮಸೀದಿ ಬಳಿ BSP ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಘೋಷಣೆ ಕೂಗಿದ್ದಾರೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಳೆಯಿಂದ ಮತದಾನ ಶುರು: ಯಾರೆಲ್ಲ ಮತ ಹಾಕ್ಬಹುದು? ಇಲ್ಲಿದೆ ಮಾಹಿತಿ
ನಿಖಿಲ್ ಕುಮಾರಸ್ವಾಮಿ ಪರ ಮತಯಾಚನೆಗೆ ಇಳಿದ ಸಿಎಂ ಇಬ್ರಾಹಿಂ: ಮುಸ್ಲಿಂ ಮತಗಳು ಸೆಳೆಯಲು ರಣತಂತ್ರ
ರಾಮನಗರ: ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣಾ ರಣಕಣ ರಂಗೇರಿದೆ. ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮತಯಾಚನೆಗೆ ಮುಂದಾಗಿದ್ದು, ಮುಸ್ಲಿಂ ಮತಗಳು ಸೆಳೆಯಲು ರಣತಂತ್ರ ರೂಪಿಸಲಾಗಿದೆ. ರಾಮನಗರದಲ್ಲಿ ಹೆಚ್ಚಾಗಿ ಮುಸ್ಲಿಂ ಮತಗಳು ಇವೆ. ಕಳೆದ ಬಾರಿ ಕಾಂಗ್ರೆಸ್ಗೆ ಹೆಚ್ಚಾಗಿ ಮುಸ್ಲಿಂ ಮತಗಳು ಹೋಗಿದ್ದವು. ಈ ಹಿನ್ನೆಲೆ ಮುಸ್ಲಿಂ ಮತಗಳನ್ನ ಸೆಳೆಯಲು ಪ್ಲಾನ್ ಮಾಡಿದ್ದಾರೆ.
ಮೊದಲಿಗೆ ಹಜ್ರತ್ ಪೀರನ್ ಶಾ ವಲೀ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮುಸ್ಲಿಂ ಏರಿಯಾಗಳಲ್ಲಿ ಬೈಕ್ ರ‍್ಯಾಲಿ ಮೂಲಕ ಯಾರಬ್ ನಗರದಲ್ಲಿ ಮುಸ್ಲಿಂ ಸಮುದಾಯದ ಸಮಾವೇಶ ಮಾಡಿದರು.
ನಾಳೆಯಿಂದ ಮತದಾನ ಪ್ರಕ್ರಿಯೆ ಶುರು
ಇದೇ ಮೇ 10ರಂದು ಮತದಾನ ನಡೆಯಲಿದೆ. ಎರಡು ದಿನಗಳ ಬಳಿಕ ಅಂದರೆ ಮೇ 13 ಕ್ಕೆ ಫಲಿತಾಂಶ ಹೊರಬೀಳಲಿದೆ. ನಾಳೆಯಿಂದಲೇ ಮತದಾನ ಪ್ರಕ್ರಿಯೆ ಶುರುವಾಗಲಿದೆ. ಬ್ಯಾಲೇಟ್ ಪೇಪರ್(ballot paper) ವೋಟಿಂಗ್ ಮಾತ್ರ ಆರಂಭವಾಗಲಿದೆ.
ಇದನ್ನೂ ಓದಿ: ಸೂಕ್ಷ್ಮ ಅತಿಸೂಕ್ಷ್ಮ ಮತಗಟ್ಟೆಗಳ ಮಾಹಿತಿ ಕೇಳಿದ ಶೋಭಾ ಕರಂದ್ಲಾಜೆ ವಿರುದ್ಧ ಕ್ರಮಕ್ಕೆ ಜೆಡಿಎಸ್ ಆಗ್ರಹ
ಏಪ್ರಿಲ್ 29 ರಿಂದ ಮೇ 6 ರವರೆಗೆ ಬ್ಯಾಲೇಟ್ ಮತದಾನಕ್ಕೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಲಾಗಿದ್ದು, 80 ವರ್ಷ ಮೇಲ್ಪಟ್ಟ ವೃದ್ಧರು ವಿಕಲಚೇತನರಿಗೆ ಹಾಗೂ ಚುನಾವಣೆಯ ಕರ್ತವ್ಯದಲ್ಲಿ ಭಾಗಿಯಾಗುವ ಪೊಲೀಸ್, ಚುನಾವಣೆ ಸಿಬ್ಬಂದಿ ಮಾತ್ರ ಮತದಾನ ಮಾಡಬಹುದು. ಇನ್ನುಳಿದವರು ಮೇ 10ರಂದೇ ಮತಗಟ್ಟೆಗೆ ಹೋಗಿ ಮತದಾನ ಮಾಡಬೇಕು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:13 pm, Fri, 28 April 23